ಬಿಜೆಪಿ ಪಕ್ಷದ ದುರಹಂಕಾರದ ಪರಮಾವಧಿ

Source: sonews | By Sub Editor | Published on 17th May 2018, 10:39 PM | Coastal News | State News | Special Report | Don't Miss |

ವಿರೋಧ ಪಕ್ಷವನ್ನೇ ವಿಧಾನಸಭೆಯಲ್ಲಿ ಪ್ರವೇಶಗೊಡದಿರುವ ಸರ್ವಾಧಿಕಾರ ಧೋರಣೆಯ ಬಿಜೆಪಿಯ ರಾಜಕೀಯ ಅಜೆಂಡಾವನ್ನು ಬಹಿರಂಗವಾಗಿ ಯಡಿಯೂರಪ್ಪ ಸುಧ್ಧಿಗೋಷ್ಠಿಯಲ್ಲಿ ಹೇಳಿದ್ದಾರೆ. ಪ್ರಜಾಪ್ರಭುತ್ವದ ಅಂತಃಸತ್ವವೇ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷ ಇಬ್ಬರೂ ಜೊತೆಯಾಗಿ ರಾಜ್ಯದ ಹಿತಕ್ಕಾಗಿ ಆಡಳಿತ ನಡೆಸೋದು.

ಕಾಂಗ್ರೆಸ್ ಮುಕ್ತ ಭಾರತ ಎಂದು ದೇಶವಿಡೀ ಘೋಷಿಸುತ್ತಾ ಮೆರೆದಾಡಿದ ಬಿಜೆಪಿಗೆ ಮುಂದಿನ ದಿನಗಳು ಸಂಕಷ್ಟಮಯವಾಗೋದರಲ್ಲಿ ಸಂಶಯವಿಲ್ಲ. ಅದಕ್ಕೀಗಾಗಲೇ ಮೇಘಾಲಯ ಗೋವಾ ಬಿಹಾರ ಮುಂತಾದ ಕಡೆ ವೇದಿಕೆ ಸಜ್ಜುಗೊಳ್ಳುತ್ತಿದೆ.

ಇತ್ತ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕಾಗಿ ಸಂವಿಧಾನವನ್ನೇ ಬುಡಮೇಲುಗೊಳಿಸಲು ನಿಂತಾಗ ಅತ್ತ ಗೋವಾ ಮತ್ತು ಮೇಘಾಲಯ ರಾಜ್ಯಗಳಲ್ಲಿ ಭಾರಿ ಬೆಲೆಯನ್ನು ತೆರಬೇಕಾದ ಸನ್ನಿವೇಶ ನಿರ್ಮಾಣ ಆಗೋದರಲ್ಲಿ ಎರಡು ಮಾತಿಲ್ಲ. ಗೋವಾ ಮತ್ತು ಮೇಘಾಲಯದಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗ ರಾಜ್ಯಪಾಲರು ಆದೇಶ ಬೇರೆಯೇ ಆಗಿತ್ತು.

ಬಿಜೆಪಿ ಮತ್ತು ರಾಜ್ಯ ಶಾಸಕರು ಅತಿಯಾದ ಆತ್ಮವಿಶ್ವಾಸ ಹೊಂದಿದ್ದಾರೆ. ಬಹುಶಃ ಇದು ಅವರಿಗೆ ಮುಳುವಾಗುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿದೆ. ಬಿಜೆಪಿ ರಾಜಕೀಯ ನಾಯಕರು ಮಾತಿನ ನೈತಿಕತೆಯನ್ನು ಕಳಕೊಂಡಿರೋದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಪ್ರಮಾಣವಚನ ಸ್ವೀಕಾರದ ಒಂದು ಗಂಟೆಯೊಳಗೆ ರೈತರ ಸಾಲ ಮನ್ನಾ ಎಂದು ಭಾಷಣ ಮಾಡಿದ್ದ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುತ್ತಲೇ ಸಾಲ ಮನ್ನಾಕೆ ನಾಲ್ಕು ದಿನದ ಕಾಲಾವಕಾಶ ಕೇಳುತ್ತಾರೆ. ಪ್ರಾರಂಭದಲ್ಲೇ ಈ ಪರಿ ಎಡವಟ್ಟು ಮಾಡಿಕೊಳ್ಳಬಹುದಾದರೆ ಮುಂಬರುವ ದಿನಗಳಲ್ಲಿ ಹೇಗೆ ಒಳ್ಳೆಯ ಆಡಳಿತ ನೀಡಿಯಾರು ಎಂಬ ಕುತೂಹಲವು ಜನರಲ್ಲಿ ವ್ಯಕ್ತವಾಗಬಹುದು.

ಕೃಪೆ:worldkannadiga.com

Read These Next

ಕಾಯುವವರೇ ಕೊಲ್ಲುವವರಾದಾಗ..

ಒಂದು ಅಸಮಾನ ಮತ್ತು ಪುರುಷ ಪ್ರಧಾನ ಸಮಾಜದಲ್ಲಿ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ಮಹಿಳೆ ಮತ್ತು ಮಕ್ಕಳಂತ ...

ಕೇರಳ ಜಮಾಅತೆ ಇಸ್ಲಾಮಿ IRF ರಿಲೀಫ್ ವಿಂಗ್ ಘಟಕದಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ

ಕೇರಳ: ಜಮಾಅತೆ ಇಸ್ಲಾಮಿ ಹಿಂದ್ ಕೇರಳ ಘಟಕದ ಸಂತೃಸ್ಥ ಪರಿಹಾರ ಘಟಕ IRF ರಿಲೀಫ್ ವಿಂಗ್ ಜಿಐಎಚ್ ಕೇರಳದ ಸ್ವಯಂ ಸೇವಕರು ಪ್ರವಾಹ ಪೀಡಿತ ...

ಕಾಯುವವರೇ ಕೊಲ್ಲುವವರಾದಾಗ..

ಒಂದು ಅಸಮಾನ ಮತ್ತು ಪುರುಷ ಪ್ರಧಾನ ಸಮಾಜದಲ್ಲಿ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ಮಹಿಳೆ ಮತ್ತು ಮಕ್ಕಳಂತ ...