ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮ; ಮನೆಮನೆಗೆ ಭೇಟಿ

Source: sonews | By Staff Correspondent | Published on 12th October 2017, 10:09 PM | Coastal News | Don't Miss |

ಭಟ್ಕಳ: ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಅ.೨೩ ರಿಂದ ನ.೬ರ ತನಕ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ನಾಗರೀಕರ ಹಾಗೂ ಸ್ವಯಂ ಸೇವಕರ ಸಹಕಾರ ಅಗತ್ಯ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ಮೂರ್ತಿರಾಜ ಭಟ್ಟ ಹೇಳಿದರು. 
ಅವರು ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಉದ್ಧೇಶಿಸಿ ಮಾತನಾಡುತ್ತಾ, ರಾಜ್ಯದಲ್ಲಿ ೫ ಜಿಲ್ಲೆಗಳಲ್ಲಿ ಕುಷ್ಟರೋಗ ನಿರ್ಮೂಲನಾ ಅಭಿಯಾನ ಕಾರ್ಯಕ್ರಮ ನಡೆಯಲಿದ್ದು ಉತ್ತರ ಕನ್ನಡ ಜಿಲ್ಲೆಯೂ ಸೇರಿದೆ. ನಮ್ಮ ತಾಲೂಕಿನಲ್ಲಿ ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಚರ್ಮರೋಗದ ಕುರಿತು ತಪಾಸಣೆ ನಡೆಸುವವರಿದ್ದು ನಗರ ಪ್ರದೇಶದಲ್ಲಿ ಮಾತ್ರ ಕಾರ್ಯಕರ್ತರ ಅವಶ್ಯಕತೆ ಇದೆ ಎಂದರು. 
ಈಗಾಗಲೇ ನಾರು ಹುಣ್ಣು, ಪ್ಲೇಗ್, ಪೊಲಿಯೋ ನಿರ್ಮೂಲನೆಗೆ ಪಣ ತೊಟ್ಟಂತೆಯೇ ಕುಷ್ಟರೋಗ ನಿರ್ಮೂಲನೆಗೂ ಕೂಡಾ ಪ್ರತಿಯೋರ್ವರೂ ಪಣ ತೊಡಬೇಕಾಗಿದೆ.  ಎಲ್ಲರ ಸಹಕಾರದಿಂದ ಮಾತ್ರ ಇದು ಯಾಶಸ್ವೀ ಕಾರ್ಯಕ್ರಮವಾಗಲು ಸಾಧ್ಯವಾಗುವುದು ಎಂದರು. ಕುಷ್ಟರೋಗ ಸೂಕ್ಷ್ಮಾಣು ಕ್ರಿಮಿಯಿಮದ ಬರುವ ಕಾಯಿಲೆಯಾಗಿದ್ದು ಅತ್ಯಂತ ನಿದಾನವಾಗಿ ಗಮನಕ್ಕೆ ಬರುತ್ತದೆ. ಚರ್ಮದಲ್ಲಿ ಬಿಳಿ, ತಾಮ್ರದ ಬಣ್ಣದ ಮಚ್ಚೆಗಳಿದ್ದರೆ ತಕ್ಷಣ ವೈದ್ಯರನ್ನು ಕಂಡು ಖಚಿತಪಡಿಸಿಕೊಳ್ಳಬೇಕು ಎಂದ ಅವರು ರೋಗದ ಲಕ್ಷಣ ಕಾಣಿಸಿಕೊಳ್ಳಲು ಕನಿಷ್ಟ ೧೫ ರಿಂದ ೨೦ ವರ್ಷ ಬೇಕಾಗುವುದು. ಆಗ ಕೈ ಮತ್ತು ಕಾಲುಗಳು ಮುದುಡುವುದು, ಗಾಯವಾಗುವುದು ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಲ್ಲಿಯ ತನಕವೂ ಕೂಡಾ ಮೈಮೇಲೆ ಮಚ್ಚೆ ಇದ್ದರೂ ಯಾವುದೇ ತುರಿಕೆ ಯಾ ತೊಂದರೆ ಕಾಣಿಸಿಕೊಳ್ಳದು ಎಂದೂ ಹೇಳಿದರು. 
ಕೇವಲ ಕೆಮ್ಮಿನಿಂದ ಹರಡುವ ರೋಗವಾಗಿದ್ದು ರೋಗಾಣುಗಳು ದೇಹವನ್ನು ಪ್ರವೇಶಿಸಿದ ಎಲ್ಲರಿಗೂ ಕಾಯಿಲೆ ಬರುತ್ತದೆ ಎನ್ನಲು ಸಾಧ್ಯವಿಲ್ಲ. ದೇಹದಲ್ಲಿ ಧಾರಣಾ ಶಕ್ತಿ ಕಡಿಮೆ ಇರುವವರಿಗೆ ರೋಗದ ಲಕ್ಷಣ ಕಾಣಿಸಿಕೊಳ್ಳುತ್ತದೆ ಎಂದರು. ರೋಗಾಣುಗಳನ್ನು ನಾಶ ಮಾಡಿ ಮುಂದಿನ ಪೀಳಿಗೆಗೆ ಹರಡದಂಎ ನಾವು ಜಾಗೃತೆ ವಹಿಸಬೇಕಾಗಿದೆ ಎಂದೂ ಅವರು ಹೇಳಿದರು. 
ಅಧ್ಯಕ್ಷತೆಯನ್ನು ವಹಿಸಿದ್ದ ತಹಸೀಲ್ದಾರ್ ವೀರೇಂದ್ರ ಬಾಡಕರ್ ಮಾತನಾಡಿ ಮಾರಕ ರೋಗವನ್ನು ನಿರ್ಮೂಲನೆ ಮಾಡಲು ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಬೇಕಾಗಿದೆ. ಇದೊಂದು ಸರಕಾರದ ಕಾರ್ಯಕ್ರಮವಾಗಿದ್ದು ಸಂಘ ಸಂಸ್ಥೆಗಳು ಸಹಕರಿಸಬೇಕು ಎಂದು ಕರೆ ನೀಡಿದರು. 
ಸಭೆಯಲ್ಲಿ ಪುರಸಭಾ ಅಧ್ಯಕ್ಷ ಮುಹಮ್ಮದ್ ಮಟ್ಟಾ ಸಾಧಿಕ್, ತಂಜೀಂ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಖರೂರಿ, ರಾಬಿತಾ ಸಂಸ್ಥೆಯಿಂದ ಸಿದ್ಧಿಕ್ ಮೀರಾ, ಮನಾಜಿರ್ ಹುಸೇನ್, ಐ.ಎಂ.ಎ. ಅಧ್ಯಕ್ಷ ಡಾ.ಆರ್. ವಿ. ಸರಾಫ್, ಶಿಕ್ಷಣ ಸಂಯೋಜಕ ಎಸ್.ಪಿ. ಭಟ್ಟ, ಪುರಸಭಾ ಆರೋಗ್ಯಾಧಿಕಾರಿ ಸುಜಯಾ ಸೋಮನ್, ಡಯಗ್ನೊಮೆಡ್‌ನ ಶಾಕಿರ್ ಹುಸೇನ್, ಪುರಸಭಾ ಸದಸ್ಯ ಫಯಾಜ್ ಮುಲ್ಲಾ, ಟಾಪ ಎಮರ್ಜೆನ್ಸಿ ಸರ್ವಿಸಸ್‌ನ ನಿಸ್ಸಾರ್ ಅಹಮ್ಮದ್ ರುಕ್ನುದ್ದೀನ್ ಮುಂತಾದವರು ಉಪಸ್ಥಿತರಿದ್ದರು. 
ಹಿರಿಯ ಆರೋಗ್ಯ ಸಹಾಯಕ ಈರಯ್ಯ ದೇವಡಿಗ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...