ದುಬೈ: ಅಡ್ವೋಕೇಟ್ ಮಹಮ್ಮದ್ ಅಲಿ ಕಾಪು ರವರಿಗೆ ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ವತಿಯಿಂದ ಸನ್ಮಾನ

Source: dksc | By Arshad Koppa | Published on 18th April 2017, 8:16 AM | Gulf News |

ದುಬೈ. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ರಾಷ್ಟೀಯ ಸಮಿತಿ ಸಭೆಯು ಎಂ.ಇ.ಮೂಳೂರು ರವರ ನಿವಾಸದಲ್ಲಿ ರಾಷ್ಟೀಯ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಕಣ್ಣಂಗಾರ್ ರವರ ಅದ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಗೆ ವಿಶೇಷ ಅತಿಥಿಗಳಾಗಿ ಯು.ಎ.ಇ ಗೆ ಹ್ರಸ್ವ ಸಂದರ್ಶನಕ್ಕೆ ಆಗಮಿಸಿದ  ಡಿ.ಕೆ.ಎಸ್.ಸಿ ಯ ಅಧೀನ ಸ್ಥಾಪನೆಯಾದ ಅಲ್ ಇಹ್ಸಾನ್ ವಿದ್ಯಾಕೇಂದ್ರದ ಕರೆಸ್ಪಾಡೆಂಟ್ ಆಗಿ ಸೇವೆ ಸಲ್ಲಿಸುತ್ತಿರುವ ಎಡ್ವಕೇಟ್ ಮಹಮ್ಮದ್ ಅಲಿ ಕಾಪುರವರನ್ನು ಯು.ಎ.ಇ ರಾಷ್ಟೀಯ ಸಮಿತಿ ವತಿಯಿಂದ  ಸಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.  ರಾಷ್ಟೀಯ ಸಮಿತಿ ಹಿರಿಯ ಸಲಹೆಗಾರರಾದ ಎಂ.ಇ.ಮೂಳೂರು ರವರು ಅತಿಥಿ ಪರಿಚಯವನ್ನು ಮಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಡ್ವಕೇಟ್ ಮಹಮ್ಮದ್ ಅಲಿ ಕಾಪು ರವರು ತನ್ನ ನಿವರ್ತಿ ಜೀವನದಲ್ಲಿ ತಾವು ಕಟ್ಟಿ ಬೆಳೆಸಿದ ಬ್ರಹತ್ತಾದ ಅಲ್ ಇಹ್ಸಾನ್ ವಿದ್ಯಾಲಯದಲ್ಲಿ  ಸೇವೆ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ಸಂತೋಷ ವ್ಯಕ್ತಪಡಿಸುತ್ತಾ ನುರಿತ ಪ್ರಾಚಾರ್ಯಕರು ಉತ್ತಮ ವ್ಯವಸ್ಥೆ ವಿದ್ಯಾರ್ತಿಗಳ ಶಿಸ್ತು ವಿದ್ಯೆಯ ಗುಣಮಟ್ಟವನ್ನುವಿವರಿಸುತ್ತಾ ಉಡುಪಿ ಜಿಲ್ಲೆಯಲ್ಲಿ ಯೇ ಉತ್ತಮ ಹೆಸರು ಗಳಿಸಿದ ಧಾರ್ಮಿಕ ಹಾಗು ಲೌಕಿಕ ವಿದ್ಯೆಯನ್ನು ನೀಡುವ ವಿದ್ಯಾಲಯ ವಾಗಿ ಗುರುತಿಸುವಲ್ಲಿ ಸಾಧ್ಯವಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಬಿ.ಸಿ.ಎಫ್. ದುಬೈ ಇದರ ಪಧಾನಕಾರ್ಯದರ್ಶಿ ಡಾ. ಮುಹಮ್ಮದ್ ಕಾಪು ರವರು ಸಂದರ್ಬೋಜಿತವಾಗಿ ಮಾತನಾಡಿ ಪ್ರಾರಂಭ ಹಂತದಲ್ಲಿರುವ ಮಹಿಳಾ ಕಾಲೇಜು ಗೆ ಅಗತ್ಯದ ಸಹಕಾರವನ್ನು ಬಿ.