ದುಬೈ: ಬೃಹತ್ BCF ಜಾಗತಿಕ ಬ್ಯಾರಿ ಸಮಾವೇಶ 2017 ಮತ್ತು ಬ್ಯಾರಿ ವಸ್ತು ಪ್ರದರ್ಶನ  

Source: bcf | By Arshad Koppa | Published on 4th April 2017, 11:35 PM | Gulf News | Special Report |

ಬ್ಯಾರಿ ಸಮುದಾಯದ ಪ್ರತಿಷ್ಠಿತ ಅನಿವಾಸಿ ಸಮಾಜ ಸೇವಾ ಸಂಸ್ಥೆಯಾದ ಬ್ಯಾರೀಸ್ ಕಲ್ಚರಲ್ ಫೋರಮ್ ( BCF ) ಮತ್ತು  ಕರ್ನಾಟಕದಲ್ಲಿ ಅಧಿಕೃತವಾಗಿ ನೋಂದಾಯಿಸಲ್ಪಟ್ಟ ಬ್ಯಾರೀಸ್ ಕಲ್ಚರಲ್ ಫೋರಮ್ ಟ್ರಸ್ಟ್ ( ರಿ )  ಇದರ ವತಿಯಿಂದ ಇದೆ ಬರುವ ದಿನಾಂಕ 5 .5 .2017  ನೇ ಶುಕ್ರವಾರ ದುಬೈಯ ಹೆಸರಾಂತ ಪಂಚತಾರಾ ಹೋಟೆಲ್ ಲೀ ಮೆರಿಡಿಯನ್ ನ ಗ್ರೇಟ್ ಬಾಲ್ ರೂಮ್  ಸಭಾಂಗಣದಲ್ಲಿ ಅಭೂತ ಪೂರ್ವವಾದ ವೈಭವೋಚಿತ ಜಾಗತಿಕ ಬ್ಯಾರಿ ಸಾಂಸ್ಕೃತಿಕ ಸಮಾವೇಶ ಮತ್ತು ಬ್ಯಾರಿ ಸಾಮುದಾಯಿಕ ವಸ್ತು ಪ್ರದರ್ಶನವನ್ನು  ಏರ್ಪಡಿಸಲಾಗೂದೆಂದು BCF ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


