ಜಿಲ್ಲಾ ಮಟ್ಟದ ಕ್ರೀಡಾಕೂಟ;ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

Source: sonews | By Staff Correspondent | Published on 25th September 2018, 11:26 PM | Coastal News |

ಭಟ್ಕಳ; ಯಲ್ಲಾಪುರ ತಾಲೂಕಾ ಕ್ರಿಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥೀಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳದ ದಿ ನ್ಯೂ ಇಂಗ್ಲೀಷ್ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಥಿಗಳಾದ ರಕ್ಷಿತ ಡಿ ನಾಯ್ಕ ಯೋಗದಲ್ಲಿ ಪ್ರಥಮ, ಲೋಕೇಶ ನಾಯ್ಕ ಕಬಡ್ಡಿಯಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ದ್ವಿತೀಯ, ಟ್ರಿಬಲ್ ಜಂಪ್‍ನಲ್ಲಿ  ದ್ವಿತೀಯ, ಮಹೇಶ ನಾಯ್ಕ ಕಬಡ್ಡಿಯಲ್ಲಿ ಪ್ರಥಮ, ಸುದೀಪ ನಾಯ್ಕ 110 ಮಿ. ಅಡೆತಡೆ ಓಟದಲ್ಲಿ ಪ್ರಥಮ, ಚರಣ ನಾಯ್ಕ 110 ಮಿ. ಅಡೆತಡೆ ಓಟದಲ್ಲಿ ದ್ವಿತೀಯ, ನಿತಿನ ನಾಯ್ಕ ಕರಾಟೆಯಲ್ಲಿ ದ್ವಿತೀಯ ಮತ್ತು ಜಾನಕಿ ಗೊಂಡ ಎತ್ತರ ಜಿಗಿತದಲ್ಲಿ ದ್ವಿತೀಯ ಬಹುಮಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುರೇಶ ನಾಯಕ್, ಟ್ರಸ್ಟಿ ಮೆನೇಜರ್  ರಾಜೇಶ ನಾಯಕ್, ಪ್ರಾಂಶುಪಾಲರಾದ  ವಿರೇಂದ್ರ ಶ್ಯಾನಭಾಗ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...