ದುಬೈ: ಜ 27ರಂದು “ಬ್ಯಾರೀಸ್ ಕಲ್ಚರಲ್ ಫೋರಮ್ ಸ್ಪೋರ್ಟ್ಸ್ ಮೀಟ್ 2017” 

Source: bcf | By Arshad Koppa | Published on 23rd January 2017, 2:11 AM | Gulf News | Special Report |

ಬ್ಯಾರೀಸ್ ಕಲ್ಚರಲ್ ಫೋರಮ್ ( BCF) ದುಬೈ ವತಿಯಿಂದ ನಡೆಯುವ ಬಹು ನಿರೀಕ್ಷಿತ BCF ವಾರ್ಷಿಕ ಕ್ರೀಡಾ ಕೂಟ  “ಬ್ಯಾರೀಸ್ ಕಲ್ಚರಲ್ ಫೋರಮ್ ಸ್ಪೋರ್ಟ್ಸ್ ಮೀಟ್ 2017” ಇದೇ ಬರುವ ದಿನಾಂಕ 27/೦1/2017 ನೇ ಶುಕ್ರವಾರ UAE ಯ ಅಜ್ಮಾನಿನ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಕ್ರೀಡಾಂಗಣದಲ್ಲಿ ನೆರವೇರಲಿರುವುದಾಗಿ BCF ಸ್ಪೋರ್ಟ್ಸ್ ಸಮಿತಿ ಪ್ರಕಟಿಸಿದೆ. 

UAE ಆದ್ಯಂತ ಹಾಗೂ ಇತರ ಗಲ್ಫ್  ದೇಶಗಳಿಂದ ಸುಮಾರು 1000 ಕನ್ನಡ ಕನ್ನಡೇತರ ಭಾಂದವರು ಪಾಲ್ಗೊಳ್ಳುವ ನಿರೀಕ್ಷೆ ಇರುವ ಈ ಕ್ರೀಡಾ ಕೂಟದಲ್ಲಿ ಮಹನೀಯರು, ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ರೀತಿಯ ಹಲವು ಕ್ರೀಡೆಗಳು ಹಾಗೂ ಆಟೋಟ ಸ್ಪರ್ಧೆಗಳು ಏರ್ಪಡಿಸಲಾಗುವುದು.
ಕ್ರಿಕೆಟ್, ವಾಲಿ ಬಾಲ್, ಫುಟ್ಬಾಲ್, ಕಬಡ್ಡಿ, ಥ್ರೋ ಬಾಲ್, ಹಗ್ಗ ಜಗ್ಗಾಟ ,ಬ್ಯಾಡ್ಮಿಂಟನ್, ಬಿಲಿಯರ್ಡ್, ಫುಟ್ಬಾಲ್,  ರೇಸ್, ರಿಲೇ, ಮಹಿಳೆಯರಿಗಾಗಿ,  ಪಾಕ ಸ್ಪರ್ಧೆ, ಮೆಹಂದಿ, ಮೊದಲಾದ ಹಲವಾರು ಸ್ಪೆರ್ಧೆಗಳಲ್ಲದೆ ಮಕ್ಕಳಿಗಾಗಿ ವಿಶೇಷವಾದ ಕ್ರೀಡೆಗಳನ್ನು ಆಯೋಜಿಸಲಾಡಿದೆ.
ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು  BCF  ಅಧ್ಯಕ್ಷರಾದ  ಡಾ  B K Yusuf ರವರು ವಹಿಸಲಿದ್ದು ಅಂದಿನ ವಿಶೇಷ ಅತಿಥಿಯಾಗಿ BCF ಫೌಂಡರ್ ಪೇಟ್ರನ್ ಡಾ.ತುಂಬೆ ಮೊಇದೀನ್, ಚಯರ್ಮನ್, ತುಂಬೆ ಗ್ರೂಪ್,  ಭಾಗವಹಿಸಲಿದ್ದಾರೆ. 
BCF ಪ್ರಧಾನ ಸಲಹೆಗಾರ ಜ: ಝಫ್ರುಲ್ಲಾ ಖಾನ್, ಚಯರ್ಮನ್ Zain  International Group ಹಾಗೂ ಇನ್ನೋರ್ವ BCF ಗೌ. ಸಲಹೆಗಾರ ಜ: ಫತಾವುಲ್ಲಾ ಸಾಹೇಬ್ ತೋನ್ಸೆ, ಮ್ಯಾನೇಜಿಂಗ್ ಡೈರೆಕ್ಟರ್ Barsha  Group  of  Companies  ಅಂದಿನ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿಶೇಷ ಆಕರ್ಷಣೆಯಾಗಿ ಹಲವಾರು ಆಕರ್ಷಕ ರಾಫೆಲ್ ಡ್ರಾ ಬಹುಮಾನ ಗಳನ್ನೂ ಗೆಲ್ಲುವ ಅವಕಾಸಹವಿದೆ. 
ಮಧ್ಯಾಹ್ನದ ಭೋಜನದ ವ್ಯವಸ್ಥೆ ಯನ್ನು ಮಾಡಲಾಗಿದೆ ಹಾಗೂ ಚಾ ಕಾಫಿ ಮತ್ತು ಜ್ಯೂಸ್ ಮತ್ತು ತಿಂಡಿ ತಿನಸಿನ ವ್ಯವಸ್ಥೆಯನ್ನೂ ಮಾಡಲಾಗುವುದು.

