ದುಬೈ: ಜ 27ರಿಂದ ಭಟ್ಕಳ ಪ್ರೀಮಿಯರ್ ಲೀಗ್ ಕ್ರಿಕೆಟ್ ಪ್ರಾರಂಭ

Source: so english | By Arshad Koppa | Published on 23rd September 2016, 1:15 PM | Sports News |

ದುಬೈ, ಸೆ 23: ಆರನೆಯ ಆವೃತ್ತಿಯ ಬಿಪಿಎಲ್ 2017 (Bhatkal Premier League (BPL) ಟಿ ಟ್ವೆಂಟಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಜನವರಿ 27ರಂದು ಪ್ರಾರಂಭಿಸಲಾಗುವುದು. ಈ ಪಂದ್ಯಾವಳಿ ಒಟ್ಟು ಐದು ದಿನಗಳ ಕಾಲ ನಡೆಯಲಿದ್ದು ಫೈನಲ್ ಫೆ. 24 ರಂದು ನಡೆಯಲಿದೆ. ಈ ಎಲ್ಲಾ ಪಂದ್ಯಗಳು ಓವಲ್ ಫೈರ್ ಗ್ರೌಂಡ್ ಅಜ್ಮಾನ್ ನಲ್ಲಿ ನಡೆಯಲಿವೆ. ಈ ಸ್ಥಳದಲ್ಲಿ ಇದು ಎರಡನೆಯ ಬಾರಿ ನಡೆಯುತ್ತಿದೆ. 

ಹಿಂದಿನ ವರ್ಷದ ನಾಲ್ಕು ತಂಡಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದ್ದು ಇತರ ತಂಡಗಳ ಆಯ್ಕೆ ಇನ್ನಷ್ಟೇ ನಡೆಯಬೇಕಾಗಿದೆ. ಹೊಸ ತಂಡಗಳು ನವೆಂಬರ್ ನಾಲ್ಕರಿಂದ ನೋಂದಾಯಿಸಿಕೊಳ್ಳಬಹುದು. ಕಡೆಯ ದಿನಾಂಕ ನವೆಂಬರ್ 25. ಈ ವಿಷಯಗಳನ್ನು ಬಿಪಿಎಲ್ ಚೇರ್ಮನ್ನರಾದ ಅತೀಖುರ್ ರಹ್ಮಾನ್ ಮುನೀರಿಯವರು ಭಟ್ಕಳದ ರಾಯಲ್ ಓಕ್ ಹೋಟೆಲಿನಲ್ಲಿ ನಡೆದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. 

ಹಿಂದಿನ ಪಂದ್ಯಾವಳಿಗಳು ಅತ್ಯಂತ ರೋಚಕವಾದಿದ್ದು ಈ ವರ್ಷದ ಪಂದ್ಯಾವಳಿಯನ್ನು ಇನ್ನಷ್ಟು ರೋಚಕವಾಗಿಸಲು ಸಿದ್ದತೆಗಳು ನಡೆಯುತ್ತಿವೆ. ಈ ಪಂದ್ಯಗಳಲ್ಲಿ ಭಾಗವಹಿಸಲು ಇಡಿಯ ಯು.ಎ.ಇ.ಯಲ್ಲಿ ಉದ್ಯೋಗದಲ್ಲಿರುವ ಭಟ್ಕಳದ ಯುವಜನತೆ ಉತ್ಸುಕತೆ ತೋರುತ್ತಿದೆ ಎಂದು ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಭಟ್ಕಳ ಮುಸ್ಲಿಂ ಯೂಥ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಇರ್ಫಾನ್ ಎಸ್. ಎಂ. ನದ್ವಿ. ತಾಹಾ ಮುಅಲ್ಲಿಮ್, ಇರ್ಶಾದ್ ರುಕ್ನುದ್ದೀನ್, ಮೊಹಮ್ಮದ್ ಇಮ್ರಾನ್ ಖತೀಬ್, ಅಬ್ದುಲ್ ಬಾಸಿತ್ ಸುಬೇದಾರ್, ಫೈಯಾಜ಼್ ಉದ್ಯಾವರ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. 

Read These Next

ಹ್ಯಾಮರ್ ಥ್ರೋ; ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಭಟ್ಕಳ: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಬುಧವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ನಲ್ಲಿ ...

ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಕರೆ

ಭಟ್ಕಳ:  ವಿದ್ಯಾರ್ಥಿಗಳು  ಪಟ್ಯಪುಸ್ತಕದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ...