ಝಾಕಿರ್ ನಾಯ್ಕ್‌ ವಿರುದ್ಧ ಜಾಮೀನು ರಹಿತ  ವಾರಂಟ್

Source: S O News service | By sub editor | Published on 13th April 2017, 7:02 PM | National News | Don't Miss |

ಮುಂಬೈ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ನಿರಾಕರಿಸುತ್ತಿರುವ ಡಾ. ಝಾಕಿರ್  ನಾಯ್ಕ್‌ ವಿರುದ್ಧ ಗುರುವಾರ ದೆಹಲಿ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದೆ.

ಹಲವು ಬಾರಿ ನೋಟಿಸ್ ನೀಡಿದರೂ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಝಾಕಿರ್ ನಾಯಕ್ ವಿರುದ್ಧ ಬಂಧನ ವಾರಂಟ್ ಹೊರಡಿಸುವಂತೆ ಜಾರಿ ನಿರ್ದೇಶನಾಲಯ ಅಕ್ರಮ ಹಣಕಾಸು ವ್ಯವಹಾರ ತಡೆ ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಕೋರ್ಟ್ ಇಂದು ತನ್ನ ಆದೇಶ ಹೊರಡಿಸಿದೆ.

ವಿದೇಶದಿಂದ ಇಂಟರ್ ನೆಟ್ ಮೂಲಕ ವಿಡಿಯೋ ವಿಚಾರಣೆಗೆ ಅವಕಾಶ ನೀಡಬೇಕು ಎಂಬ ಝಾಕಿರ್ ನಾಯಕ್ ಮನವಿಯನ್ನು ತಿರಸ್ಕರಿಸಿದ್ದ ಜಾರಿ ನಿರ್ದೇಶನಾಲಯ, ಖುದ್ದು ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ಜಾರಿ ಮಾಡಿದೆ. ಆದರೆ ಝಾಕಿರ್ ನಾಯಕ್ ಇದುವರೆಗೂ ವಿಚಾರಣೆಗೆ ಹಾಜರಾಗಿಲ್ಲ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ವಿಡಿಯೋ ಲಿಂಕ್ ಮೂಲಕ ವಿಚಾರಣೆ ನಡೆಸಲು ಅವಕಾಶ ಇಲ್ಲ. ಅಲ್ಲದೆ ಝಾಕಿರ್ ನಾಯಕ್ ವಿರುದ್ಧ ಗಂಭೀರ ಆರೋಪಗಳಿರುವುದರಿಂದ ಅವರು ಸ್ವತಃ ವಿಚಾರಣೆಗೆ ಒಳಗಾಗಬೇಕು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಕೋಮುವಾದ ಮತ್ತು ಭಯೋತ್ಪಾದನೆ ಪ್ರಚೋದಕ ಭಾಷಣಗಳನ್ನು ಪ್ರಸ್ತುತ ಪಡಿಸಿರುವ ಆರೋಪದಡಿ ರಾಷ್ಟ್ರೀಯ ತನಿಖಾ ಸಂಸ್ಥೆ ಈಗಾಗಲೇ ಜಾಕಿರ್‌ ನಾಯಕ್‌ ವಿರುದ್ಧ ಪ್ರಕರಣ ದಾಖಲಿಸಿದ್ದು, ವಿದೇಶದಲ್ಲಿರುವ ಜಾಕಿರ್‌ ನಾಯಕ್‌ ನನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದೆ. 

ಇನ್ನು ನಾಯಕ್‌ ಒಡೆತನದ ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಷನ್‌ (ಐಆರ್‌ಎಫ್‌) ಸಂಸ್ಥೆಯನ್ನು ಕಾನೂನುಬಾಹಿರ ಚಟುವಟಿಕೆ ಕಾಯ್ದೆ ಅಡಿ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

Read These Next

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...