ಸಿ.ಎಫ್ ವತಿಯಿಂದ  ನೀಡುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ರಾಷ್ಟೀಯ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಕಣ್ಣಂಗಾರ್ ರವರು ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಎಸ್.ಯೂಸುಫ್ ಅರ್ಲಪದವು ಕಾರ್ಯಕ್ರಮ ನಿರ್ವಹಿಸಿದರು.  ಸಭೆಯಲ್ಲಿ ಸಲಹೆಗಾರರಾದ ಇಬ್ರಾಹಿಂ ಸಖಾಫಿ ಕೆದಂಬಾಡಿ, ಹಸನಬ್ಬ ಕೊಳ್ನಾಡು  ಉಪಾಧ್ಯಕ್ಷರಾದ ಅಬ್ದುಲ್ ಲತೀಫ್ ಮುಲ್ಕಿ,  ಹಾಜಿ.ಅಬ್ದುಲ್ಲಾ ಬೀಜಾಡಿ, ಹಾಜಿ.ಎಸ್.ಕೆ.ಅಬ್ದುಲ್ ಖಾದರ್ ಉಚ್ಚಿಲ, ಅಬ್ದುಲ್ ರಹಿಮಾನ್ ಸಜಿಪ ಕೋಶಾಧಿಕಾರಿ ಇಬ್ರಾಹಿಂ ಹಾಜಿ ಕಿನ್ಯ, ದೇರಾ ಯುನಿಟ್ ಅಧ್ಯಕ್ಷರಾದ ಇಸ್ಮಾಯಿಲ್ ಬಾರೋತ್, ಕೋಶಾಧಿಕಾರಿ ಶಕೂರು ಮನಿಲಾ, ಇ.ಕೆ.ಇಬ್ರಾಹಿಂ ಕಿನ್ಯ, ರಜಾಕ್ ಮುಟ್ಟಿಕಲ್   ಅಬುದಾಬಿ ಯುನಿಟ್ ಅಧ್ಯಕ್ಷರಾದ ಇಕ್ಬಾಲ್ ಕುಂದಾಪುರ, ಅಲ್ ಕ್ವಿಸಸ್ ಯುನಿಟ್ ಅಧ್ಯಕ್ಷರಾದ ಬದ್ರುದ್ದೀನ್ ಅರಂತೋಡು ಪ್ರಧಾನ ಕಾರ್ಯದರ್ಶಿ ಶೇಖಬ್ಬ ಕಿನ್ಯ , ರಾಷ್ಟೀಯ ಸಮಿತಿ ಜೊತೆ ಕಾರ್ಯದರ್ಶಿಹಾಜಿ.ನವಾಜ್ ಕೋಟೆಕ್ಕಾರ್, ಕಮರುದ್ದೀನ್ ಗುರುಪುರ, ಕಮಲ್ ಅಜ್ಜಾವರ, ಬಾರ್ ದುಬೈ ಯುನಿಟ್ ಅಧ್ಯಕ್ಷರಾದ ಇಸ್ಮಾಯಿಲ್ ಬಾಬಾ ಮೂಳೂರು, ಕೋಶಾಧಿಕಾರಿ ಹಸನ್ ಭಾವ ಹಳೆಯಂಗಡಿ, ಯೂತ್ ವಿಂಗ್ ಅಧ್ಯಕ್ಷರಾದ ಸೈಫುದ್ದೀನ್ ಪಟೇಲ್, ಹೋರ್ ಅಲ್ ಆಂಜ್ ಯುನಿಟ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸುಳ್ಯ, ಅಬೂಸಾಗರ್ ಯುನಿಟ್ ಪ್ರದಾನ ಕಾರ್ಯದರ್ಶಿ ಅಶ್ರಫ್ ಸತ್ತಿಕಲ್, ಅಜ್ಮಾನ್ ಯುನಿಟ್ ಪ್ರಧಾನ ಕಾರ್ಯದರ್ಶಿ ನಜಿರ್ ಕಣ್ಣಂಗಾರ್, ಜೆದ್ದಾಪ್ ಯುನಿಟ್ ಅಧ್ಯಕ್ಷರಾದ ಅಶ್ರಫ್ ಉಳ್ಳಾಲ, ಪ್ರದಾನ ಕಾರ್ಯದರ್ಶಿ ಅಶ್ರಫ್ ಕಾನ, ನ್ಯಾಷನಲ್ ಪೈಂಟ್ ಅಧ್ಯಕ್ಷರಾದ ಮುಹಮ್ಮದ್ ಅಶ್ರಫ್ ಪೆರಿಂಜೆ, ಶಾರ್ಜಾ ಯುನಿಟ್ ಉಪಾಧ್ಯಕ್ಷರಾದ ಅಬ್ಬಾಸ್ ಪಾಣಾಜೆ ಮುಂತಾದವರು ಉಪಸ್ಥಿತರಿದ್ದರು.

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.