ಧಾರವಾಡ:ಜುಲೈ19 ಮತ್ತು 20ರಂದು ಕರ್ನಾಟಕ ವಿದ್ಯಾವರ್ಧಕ ಸಂಘದ  128 ನೇ ಸಂಸ್ಥಾಪನಾ ದಿನಾಚರಣೆ 

Source: so english | By Arshad Koppa | Published on 19th July 2017, 9:03 AM | State News | Guest Editorial |

ಉದ್ಘಾಟಕರು        :    ಡಾ. ಎಸ್.ಎಂ. ಜಾಮದಾರ, ನಿವೃತ್ತ ಐ.ಎ.ಎಸ್. ಅಧಿಕಾರಿಗಳು    
ಮುಖ್ಯ ಅತಿಥಿಗಳು    :    ಶ್ರೀ ಮೋಹನ ಅಳ್ವ, ಕಾರ್ಯಾಧ್ಯಕ್ಷರು, ಅಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳು,    
ಮೂಡಬಿದಿರಿ

                                                                      ಮುಂಜಾನೆ ಅವಧಿ - 11 
ಕನ್ನಡ ಉಸಿರಾಗಿ ಪಾಪು    :    ಡಾ. ಶಾಂತಿನಾಥ ದಿಬ್ಬದ, ಸಂಯೋಜಕರು, ಪಂಪ ಅಧ್ಯಯನ ಪೀಠ, ಕ.ವಿ.ವಿ. ಧಾರವಾಡ
ಪಾಪು ಸಾಹಿತ್ಯ        :    ಪ್ರೊ. ಮಾಲತಿ ಪಟ್ಟಣಶೆಟ್ಟಿ, ಮಾಜಿ ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ    
ಪಾಪು ಜೀವನ ಶೈಲಿ    :    ಡಾ. ಸರಜೂ ಕಾಟ್ಕರ, ಹಿರಿಯ ಪತ್ರಕರ್ತರು, ಬೆಳಗಾವಿ

                              ಚಹಾ ವಿರಾಮ

ಪಾಪು ಹೋರಾಟದ ಜೀವನ :    ಪ್ರೊ. ಅಲ್ಲಮಪ್ರಭು ಬೆಟದೂರ, ನಿವೃತ್ತ ಪ್ರಾಧ್ಯಾಪಕರು, ಹೋರಾಟಗಾರರು, ಕೊಪ್ಪಳ
ಪಾಪು ಜಾತ್ಯಾತೀತತೆ        :    ಶ್ರೀ ಎ.ಎಸ್.ಎನ್. ಹೆಬ್ಬಾರ, ಹಿರಿಯ ನ್ಯಾಯವಾದಿಗಳು, ಕುಂದಾಪುರ
ವ್ಯಕ್ತಿ ಚಿತ್ರಣ            :    ಶ್ರೀ ಚನ್ನಬಸವಣ್ಣ, ಲೋಹಿಯಾ ಪ್ರಕಾಶನ, ಬಳ್ಳಾರಿ

                             ಊಟದ ವಿರಾಮ
                                          ಮಧ್ಯಾಹ್ನದ ಅವಧಿ - 2-30 

ಪಾಪು ಪತ್ರಿಕಾ ಭೀಷ್ಮ        :    ಶ್ರೀ ಮನೋಜಕುಮಾರ ಪಾಟೀಲ, ಹಿರಿಯ ಪತ್ರಕರ್ತರು, ಧಾರವಾಡ
ಪಾಪು ಸಾಮಾಜಿಕ ಕಾಳಜಿ   :    ಡಾ. ಬಸವರಾಜ ಸಾದರ, ನಿವೃತ್ತ ನಿರ್ದೇಶಕರು, ಬೆಂಗಳೂರು ಆಕಾಶವಾಣ 
ಸ್ತ್ರೀಪರ ಪಾಪು            :    ಡಾ. ಶಾಂತಾ ಇಮ್ರಾಪೂರ, ಪ್ರಾಧ್ಯಾಪಕರು, ಕ.ವಿ.ವಿ. ಧಾರವಾಡ 
        
                         ಚಹಾ ವಿರಾಮ                       ಸಂಜೆ 4  

                       ಸಮಾರೋಪ ಸಮಾರಂಭ
ಮುಖ್ಯ ಅತಿಥಿಗಳು    :    ಡಾ. ಕೆ.ಆರ್. ಇಕ್ಬಾಲ್ ಮಹಮ್ಮದ 
                ನಿರ್ದೇಶಕರು, ದೂರಶಿಕ್ಷಣ `ಮಾನು’ ವಿಶ್ವವಿದ್ಯಾಲಯ, ಹೈದರಾಬಾದ

ಅಧ್ಯಕ್ಷತೆ            :    ಪ್ರೊ. ಚಂದ್ರಶೇಖರ ಪಾಟೀಲ, ಹಿರಿಯ ಸಾಹಿತಿಗಳು, ಬೆಂಗಳೂರು

ಸಾಂಸ್ಕøತಿಕ ಸಂಜೆ                                   ಸಂಜೆ -6

ಸಾಂಸ್ಕøತಿಕ ಕಾರ್ಯಕ್ರಮ    :    ಶ್ರೀ ಜಿ.ಬಿ. ಶಿವರಾಜು
ಚಾಲನೆ                ಉಪಾಧ್ಯಕ್ಷರು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು
    
     


 

