ದುಬೈ: ಡಿ.ಕೆ.ಎಸ್.ಸಿ 20 ನೇ  ವಾರ್ಷಿಕ ಸಮ್ಮೇಳನ-ಯು.ಎ.ಇ ಯಲ್ಲಿ ಅ. 28 ರಿಂದ ನ. 25 ರವರೆಗೆ ಪ್ರಚಾರ ಆಂದೋಲನ. 

Source: yusuf arlapadavu | By Arshad Koppa | Published on 26th October 2016, 8:09 PM | Gulf News |

ಡಿ. 2,3,4 ರಂದು ಮೂಳೂರಿನಲ್ಲಿ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ಡಿ.ಕೆ.ಎಸ್.ಸಿ) ಇದರ  20 ನೇ  ವಾರ್ಷಿಕ ಸಮ್ಮೇಳನ. ಯು.ಎ.ಇ ಯಲ್ಲಿ ಅ. 28 ರಿಂದ ನ. 25 ರವರೆಗೆ  ಇದರ ಪ್ರಚಾರ ಆಂದೋಲನ. 
 
ದುಬೈ.  ಗಲ್ಫ್  ಪ್ರವಾಸಿ ಗಳ ಬ್ರಹತ್  ಸುನ್ನಿ ಸಂಘಟನೆ  ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ಡಿ.ಕೆ.ಎಸ್.ಸಿ) ಇದರ ಅಧೀನದಲ್ಲಿ  ಉಡುಪಿ ಜಿಲ್ಲೆಯ ಮೂಳೂರಿನಲ್ಲಿ   " ಅಲ್ ಇಹ್ಸಾನ್ ಎಜುಕೇಷನ್ ಸೆಂಟರ್ " ಎಂಬ  ಬ್ರಹತ್ತಾದ ಧಾರ್ಮಿಕ ಹಾಗು  ಶ್ಯಕ್ಷಣಿಕ  ಸ್ಥಾಪನೆ ಯು  ಅನಾಥಾಲಯ, ವಸತಿ ಶಾಲೆ, ಶರೀಅತ್ ಕಾಲೇಜು, ಹಿಫ್ಲುಲ್ ಕುರ್ಆನ್ ಕಾಲೇಜು, ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಶಾಲೆ, ನರ್ಸರಿ, ಪ್ರಾಥಮಿಕ ಮತ್ತು ಪ್ರೌಢಶಾಲೆ, ಮಹಿಳಾ ಕಾಲೇಜುಗಳು ಕಾರ್ಯಾಚರಿಸುತ್ತಿವೆ.  ಈಗ ಸಂಘಟನೆ ಯು 20 ಸಂವತ್ಸರವನ್ನು ಪೂರ್ತಿಗರಿಸಿದ ಸಂತೋಷದಲ್ಲಿ ಡಿ.ಕೆ.ಎಸ್.ಸಿ ಯ ಪ್ರವರ್ತಕರು. ಇದರ ಅಂಗವಾಗಿ 20 ನೇ ವಾರ್ಷಿಕ ಸಮ್ಮೇಳನವನ್ನು   ತಾಯ್ನಾಡಿನಲ್ಲಿ  ಸಮುದಾಯದ ಅಭಿವೃದ್ಧಿಗೆ 20 ಅಂಶಗಳ ವಿವಿಧ ಜನೋಪಯೋಗಿ  ಅಭಿವೃದ್ಧಿ ಕಾರ್ಯಕ್ರಮ ಗಳೊಂದಿಗೆ ನಡೆಸುವ ಸಂಭ್ರಮ. ಈಗಾಗಲೇ  ಕಾರ್ಯಕ್ರಮವು  ಸ್ವಾಗತ ಸಮಿತಿ ಅಧ್ಯಕ್ಷರಾದ ಬಿ.ಎಂ.ಮಮ್ತಾಜ್ ಅಲಿ ರವರ ಸಾರತ್ವದಲ್ಲಿ  ಸಮ್ಮೇಳನದ    ಉದ್ಘಾಟನೆ ಯು    ಸಂಸ್ಥೆಯ ಅಧ್ಯಕ್ಷ ರಾದ ಕೆ.ಎಸ್.ಆಟಕೋಯ ತಂಙಳ್ ಕುಂಬೋಲ್ ರವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖ ಅಹ್ಮದ್ ಮುಸ್ಲಿಮಾರ್, ಉಡುಪಿ ಜಿಲ್ಲಾ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಸೇರಿದಂತೆ ಧಾರ್ಮಿಕ, ಸಾಮಾಜಿಕ ಗಣ್ಯರ ಉಪಸ್ಥಿತಿಯಲ್ಲಿ ಮಂಗಳೂರಿನ ಪುರಭವನದಲ್ಲಿ ವಿಜೃಂಭಣೆಯಿಂದ ನಡೆದಿರುತ್ತದೆ. ಈ ಕಾರ್ಯಕ್ರವಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಹೊಲಿಗೆ ಯಂತ್ರ , ಆರ್ಥಿಕವಾಗಿ ಹಿಂದುಳಿದ ವರಿಗೆ ಸಣ್ಣ ವ್ಯಾಪಾರ ನಡೆಸಲು ತಳ್ಳುವ ಗಾಡಿ, ಒಂದೇ ಮಸೀದಿಯಲ್ಲಿ 20 ವರ್ಷಗಳಿಕ್ಕಿಂತಲೂ ಮೇಲ್ಪಟ್ಟು ಸೇವೆಗೈದ ಮುದರ್ರಿಸ್ / ಖತೀಬ್ / ಸದರ್ / ಮುಅಲ್ಲಿಂ / ಮುಅಝ್ಹಿನ್ ರವರಿಗೆ  ಸನ್ಮಾನ, ಕನಿಷ್ಠ 20 ವರ್ಷಗಳಿಂದ ಸೇವೆಗೈಯ್ಯುತ್ತಿರುವ ಧಾರ್ಮಿಕ / ಲೌಕಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರಶಸ್ತಿ ಅಲ್ಲದೆ ಶಾಂತಿ ಮತ್ತು ಸೌಹಾರ್ದತೆ ಯಿಂದ ಸಾಮಾಜಿಕ ವಾಗಿ ಸೇವೆ ನೀಡುತ್ತಿರುವ ಮುಸ್ಲಿಂ , ಹಿಂದೂ ಮತ್ತು ಕ್ರ್ಯೆಸ್ತ ಸಹೋದರರರಿಗೆ "ಡಿ.ಕೆ.ಎಸ್.ಸಿ  ಸದ್ಭಾವನಾ ಪ್ರಶಸ್ತಿ" ಹಾಗೂ ಪ್ರತಿಷ್ಠಿತ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಮಾಜಿ ಸಚಿವ ಅಲ್ ಹಾಜ್ ಬಿ.ಎ.ಮೊಹಿದಿನ್ ರವರಿಗೆ "ಡಿ.ಕೆ.ಎಸ್.ಸಿ. ಜೀವಮಾನ ಸಾಧನಾ ಪ್ರಶಸ್ತಿ" ನೀಡಿ ಗೌರವಿಸಲಾಗಿದೆ.
ಡಿ.2, 3 ಮತ್ತು 4ರಂದು ಮೂಳೂರಿನ ಮರ್ಕಝ್ ಕ್ಯಾಂಪಸ್ ನಲ್ಲಿ  ಸಮಾರೋಪ ಸಮಾರಂಭ  ನಡೆಯಲಿದೆ. ಈ ಮಹತ್ತಾದ ಸಮಾರಂಭದಲ್ಲಿ ಸಾದಾತುಗಳು, ಉಲಮಾಗಳು , ರಾಜಕೀಯ ನೇತಾರರು, ಉಮರಾಗಲು ಭಾಗವಹಿಸಲಿದ್ದು ಡಿ. 4 ರಂದು ನಡೆಯುವ ಕಾರ್ಯಕ್ರಮದಲ್ಲಿ 20 ಜೋಡಿ  ಬಡ ಕುಟುಂಬಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ್ದು, ವಧುವಿಗೆ ಎಂಟು ಪವನ್ ಚಿನ್ನ ಹಾಗೂ ಇತರ ಖರ್ಚಿಗಾಗಿ 50 ಸಾವಿರ ರೂ., ವರನಿಗೆ ವಧುದಕ್ಷಿಣೆ ಮತ್ತಿತರ ಖರ್ಚುಗಳಿಗಾಗಿ 50 ಸಾವಿರ ರೂ. ನೀಡಿ ನಡೆಸಲಿರುವುದು. ಸಮಾರೋಪ ಸಮಾರಂಭ ಹಾಗೂ 20 ನೇ  ವಾರ್ಷಿಕ ಸಮ್ಮೇಳನ ಇದನ್ನು  ಯು.ಎ.ಇ ವಿವಿಧ ಕಡೆಗಳಲ್ಲಿ ಪ್ರಚಾರ ಪಡಿಸುವರೇ ಜನಾಬ್.ಹಾಜಿ .ಮೊಯಿದ್ದೀನ್ ಕುಟ್ಟಿ ಕಕ್ಕಿಂಜೆ ಯವರ ಅಧ್ಯಕ್ಷತೆಯಲ್ಲಿ ಕಮಿಟಿಯನ್ನು ರಚಿಸಲಾಗಿದ್ದು ವಿವಿಧ ಕಡೆಗಳಲ್ಲಿ ಅಕ್ಟೊಬರ್ 28 ರಿಂದ ನವಂಬರ್ 25 ರವರೆಗೆ ನಡೆಯಲಿರುವ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಡಿ,ಕೆ.ಎಸ್.ಸಿ. ಯ ಪ್ರವರ್ತಕರು ಹಿತೈಷಿಗಳು ಸಹಕರಿಸುವಂತೆ ಡಿ.ಕೆ.ಎಸ್.ಸಿ.ಯು.ಎ.ಇ ರಾಷ್ಟೀಯ ಸಮಿತಿ ಅಧ್ಯಕ್ಸರಾದ ಜನಾಬ್.ಹುಸೈನ್ ಹಾಜಿ ಕಿನ್ಯ ರವರು ವಿನಂತಿಸಿರುತ್ತಾರೆ.  
ವರದಿ : ಎಸ್.ಯೂಸುಫ್ ಅರ್ಲಪದವು  
 

Read These Next