ಮುಂಡಗೋಡ ತಾಲೂಕ ಆಸ್ಪತ್ರೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಕಾಯಕಲ್ಪ ತಂಡದ ಡಾ: ಸಂಪತ್ತಕುಮಾರ ಬಣಕಾರ

Source: sonews | By Staff Correspondent | Published on 30th December 2018, 12:54 AM | Coastal News |

ಮುಂಡಗೋಡ : ಇನಪೇಕ್ಷನ್ ತಗುಲದಂತೆ ಆಸ್ಪತ್ರೆಯಲ್ಲಿ ತಾಜ್ಯಗಳನ್ನು ಹೇಗೆ ನಿರ್ವಹಣೆ ಮಾಡುತ್ತಾರೆ  ಹಾಗೂ ಆಸ್ಪತ್ರೆಯಲ್ಲಿ ಸ್ವಚ್ಚತೆ ಹೇಗೆ ಕಾಪಾಡಿಕೊಂಡು ಹೋಗುತ್ತಿದ್ದಾರೆ ಎನ್ನುವ ಧ್ಯೆಯ ಹೊಂದಿರುವ ಕಾಯಕಲ್ಪ ಸ್ವಚ್ಚ ಭಾರತ ಅಭಿಯಾನದಡಿಯಲ್ಲಿ ಕಾಯಕಲ್ಪ ಯೋಜನೆಯಡಿಯಲ್ಲಿ ಶನಿವಾರ ಡಾ: ಸ್ವತಂತ್ರಕುಮಾರ ಬಣಕಾರ  ನೇತೃತ್ವದ ಕಾಯಕಲ್ಪ ತಂಡ ಮುಂಡಗೋಡ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿ ಸ್ವಚ್ಚತೆ ಹಾಗೂ  ಪ್ರತಿಯೊಂದು ವಾರ್ಡ್, ರಕ್ತ ಪರಿಕ್ಷಾ, ಇಂಜೇಕ್ಷನ, ಎಕ್ಷರೆ, ಗರ್ಭೀಣಿಯರ ಡೆಲಿವರಿ ಥೇಟರ್, ಭೇಟಿ ನೀಡಿ ಹಾಗೂ ಮುಂತಾದ ವಿಭಾಗಗಳಿಗೆ ತೆರಳಿ ಪರೀಕ್ಷೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಚಿಕ್ಕ ಮಕ್ಕಳ ಪರಿಕ್ಷಾ ಕೊಠಡಿ ಹಾಗೂ ಸ್ತ್ರೀ ರೋಗ ತಜ್ಞ ಕೊಠಡಿ ಯ ಹತ್ತಿರ 5 ಗಂಟೆ ಆಗಿದ್ದರೂ ಸಹಿತ ವೈದ್ಯರು ಸೇವೆ ನೀಡುತ್ತಿರುವುದು ಹಾಗೂ ನರ್ಸ್‍ಗಳ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಆಸ್ಪತ್ರೆಯ ವೈದ್ಯರಿಗೆ ಕೆಲವಂದು ಸಲಹೆ ನೀಡಿದರು ಎಂದು ತಿಳಿದು ಬಂದಿದೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ: ಇಂಗಳೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಡಾ: ಸ್ವತಂತ್ರ ಕುಮಾರ ತಂಡದಲ್ಲಿ ಡಾ: ನಿವೃತ್ ಎಕ್ಸೀಕ್ಯುಟೀವ ಅಧಿಕಾರಿ ಡಾ ಕರೂರ ಡಾ: ಪ್ರವೀಣ ಇದ್ದರು. ಕಾಯಕಲ್ಪ ಅಭಿಯಾನದಡಿಯಲ್ಲಿ ಪ್ರಥಮ ಸ್ಥಾನ ಹೊಂದುವ ತಾಲೂಕ ಆಸ್ಪತ್ರೆಗೆ 10 ಲಕ್ಷ ರೂ ನೀಡಲಾಗುತ್ತದೆ. 

ತಾವು ಭೇಟಿ ನೀಡಿದ ಶಿರಸಿ ಸರಕಾರಿ ಆಸ್ಪತ್ರೆ ಯ ಕುರಿತು ಖೇದ ವ್ಯಕ್ತಪಡಿಸಿ ಸಿದ್ದಾಪುರದ  ಆಸ್ಪತ್ರೆಯ ಶಿರಸಿ ಆಸ್ಪತ್ರೆಗಿಂತ ಅಡ್ಡಿಯಿಲ್ಲಾ. ಮುಂಡಗೋಡ ತಾಲೂಕ ಅಸ್ಪತ್ರೆಕಂಡು ಬಹಳ ಸಂತೋಷವಾಗಿದೆ ಈ ಆಸ್ಪತ್ರೆ ಪ್ರಥಮ ಸ್ಥಾನ ಗಳಿಸುವ ಎಲ್ಲ ಲಕ್ಷಣಗಳಿವೆ ಎಂದರು ಎಂದು ಡಾ: ಬಣಕಾರ  ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು 

ಡಾ: ಪ್ರಭು, ಡಾ ಪ್ರಸನ್ನ ಡಾ, ಶಾಂತಲಾ ಹಾಗೂ ಆಯುಷ ವೈದ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು

Read These Next