BCF ಅಧ್ಯಕ್ಷರಾದ ಡಾ B K ಯೂಸುಫ್ ರವರ ಅಧ್ಯಕ್ಷತೆಯಲ್ಲಿ ನಡೆಯುವ, ಬ್ಯಾರಿ ಸಮುದಾಯದ ಶ್ರೀಮಂತ ವೈವಿಧ್ಯಮಯ ಸಂಸ್ಕೃತಿ, ಕಲೆ ಮತ್ತು ಚರಿತ್ರೆಯನ್ನು ಅನಾವರಣಗೊಳಿಸುವ ಮತ್ತು ಕರ್ನಾಟಕದ ಇತರ ಸಂಸ್ಕೃತಿಯ ಕಲಾ ವೈಭವವನ್ನು ಬಿಂಬಿಸುವ ಈ ಅಮೋಘವಾದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಸ್ತು ಪ್ರದರ್ಶನದಲ್ಲಿ ಸುಮಾರು 1000  ರಷ್ಟು ಕನ್ನಡಿಗ ಕನ್ನಡೇತರ ಭಾಂದವರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು  ಬಹುತೇಕ ಎಲ್ಲ ಗಲ್ಫ್  ರಾಷ್ಟ್ರ್ರಗಳ ಆಹ್ವಾನಿತರು ಮತ್ತು ಕರ್ನಾಟಕದಿಂದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮತ್ತು ಕಲಾ ಕ್ಷೇತ್ರದಿಂದ ಹಲವಾರು ಗಣ್ಯಾತಿಗಣ್ಯ ನಾಯಕರುಗಳು, ವಿವಿಧ ರಂಗಗಳಲ್ಲಿ ವಿಶೇಷ ಸಾಧನೆ ಮಾಡಿ ಸಮಾಜದ ಬೆಳವಣಿಗೆಯಲ್ಲಿ ಗಣನೀಯ ಸೇವೆಸಲ್ಲಿಸಿದ ಹಲವಾರು ಗಣ್ಯರು ಈ ಸಮಾವೇಶದಲ್ಲಿ ಭಾಗವಹಿಸುವರೆಂದೂ ತಿಳಿಸಲಾಯಿತು.
ಈ ಸಂಧರ್ಭದಲ್ಲಿ  ಸಮಾಜದ, ದೇಶದ, ರಾಜ್ಯದ ಏಳಿಗೆಗೆ ತಮ್ಮ ಗಣನೀಯ ಸೇವೆ ನೀಡಿದ ಹಲವಾರು ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು. ಮಾಜಿ ಮುಖ್ಯ ಮಂತ್ರಿ ಹಾಗೂ JDS ಅಧ್ಯಕ್ಡ್ಶ ಶ್ರೀ ಕುಮಾರ ಸ್ವಾಮಿ, ಕರ್ನಾಟಕದ ಹಲವಾರು ಮಂತ್ರಿಗಳು, ಶಾಸಕರುಗಳ ಸಮೇತ ಹಲವಾರು ಗಣ್ಯರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ವೈವಿಧ್ಯಮಯ ಸಾಂಸ್ಕೃತಿಕ ವೈಭವನ್ನು ಅನಾವರಣ ಗೊಳಿಸಲಾಗುವುದು. 
ಮಧ್ಯಾಹ್ನ ೨ ಗಂಟೆಗೆ ಪ್ರಾರಂಭವಾಗಿ ರಾತ್ರಿ 11 .30  ಕ್ಕೆ ಅಂತ್ಯಗೊಳ್ಳುವ ಈ ಕಾರ್ಯಕ್ರಮದಲ್ಲಿ ರಾತ್ರಿ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. 
BCF ಅಧ್ಯಕ್ಷರಾದ ಡಾ B K ಯೂಸುಫ್, BCF ಜಾಗತಿಕ ಬ್ಯಾರಿ ಸಮಾವೇಶದ  ಛೇರ್ಮನ್ ಜ:ಅಬ್ದುಲ್ ಲತೀಫ್ ಮುಲ್ಕಿ , ಉಪಾಧ್ಯಕ್ಷರಾದ ಜ : ಎಂ ಈ ಮೂಳೂರು, ಜ: ಅಫೀಕ್ ಹುಸೈನ್, ಜ : ಅಮೀರುದ್ದೀನ್ S I .,ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮಹಮದ್, ಸಾಂಸ್ಕೃರಿಕ ಕಾರ್ಯಕ್ರಮದ ಉಸ್ತುವಾರಿ ಜ: M B ಅಕ್ಬರ್, ಜೊತೆ ಉಸ್ತುವಾರಿ ಜ: ಉಸ್ಮಾನ್ ಮೂಳೂರು ಹಾಗೂ  ಇತರ ಕಾರ್ಯಕಾರೀ ಸದಸ್ಯರನ್ನೊಳಗೊಂಡ ತಂಡದ ಸದಸ್ಯರು ಉಪಸ್ಥಿತರಿದ್ದು ಅಧಿಕೃತವಾಗಿ ಮಾಹಿತಿ ನೀಡಿದರು.
ವಿ ಸೂ:  ಅಧಿಕೃತವಾದ ಕರೆಯೋಲೆಯನ್ನು ( INVITATION ) ಪಡೆದವರಿಗೆ ಮಾತ್ರ ಪ್ರವೇಶ. ಆದುದರಿಂದ ಈ ಸಮಾರಂಭದ  ಅಧಿಕ್ರತ ಕರೆಯೋಲೆ ಕೂಪನ್ ( Invitation  Coupon  ) ಪಡೆದವರು ಸಭಾಂಗಣದ ದ್ವಾರದಲ್ಲಿ ಇರುವ ಕೌಂಟರ್ ನಲ್ಲಿ ತಮ್ಮ INVITATION COUPON ಅನ್ನು ತೋರಿಸಿ ತಮ್ಮ ಹೆಸರು ಮತ್ತು ಮೊಬೈಲ್ ನಂಬರ್ ಅನ್ನು ನೋಂದಾಯಿಸಿ ಸಭಾಂಗಣದೊಳಗೆ ಪ್ರವೇಶಿಸ ಬೇಕಾಗಿ ವಿನಂತಿ.
ಈ ನಿಟ್ಟಿನಲ್ಲಿ ಸಂಪರ್ಕ ಮಾಡಲು ಬಯಸುವವರು ಈ ಕೆಳಗಿನ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ.
 
ಕಾರ್ಯಕ್ರಮದ ಬಗ್ಗೆ ಸಾಮಾನ್ಯ ಮಾಹಿತಿಗಳಿಗಾಗಿ:
ಜ: ಅಬ್ದುಲ್ ಲತೀಫ್ ಮುಲ್ಕಿ - 050- 6530518  
ಜ: ಉಸ್ಮಾನ್ ಮೂಳೂರು - 055-9544342
ಜ: ಎಂ. ಬಿ ಅಕ್ಬರ್ - 050-2766377       
ಪ್ರವೇಶ ಕೂಪನ್ ( Entry Coupon ) ಬೇಕಾದವರು : 
ಜ: ಲತೀಫ್ ಪುತ್ತೂರು 
ಜ : ಅಫೀಕ್ ಹುಸೈನ್       
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವವರು: 
ಎಂ. ಬಿ ಅಕ್ಬರ್ - 050-2766377 
ಜ: ಉಸ್ಮಾನ್ ಮೂಳೂರು - 055-9544342
ಅಮೀರ್ ಹಳೆಯಂಗಡಿ: 056 -2299596        
ಮಕ್ಕಳ ಕಾರ್ಯಕ್ರಮಗಳಿಗಾಗಿ: 
ಶ್ರೀಮತಿ ಮುಮ್ತಾಜ್ ಝಕೀರ್ – 050 7649016
ಶ್ರೀಮತಿ ಶೆಹನಾಜ್ ಸುಲೇಮಾನ್ – 050 2552734     
     

Read These Next

ಯಾರ ಸಮುದ್ರ? ಯಾರ ಕರಾವಳಿ?

ಕಳೆದ ಐದು ವರ್ಷಗಳಿಂದ ಮುಂಬೈನ ಸ್ಥಳೀಯ ಮೀನುಗಾರ ಸಮುದಾಯವು ವಿವಾದಾಸ್ಪದವಾದ ಕರಾವಳಿ ರಸ್ತೆ ಯೋಜನೆಯನ್ನು ತಾವು ಹಲವು ...