ಭಟ್ಕಳದಲ್ಲಿ ವಿವೇಕ ಜಾಗೃತ ಬಳಗದಿಂದ ವಿವೇಕೋದಯ 

Source: S.O. News Service | By MV Bhatkal | Published on 12th February 2019, 4:29 PM | Coastal News | Don't Miss |

ಭಟ್ಕಳ: ಮಿತವ್ಯಯ ಜೀವನಕ್ಕಾಗಿ ಆಸೆಗಳಿಗೆ ಕಡಿವಾಣ ಹಾಕಿ, ಹಾಸಿಗೆ ಇದ್ದಷ್ಟೆ ಕಾಲು ಚಾಚಬೇಕು. ಅಂತರಂಗದ ಶುದ್ದಿ, ದೇವರನ್ನು ಒಲಿಯಲು ಮೊದಲು ಸಾಕ್ಷಾತ್ಕಾರವಾಗಬೇಕು. ಎಂದು ಸಾಲಿಗ್ರಾಮದ ಡಿವೈನ್ ಪಾರ್ಕನ ಆಡಳಿತ ನಿರ್ದೇಶಕ ಗುರೂಜಿ ಡಾಕ್ಟರಜೀ ಹೇಳಿದರು.
ಅವರು ಲ್ಲಿನ ನ್ಯೂ ಇಂಗ್ಲೀಷ ಶಾಲೆಯ ಕಮಲಾವತಿ ರಾಮನಾಥ ಸಭಾಗೃಹದಲ್ಲಿ ವಿವೇಕೋದಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.  
ನಾನೆ ಇಲ್ಲಾ ನೀನೆ ಎಲ್ಲಾ ಎಂದಾಗಲೆ ಜೀವನ ಸಾಪಲ್ಯದ ಹಾದಿಯಲ್ಲಿ ತುಳಿಯಲಿದೆ. ಮನುಷ್ಯನಲ್ಲಿರುವ ಅಹಂ ತ್ಯಜಿಸಲು, ಸಂಸಾರ ಏರಿಳಿತಗಳನ್ನು ತಹಹದಿಗೆ ತರಲು, ತನ್ಮಯತೆ, ಅಂತಃ ಶುದ್ದಿ, ಮನೋಲ್ಲಾಸ, ನಿತ್ಯಶಾಂತಿಯ ಕುರಿತ ಆಧ್ಯಾತ್ಮಿಕÀ ಭೋದನೆ ನೀಡಿದರು. 
ನಂತರ ಭಟ್ಕಳ, ಹೊನ್ನಾವರ, ಕಾರವಾರ, ಕೈಗಾ, ಕದ್ರಾ, ಶಿರಸಿ, ಸಾಗರ, ತೀರ್ಥಹಳ್ಳಿ, ಉಡುಪಿ, ಕುಂದಾಪುರ, ಕಾರ್ಕಳಗಳಿಂದ ಆಗಮಿಸಿದ ಜಾಗೃತ ಬಳಗಗಳಿಗೆ ಆಧ್ಯಾತ್ಮಿಕ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ಕುಂದಾಪುರದ ಬಳಗ ಮೊದಲ ಬಹುಮಾನ, ಉಡುಪಿ ದ್ವಿತೀಯ ಬಹುಮಾನ ಪಡೆದರೆ ತೃತೀಯ ಸ್ಥಾನಕ್ಕೆ ಹೊನ್ನಾವರ ಮತ್ತು ಭಟ್ಕಳದ ಬಳಗದ ನಡುವೆ ಪೈಪೋಟಿ ನಡೆಯಿತು. ನಂತರ ಮತ್ತೆ ರಸಪ್ರಶ್ನೆ ಕೇಳಿದಾಗ ಹೊನ್ನಾವರ ತೃತೀಯ ಸ್ಥಾನ ಪಡೆಯಿತು. 
ಸಭೆಯಲ್ಲಿ ಭಟ್ಕಳ ಬಳಗದ ಅಧ್ಯಕ್ಷ ಸತೀಶ ರಾಯ್ಕರ, ಕೆ.ಜಿ. ಕರಿಸಿದ್ದಪ್ಪಾ, ಶ್ರೀಪತಿ ಸೋಮಯಾಜಿ, ವಾಸು ಸುವರ್ಣ ಇದ್ದರು. ತಾಲೂಕಿನ ವಿವದಡೆಯಿಂದ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...