ಡಿ. 9 ರಂದು ಶ್ವಾನ ಪ್ರದರ್ಶನ ಮತ್ತು ಪ್ರಾಣಿ ಜಾತ್ರೆ

Source: sonews | By Staff Correspondent | Published on 5th December 2018, 12:00 AM | Coastal News | Don't Miss |

ಕಾರವಾರ  : ಜಿಲ್ಲಾಡಳಿತ ಹಾಗೂ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಹಭಾಗಿತ್ವದಲ್ಲಿ 2018 ರ ಕರಾವಳಿ ಉತ್ಸವದ ಅಂಗವಾಗಿ ಡಿಸೆಂಬರ 9 ರಂದು ಶ್ವಾನ ಪ್ರದರ್ಶನ ಮತ್ತು ಪ್ರಾಣಿ ಜಾತ್ರೆ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 9 ರಿಂದ ಮದ್ಯಾಹ್ನ 1 ರ ವರೆಗೆ ನಗರದ ಮಾಲಾದೇವಿ ಕ್ರೀಡಾಂಗಣದಲ್ಲಿ ಪ್ರದರ್ಶನವಿದ್ದು, 25ಕ್ಕೂ ಹೆಚ್ಚು ಶ್ವಾನ ತಳಿಗಳು, ವಿವಿಧ ತಳಿಯ ಬೆಕ್ಕು ಮತ್ತು ಮೊಲಗಳು ಹಾಗೂ ದೇಶ ವಿದೇಶ ಪಕ್ಷಿ ತಳಿಗಳ ಕಲರವ ಕಂಡುಬರುವುದು. 

ಪ್ರಾಣಿ ಮತ್ತು ಪಕ್ಷಿ ಪ್ರೀಯರು ಡಿಸೆಂಬರ 6 ರೊಳಗೆ ಆಯಾ ತಾಲೂಕಿನ ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕರಲ್ಲಿ ಹೆಸರನ್ನು ನೋಂದಾಯಿಸಿ ತಮ್ಮ ಪ್ರಾಣಿ ಪಕ್ಷಿಗಳ ವಿಧೇಯತೆಯ ಪ್ರದರ್ಶನ ಪ್ರದರ್ಶಿಸಬಹುದಾಗಿರುತ್ತದೆ. 

ಹೆಚ್ಚಿನ ಮಾಹಿತಿಗಾಗಿ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ದೂರವಾಣಿ ಸಂಖ್ಯೆ 08382-226467, 9448223368, 9483998542, 9480822685, 9448530633, 9449628447 ಸಂಪರ್ಕಿಸಬಹುದಾಗಿರುತ್ತದೆ.  

ಡಿ 6 ರಂದು ಅಂಕೋಲಾ ತಾ.ಪಂ. ಕೆ.ಡಿ.ಪಿ ಸಭೆ

ಕಾರವಾರ: ತಾಲೂಕು ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಡಿಸೆಂಬರ 6 ರಂದು ಬೆಳಗ್ಗೆ 10.30ಕ್ಕೆ ಅಂಕೋಲಾ ತಾಲೂಕು ಪಂಚಾಯತ್ ಸಭಾಭವನದಲ್ಲಿ ಮಾಸಿಕ ಕೆ ಡಿ ಪಿ ಸಭೆ ನಡೆಯಲಿದೆ ಎಂದು ಅಂಕೋಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ. 

ಡಿ.7 ರಂದು ಉದ್ಯೋಗ ಮೇಳ

ಕಾರವಾರ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಡಿಸೆಂಬರ 7 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 3.30 ರ ವರೆಗೆ “ಉದ್ಯೋಗ ಮೇಳ”ವನ್ನು ಹಮ್ಮಿಕೊಳ್ಳಲಾಗಿದೆ.
 ಐ.ಟಿ.ಐ,   ಡಿಪ್ಲೋಮಾ (ಮೆಕ್ಯಾನಿಕಲ್ ಮತ್ತು ಇಲೆಕ್ಟ್ರಿಕಲ್), ಪಿ.ಯು.ಸಿ.,  ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಸಿ.ಎ., ಬಿ.ಬಿ.ಎ., ಎಂ.ಬಿ.ಎ (ಪೈನಾನ್ಸ್) ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವವರು ಈ ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದೆ,

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳಿಗಾಗಿ ಉದ್ಯೋಗ ವಿನಿಮಯ ಕಛೇರಿಯನ್ನು ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ +91-9481274298, +91-9481403800 ಸÀಂಪರ್ಕಿಸಬಹುದಾಗಿರುತ್ತದೆ ಎಂದು ಜಿಲ್ಲಾ  ಉದ್ಯೋಗಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಅಡುಗೆ ಸ್ಪರ್ಧೇಯ ದಿನಾಂಕದಲ್ಲಿ ಬದಲಾವಣೆ 

ಕಾರವಾರ: ಕರಾವಳಿ ಉತ್ಸವ 2018 ರ ಅಂಗವಾಗಿ ಡಿಸೆಂಬರ 9 ರಂದು ಏರ್ಪಡಿಸಲಾಗಿದ್ದ ಅಡುಗೆ ಸ್ಪರ್ಧೇಯನ್ನು ಡಿಸೆಂಬರ 10 ರಂದು ಬೆಳಗ್ಗೆ 10.30ಕ್ಕೆ ನಗರದ ಮಾಲಾದೇವಿ ಮೈದಾನದಲ್ಲಿ ನಡೆಸಲಾಗುವುದು. 

ಆಸಕ್ತ ಮಹಿಳೆ, ಪುರುಷರು ಡಿಸೆಂಬರ 5 ರೊಳಗೆ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರವಾರ ಇವರಲ್ಲಿ ಹೆಸರು ನೀಡಲು ಕೋರಿದೆ. 

ಸ್ಪರ್ಧೇಯಲ್ಲಿ ವಿಜೇತರಾದವರಿಗೆ ಆಕರ್ಷಕ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಡಿ. 5 ರಂದು ವಿದ್ಯುತ್ ವ್ಯತ್ಯಯ

ಕಾರವಾರ: ಹೊನ್ನಾವರ ಉಪ ವಿಭಾಗ ವ್ಯಾಪ್ತಿಯ 33/11 ಕೆ.ವಿ ವಿದ್ಯುತ್ಯ ಕೇಂದ್ರದಲ್ಲಿ ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿ ನಿಮಿತ್ತ ಡಿಸೆಂಬರ 5 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ಟೊಂಕ, ಕೆಳಗಿನೂರು, ಬಳಕೂರು, ದೇವರಗದ್ದೆ, ಇಡಗುಂಜಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...