ದುಬೈ: ಅಕ್ಟೋಬರ್ 28ಕ್ಕೆ  ಬಿಎಂಜೆ ವಾರ್ಷಿಕ ಕೂಟ - ಮಹಿಳೆಯರಿಗಾಗಿ ಅ 7ರಂದು ವಿವಿಧ ಸ್ಪರ್ಧೆಗಳು

Source: so english | By Arshad Koppa | Published on 21st September 2016, 8:38 AM | Gulf News |

ದುಬೈ, ಸೆ ೨೦: ಭಟ್ಕಳ್ ಮುಸ್ಲಿಂ ಗೆಟ್ ಟುಗೆದರ್ ಎಂಬ ಕಾರ್ಯಕ್ರಮವನ್ನು ಭಟ್ಕಳ ಮುಸ್ಲಿಂ ಜಮಾತ್- ಬಿಎಂಜೆ ಅ. ೨೮ ರಂದು ಆಯೋಜಿಸಿದ್ದು ಶಾರ್ಜಾದಲ್ಲಿರುವ ಅಲ್ ಬೂಂ ಟೂರಿಸ್ಟ್ ವಿಲೇಜ್ ಸಭಾಂಗಣದಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು. ಮಹಿಳೆಯರಿಗಾಗಿ ವಿವಿದ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಅ ೭ ರಂದು ಟ್ವಿಟ್ ಟವರ್ ಪಾರ್ಟಿ ಹಾಲ್ ನಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಸದಸ್ಯ ಮಹಿಳೆಯರು ತಮ್ಮ ಹೆಸರುಗಳನ್ನು ಸೆ ೨೦ ರ ರಾತ್ರಿ ಹತ್ತರ ಒಳಗೆ ಸಮೂದಿಸಲು ಕೋರಲಾಗಿದೆ.

ಸಂಘಟನೆಯ ಪ್ರವರ್ತಕರಾದ ಮುಯೀಜ್ ಮುಅಲ್ಲಿಮ್ ರವರು ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುತ್ತಾ, ಈ ಸ್ಪರ್ಧೆಯಲ್ಲಿ ಅಡುಗೆ, ಕೇಕ್ ಅಲಂಕಾರ, ಬೆಂಕಿ ಇಲ್ಲದೇ ಮಾಡುವ ಅಡುಗೆ, ಹಣ್ಣುಗಳ ಅಲಂಕಾರ ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಇದರೊಂದಿಗೆ ಫ್ಯಾನ್ಸಿ ಡ್ರೆಸ್, ಇಂಗ್ಲಿಷ್, ಉರ್ದು ಮತ್ತು ಅರೇಬಿಕ್ ಹಾಡುಗಾರಿಕೆ ಸಹಾ ಇರಲಿದೆ ಎಂದು ತಿಳಿದ್ದಾರೆ. ಸ್ಪರ್ದಿಗಳು 04-2259442 ಅಥವಾ ಮೊಬೈಲ್ : 056-2259683 ಅಥವಾ ಈ ಮೇಲ್ [email protected] ಮೂಲಕ ಸಂಪರ್ಕಿಸುವಂತೆ ಕೋರಿದ್ದಾರೆ. 

ಕಾರ್ಯಕ್ರಮಕ್ಕಾಗಿ ಸಿದ್ದತೆಗಳು ಭರದಿಂದ ನಡೆದಿವೆ. ಈ ಕಾರ್ಯಕ್ರಮದ ಮೂಲಕ ಸದಸ್ಯರಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತರುವುದು ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ ಹಾಗೂ ಸಂಘಟನೆಯ ಬಲವರ್ಧನೆಗೂ ನೆರವಾಗಲಿದೆ ಎಂದು ಅವರು ತಿಳಿಸಿದರು.  

ಈ ಕಾರ್ಯಕ್ರಮ ಸಂಜೆ ನಾಲ್ಕರಿಂದ ಮಧ್ಯರಾತ್ರಿ ಹನ್ನೆರಡವರೆಗೆ ನಡೆಯಲಿದೆ.

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.