ಜು.೧ರಂದು ಭಟ್ಕಳದಲ್ಲಿ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆ

Source: S O News service | By sub editor | Published on 30th June 2016, 12:18 AM | Coastal News |


ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಭಟ್ಕಳ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘ  ಇವುಗಳ ಸಂಯುಕ್ತ ಆಶ್ರಯದಲ್ಲಿ ಜು.೧ರಂದು ಇಲ್ಲಿನ ಶ್ರೀ ಗುರು ಸುಧೀಂದ್ರ ಬಿ.ಸಿ.ಎ., ಬಿ.ಬಿ.ಎ. ಕಾಲೇಜ್ ಅಡಿಟೋರಿಯಂ ನಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಜಿಲ್ಲಾ ಮಟ್ಟದ ಪತ್ರಿಕಾ  ದಿನಾಚರಣೆ ಎರ್ಪಡಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ ಹಾಗೂ ತಾಲೂಕ ಸಂಘದ  ಪ್ರಧಾನ ಕಾರ್ಯದರ್ಶಿ ಭಾಸ್ಕರ ನಾಯ್ಕ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ. 

ಕಾರ್ಯಕ್ರಮವನ್ನು ಶಾಸಕ ಮಂಕಾಳ ವೈದ್ಯ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ ವಹಿಸುವರು. ವಿಶೇಷ ಉಪನ್ಯಾಸಕರಾಗಿ ಪತ್ರಿಕೋದ್ಯಮ ಪ್ರಾಧ್ಯಾಪಕ ಡಾ. ನಿರಂಜನ ವಾನಳ್ಳಿ ಆಗಮಿಸುವರು. ಮುಖ್ಯ ಅತಿಥಿಗಳಾ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಉಪಸ್ಥಿತರಿರುವರು. 

ಕಾರ್ಯಕ್ರಮದಲ್ಲಿ ಕೆ. ಶ್ಯಾಮರಾವ್ ಪ್ರಶಸ್ತಿಯನ್ನು ಭಟ್ಕಳದ ಹಿರಿಯ ವರದಿಗಾರ ರಾಧಾಕೃಷ್ಣ ಭಟ್ಟ ಅವರಿಗೆ, ಜಿ.ಎಸ್. ಹೆಗಡೆ ಅಜ್ಜಿಬಳ ಪುರಸ್ಕಾರವನ್ನು ಅನಂತ ದೇಸಾಯಿ ಜೋಯಿಡಾ, ಶೈಲಜಾ ಗೋರನಮನೆ ಸಿರಸಿ,  ನಾಗರಾಜ ಭಟ್ಟ ಸಿದ್ಧಾಪುರ, ಓರವಿಲ್ ಫೆರ್ನಾಂಡೀಸ್ ಹಳಿಯಾಳ, ಕೃಷ್ಣಮೂರ್ತಿ ಭಟ್ಟ ಹೊನ್ನಾವರ ಇವರಿಗೆ ಪ್ರಧಾನ ಮಾಡಲಾಗುವುದು.  ಭಟ್ಕಳದ ನಿವೃತ್ತ ಕ್ಯಾಪ್ಟನ್ ಕೆ. ಆರ್. ನಾಯ್ಕ ಅವರನ್ನು ಹಾಗೂ ಮನೆಮನೆಗೆ ಪತ್ರಿಕೆ ತಲುಪಿಸುವ ರವಿ ಕೃಷ್ಣಾ ನಾಯ್ಕ ಇವರುಗಳನ್ನು ಸನ್ಮಾನಿಸಲಾಗುವುದು ಎಂದೂ ತಿಳಿಸಲಾಗಿದೆ. 

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ತ್ರಿವಿಧ ದಾಸೋಹಿ ಡಾ.ಶಿವಕುಮಾರ್ ಶಿವಯೋಗಿಗಳ ನಿಧನಕ್ಕೆ ರಾಬ್ತಾ ಮಿಲ್ಲತ್ ತೀವ್ರ ಸಂತಾಪ

ಭಟ್ಕಳ: ತ್ರಿವಿಧ ದಾಸೋಹಿ ಜ್ಞಾನಯೋಗಿ ಸಿದ್ದಗಂಗಾ ಶ್ರೀಗಳ ನಿಧನಕ್ಕೆ ರಾಬ್ತಾ-ಇ-ಮಿಲ್ಲತ್ ಸಂಸ್ಥೆಯ ಜಿಲ್ಲಾಧ್ಯಕ್ಷ ನ್ಯಾಯಾವಾದಿ ...

ಶಿರಾಲಿ ಹೆದ್ದಾರಿ ಅಗಲಿಕರಣ;ಸಾರ್ವಜನಿಕರ ಬೇಡಿಯಂತೆ 30 ರ ಬದಲು 45ಮೀಟರ್ ವಿಸ್ತರಣೆ-ಕೇಂದ್ರ ಸಚಿವ ಅನಂತ್ ಭರವಸೆ

ಭಟ್ಕಳ: ಶಿರಾಲಿ ಭಾಗದ ಗ್ರಾಮಸ್ಥರ ಬೇಡಿಕೆಯಂತೆ ರಾ.ಹೆ.66 ರ ಅಗಲೀಕರಣವನ್ನು 30ಮೀಟರ್ ಬದಲು 45ಮೀಟರ್ ಗೆ ವಿಸ್ತರಿಸಲು ಅಗತ್ಯ ಕ್ರಮಗಳನ್ನು ...