ಸ್ಪರ್ಧೆಯ ವಿವರಗಳು ಮತ್ತು ಸಂಪರ್ಕಿಸ ಬೇಕಾದ ಮೊಬೈಲ್  ನಂಬರ್ ಗಳು

Read These Next

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದಾಗಿ ಭಟ್ಕಳದಿಂದ ಕಾಲು ಕೀಳಲು ಸಿದ್ಧವಾಗಿರುವ ದೂರದರ್ಶನ ಕೇಂದ್ರ..?

ಭಟ್ಕಳ: ಪ್ರಸಕ್ತ ಕಾಲಘಟ್ಟದಲ್ಲಿ ಭಟ್ಕಳ ಎಂಬ ಪುಟ್ಟ ಊರು ಬೆಳೆದು ನಿಂತಿದೆ. ಅಂತರಾಷ್ಟ್ರೀಯ ಆವಿಷ್ಕಾರಗಳನ್ನು ಕಾಣುವ ತವಕ ...

ಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರ

ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಬೆಳವಣಿಗೆಗಳು ಕೇಂದ್ರದಲ್ಲಿ ಹಾಲೀ ಅಧಿಕಾರದಲ್ಲಿರುವ ಪಕ್ಷದ ಆಳ್ವಿಕೆಯ ವಿರುದ್ಧ ...

ಹವಾಮಾನ ಬದಲಾವಣೆ ಮತ್ತು ಬಡವರು

ಹವಾಮಾನ ಬದಲಾವಣೆಯು ಒಂದು ತುರ್ತುಸ್ಥಿತಿಯನ್ನೇ ಸೃಷ್ಟಿಸಿದ್ದು ಈ ಭೂಮಿಗೆ ಮತ್ತು ಇದರ ಮೇಲೆ ವಾಸಿಸುತ್ತಿರುವ ಮಾನವ, ಸಸ್ಯ ಮತ್ತು ...

ಸಾವಿನ ಕೂಪ ದ ಲ್ಲಿ ಗಣಿಗಾರಿಕೆ

ಮೇಘಾಲಯದಲ್ಲಿ ಇತ್ತೀಚೆಗೆ ಸಂಭವಿಸಿದ ಗಣಿಕಾರ್ಮಿಕರ ಸಾವುಗಳು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆಯ ಪ್ರತಿಪಾದಕರಿಗೆ ನಾಚಿಕೆ ...