ಜಿಲ್ಲಾ ಚುಸಾಪ ವತಿಯಿಂದ ಅನಂತ್‍ರಾಮ್‍ ಗೆ ಅಭಿನಂದನೆ

Source: sonews | By Staff Correspondent | Published on 4th December 2018, 11:31 PM | State News | Don't Miss |

ಕೋಲಾರ : ಸುಮಾರು ವರ್ಷಗಳ ಕಾಲ ಪ್ರಮಾಣಿಕವಾಗಿ ಪತ್ರಿಕೋದ್ಯಮದಲ್ಲಿ ಸೇವೆಯನ್ನು ಸಲ್ಲಿಸಿದ ಕೋಲಾರದ ಪಾ.ಶ್ರೀ. ಅನಂತರಾಮ್ ರವರ ಸೇವೆ ಅನನ್ಯವಾದುದು ಎಂದು ಕನ್ನಡ ಪಿ.ಯು. ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಜಿ.ನಾಗರಾಜ್‍ರವರು ಅಭಿಪ್ರಾಯಪಟ್ಟರು.
    
ಅವರು ನಗರದ ಪಿ.ಸಿ.ಬಡಾವಣೆಯ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ  2018ನೇ ಸಾಲಿನ ಕರ್ನಾಟಕ ಮಾದ್ಯಮ ಅಕಾಡೆಮಿ ಪ್ರಶಸ್ತಿ ಬಂದಿರುವ ಸಂದರ್ಭದಲ್ಲಿ ವಿಜಯವಾಣಿ ಪತ್ರಿಕೆಯ ಜಿಲ್ಲಾ ವರದಿಗಾರ ಪಾ.ಶ್ರೀ. ಅನಂತರಾಮ್‍ರವರನ್ನು ಅಭಿನಂದಿಸಿ ಮಾತನಾಡಿದರು.
    
ಸುಮಾರು ವರ್ಷಗಳಿಂದಲೂ ಕೋಲಾರದ ವಿವಿಧ ಪತ್ರಿಕೆಗಳಿಗೆ ವರದಿಗಾರರಾಗಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿರುತ್ತಾರೆ. ಅವರ ಕಾರ್ಯ ವೈಖರಿಗೆ ಮೆಚ್ಚಿ ಸರ್ಕಾರ ಈ ದಿನ ಪ್ರಶಸ್ತಿಯನ್ನು ನೀಡಿರುವುದು ಒಬ್ಬ ಪ್ರಭುದ್ಧ ಪತ್ರಕರ್ತರಿಗೆ ಸಿಕ್ಕ ಗೌರವವಾಗಿದೆ ಕೋಲಾರ ಜಿಲ್ಲೆಗೆ ಡಿ.ವಿ.ಜಿ., ತೀ.ತ ಶರ್ಮ, ಮಾಸ್ತಿ ರವರಂತೆ ಒಬ್ಬ ಪ್ರಭುದ್ಧ ಪತ್ರಕರ್ತರಾಗಿ ಇದೀಗ ಅನಂತ್‍ರಾಮ್‍ರವರು ಕೂಡ ಸಾಕ್ಷೀಬೂತರಾಗಿದ್ದಾರೆ. ಯಾವುದೇ ಆಮೀಷಕ್ಕೆ ಒಳಗಾಗದೆ ಎಲ್ಲರೊಂದಿಗೆ ಸರಳವಾದ ಸ್ನೇಹ ಜೀವಿಯಾಗಿ ಪತ್ರಕರ್ತರಲ್ಲಿ ಗುರುತಿಸಿಕೊಂಡವರು ಎಂದರು.
    
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪಿ. ನಾರಾಯಣಪ್ಪ ಮಾತನಾಡಿ ಅನಂತರಾಮ್‍ರವರು ನೇರ, ದಿಟ್ಟ, ನಿರಂತರ ತಮ್ಮ ಪತ್ರಿಕೆಯ ಅನೇಕ  ಲೇಖನಗಳಲ್ಲಿ ಸಮಾಜದ ಸೂಕ್ಷ್ಮವಾದ ಸಂವೇದನೆಗಳನ್ನು ಇಡೀ ಜಿಲ್ಲೆಗೆ ತಿಳಿಯುವಂತೆ ತಮ್ಮ ಬರವಣಿಗೆ ಕಂಡುಬರುತ್ತಿತ್ತು. ಮನ್ವಂತರ ಪ್ರಕಾಶನದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಇಡೀ ಜಿಲ್ಲೆಗೆ ಒಬ್ಬ ಪ್ರಾಮಾಣಿಕ ಪತ್ರಕರ್ತರಾಗಿ ಮಾದರಿಯಾಗಿದ್ದಾರೆ ಎಂದರು.
    
ಜಿಲ್ಲಾ ಪ್ರಾಥಮಿಕ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷ ಜಿ. ಶ್ರೀನಿವಾಸ್ ಮಾತನಾಡಿ  ಅನಂತರಾಮ್‍ರವರು ತಮ್ಮ ಜೀನವನದಲ್ಲಿ ಸರಳತೆಯನ್ನು ಅಳವಡಿಸಿಕೊಂಡು ಕನ್ನಡಪ್ರಭ, ಪ್ರಸಕ್ತ ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಾ ಇಡೀ ಜಿಲ್ಲೆಗೇ ಗುರುತಿಸಿಕೊಂಡಿದ್ದಾರೆ ಎಂದರು.
    
ಮಾಜಿ ಕೆ.ಯು.ಡಿ.ಎ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ತಾಲ್ಲೂಕು ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಸುಬ್ಬರಾಮಯ್ಯ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಗಬ್ಬೂರ್, ಖಜಾಂಚಿ ರವೀಂದ್ರ ಸಿಂಗ್, ನಿವೃತ್ತ ಶಿಕ್ಷಕರಾದ ನಾರಾಯಣಸ್ವಾಮಿ ಉಪಸ್ಥಿತರಿದ್ದರು
    
                                

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...