ದುಬೈ:ಡಿ .ಕೆ .ಎಸ್. ಸಿ  ಅಲ್ ಜೆದ್ದಾಪ್ ಯುನಿಟ್ ಅಧ್ಯಕ್ಷರಾಗಿ ಜನಾಬ್.ಅಶ್ರಫ್ ಉಳ್ಳಾಲ್ ಆಯ್ಕೆ.

Source: yusuf arlapadavu | By Arshad Koppa | Published on 20th February 2017, 7:51 AM | Gulf News |

ದುಬೈ  : ದಕ್ಷಿಣ ಕರ್ಣಾಟಕ ಸುನ್ನಿ ಸೆಂಟರ್ ಯು.ಎ.ಇ ರಾಷ್ಟೀಯ ಸಮಿತಿ ಅದೀನದಲ್ಲಿ ಕಾರ್ಯಚರಿಸುತ್ತಿರುವ ಅಲ್ ಜೆದ್ದಾಪ್  ಯುನಿಟ್ ಇದರ  ಮಹಾಸಭೆ ಯು ಜನಾಬ್.ಹನೀಫ್ ಹಾಜಿ ಬೆಂಗ್ರೆ  ರವರ ಅಧ್ಯಕ್ಷತೆಯಲ್ಲಿ  ಸಯ್ಯದ್ ತ್ವಾಹ ಭಾಪಕಿ ತಂಘಳ್ ರವರ ನೇತೃತ್ವದಲ್ಲಿ ಅಸ್ಮಾಹುಲ್ ಉಸ್ನಾ ದಿಕ್ರ್ ಮಜ್ಲಿಸ್ ನೊಂದಿಗೆ ನಡೆಯಿತು. ಸಭೆಯಲ್ಲಿ  ರಾಷ್ಟೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಎಸ್.ಯೂಸುಫ್ ಅರ್ಲಪದವು ರವರು ಸೂಕ್ತ ಸಲಹೆ ಹಾಗೂ ಸಂಘಟನೆ ಯ ಬಗ್ಗೆ ವಿವರಿಸಿದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಇ.ಕೆ ಇಬ್ರಾಹಿಂ ರವರು  ಚುನಾವಣಾದಿಕಾರಿಯಾಗಿ 2017-18 ರ ಸಾಲಿನ ನೂತನ ಸಮಿತಿಯನ್ನು ರಚಿಸಿದರು. ನೂತನ ಸಮಿತಿಗೆ ರಾಷ್ಟೀಯ ಸಮಿತಿ ನಾಯಕರಾದ ಹಾಜಿ.ಅಬ್ದುಲ್ಲಾ ಬೀಜಾಡಿ ಶುಭ ಹಾರೈಸಿದರು. ಸಭೆಯಲ್ಲಿ ರಾಷ್ಟೀಯ ಸಮಿತಿ ನಾಯಕರಾದ  ಬಹ್ರುದ್ದೀನ್ ಅರಂತೋಡು , ಅಬ್ಬಾಸ್ ಪಾಣಾಜೆ, ಅಮಾನುಲ್ಲಾ ಕುಂದಾಪುರ ರವರು ಉಪಸ್ಥಿತರಿದ್ದು     ಸಹಬಾಜ್ ಸ್ವಾಗತಿಸಿ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿ ಅಶ್ರಫ್ ಕಾನ  ಧನ್ಯವಾದ ಸಮರ್ಪಿಸಿದರು.

2017 - 18 ರ ಸಾಲಿನ ನೂತನ ಸಮಿತಿ

ಗೌರವಾಧ್ಯಕ್ಷರು: ಜನಾಬ್.ಹನೀಫ್ ಹಾಜಿ ಬೆಂಗ್ರೆ

ಅಧ್ಯಕ್ಷರು : ಜನಾಬ್.ಅಶ್ರಫ್ ಉಳ್ಳಾಲ

ಉಪಾದ್ಯಕ್ಷರು : ಜನಾಬ್.ಹುಸೈನ್ ಹಾಜಿ ಬೆಂಗ್ರೆ  , ಜನಾಬ್.ಹನೀಫ್ ಬಜ್ಪೆ , ಕೋಯಾಕ ಬೆಂಗ್ರೆ

ಪ್ರಧಾನ ಕಾರ್ಯದರ್ಶಿ : ಜನಾಬ್.ಅಶ್ರಪ್ ಕಾನ

ಜೊತೆ ಕಾರ್ಯದರ್ಶಿ : ಜನಾಬ್.ಫೈಜಲ್ ಬಿ.ಎಂ , ಜನಾಬ್.ಇಬ್ರಾಹಿಂ ಮಂಜನಾಡಿ, ಉಸ್ಮಾನ್ ಬಾವ

ಕೋಶಾಧಿಕಾರಿ : ಜನಾಬ್.ಅಬ್ದುಲ್ ರಹಿಮಾನ್ ಬಾಳೆಪುಣಿ

ಲೆಕ್ಕ ಪರಿಶೋದಕರು : ಜನಾಬ್.ಅನ್ಸಾರ್ ಮಲ್ಲೂರ್

ಸಂಚಾಲಕರು : ಜನಾಬ್.ಅಬ್ಬಾಸ್ ಬೆಂಗ್ರೆ  ,ಜನಾಬ್.ಬಾವ ಬೆಂಗ್ರೆ , ಜನಾಬ್.ರಫೀಕ್ ಮಲ್ಲೂರು

ಹಾಗೂ ಸದಸ್ಯರನ್ನು ನೇಮಕ ಮಾಡಲಾಯಿತು.ಜನಾಬ್.ಅಶ್ರಫ್ ಉಳ್ಳಾಲ


ಜನಾಬ್.ಅಶ್ರಪ್ ಕಾನ


ಜನಾಬ್.ಅಬ್ದುಲ್ ರಹಿಮಾನ್ ಬಾಳೆಪುಣಿ

Read These Next