ಸಾಂಸ್ಕøತಿಕ ಕಾರ್ಯಕ್ರಮಗಳು
                       
                                   ಸಂಜೆ 6 ಗಂಟೆ

ನೃತ್ಯ ವೈಭವ
ಅಭಿವ್ಯಕ್ತಿ ಕಲಾತಂಡ, ಧಾರವಾಡ ಅವರಿಂದ
ನೃತ್ಯ ಸಂಯೋಜನೆ : ಶ್ರೀಮತಿ ಸೀತಾ ಛಪ್ಪರ

ನಾಟ್ಯಯೋಗ ರಂಗಸಂಸ್ಥೆ, ಸಾಲಾಪೂರ ಪ್ರಸ್ತುತಪಡಿಸುವ 
ರಸ್ಕಿನ್ ಬಾಂಡ್ ಅವರ ಕಥೆ ಆಧಾರಿತ ನಾಟಕ
`ನವಿಲೂರ ನಿಲ್ದಾಣ’
ರಚನೆ : ನಿರ್ದೇಶನ : ಮಹಾಂತೇಶ ರಾಮದುರ್ಗ

=======================================================

20 ಜುಲೈ 2017                                     10-30 ಗಂಟೆ                              
                       
128 ನೇ ಸಂಸ್ಥಾಪನಾ ದಿನಾಚರಣೆ
ನವೀಕರಣಗೊಂಡ ಸಂಘದ ಪಾರಂಪರಿಕ ಕಟ್ಟಡ ಉದ್ಘಾಟನೆ
ಪಾಪು ಪುತ್ಥಳಿ ಅನಾವರಣ 
 ಸಮಾರಂಭ

    ಉದ್ಘಾಟಕರು        :    ಸನ್ಮಾನ್ಯ ಶ್ರೀ ಸಿದ್ದರಾಮಯ್ಯ
                    ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರಕಾರ
    
    ಸಾನ್ನಿಧ್ಯ            :    ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು
                    ಶ್ರೀ ಜ್ಞಾನಯೋಗಾಶ್ರಮ, ವಿಜಯಪುರ

    ಸಮ್ಮುಖ            :    ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು
                    ಶ್ರೀ ಮುರುಘಾಮಠ, ಧಾರವಾಡ
                    ಪೂಜ್ಯ ಶ್ರೀ ನಿಜಗುಣಪ್ರಭು ಮಹಾಸ್ವಾಮಿಗಳು
                    ಶ್ರೀ ತೋಂಟದಾರ್ಯ ಮಠ, ಮುಂಡರಗಿ
                    ಪೂಜ್ಯ ಶ್ರೀ ಬಸವಾನಂದ ಮಹಾಸ್ವಾಮಿಗಳು
                    ಶ್ರೀ ಗುರುಬಸವ ಮಹಾಮನೆ, ಮನಗುಂಡಿ


    ಅಧ್ಯಕ್ಷತೆ         :    ಮಾನ್ಯ ಶ್ರೀ ಬಸವರಾಜ ಹೊರಟ್ಟಿ
                    ಮಾಜಿ ಸಚಿವರು ಹಾಗೂ ವಿಧಾನಪರಿಷತ್ ಶಾಸಕರು


    ಗೌರವ ಸನ್ಮಾನ        :    ನಾಡೋಜ ಡಾ. ಪಾಟೀಲ ಪುಟ್ಪಪ್ಪ
                    ಅಧ್ಯಕ್ಷರು, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ    

    ಮುಖ್ಯ ಅತಿಥಿಗಳು    :    ಮಾನ್ಯ ಶ್ರೀ ಬಸವರಾಜ ರಾಯರಡ್ಡಿ
                    ಸಚಿವರು, ಉನ್ನತ ಶಿಕ್ಷಣ, ಕರ್ನಾಟಕ ಸರಕಾರ

                    ಮಾನ್ಯ ಶ್ರೀಮತಿ ಉಮಾಶ್ರೀ
                    ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು 
ಸಂಸ್ಕøತಿ     ಕರ್ನಾಟಕ ಸರಕಾರ
                    ಮಾನ್ಯ ಶ್ರೀ ವಿನಯ ಕುಲಕಣ ್
                    ಸಚಿವರು, ಗಣ  ಹಾಗೂ ಭೂವಿಜ್ಞಾನ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ                         ಕರ್ನಾಟಕ ಸರಕಾರ
                    ಮಾನ್ಯ ಶ್ರೀ ಅರವಿಂದ ಬೆಲ್ಲದ
                    ವಿಧಾನಸಭೆ ಶಾಸಕರು, ಧಾರವಾಡ ಶಹರ     

                    ಡಾ. ವೂಡೆ ಪಿ. ಕೃಷ್ಣ
                    ಅಧ್ಯಕ್ಷರು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು

                                                    ಸಂಜೆ-4 ಗಂಟೆ             
                       
50 ವರ್ಷಗಳಿಗೆ ಮೇಲ್ಪಟ್ಟು ಕನ್ನಡಕ್ಕಾಗಿ ಶ್ರಮಿಸಿದ 
ಹೊರನಾಡು-ಒಳನಾಡು ಕನ್ನಡ ಸಂಘಗಳಿಗೆ ಗೌರವ ಸನ್ಮಾನ

                1.    ಕರ್ನಾಟಕ ಸಂಘ, ಪುಣೆ        
                2.    ಕರ್ನಾಟಕ ಸಂಘ, ಮುಂಬಯಿ
                3.    ಕನ್ನಡ ಸಂಘ, ಪುಣೆ
                4.    ಐನಾವರ ಕನ್ನಡ ಸಂಘ, ಚೆನೈ
                5.    ಕರ್ನಾಟಕ ವೈಭವ ಸಂಸ್ಥೆ, ಅಂಬರನಾಥ
                6.    ಕರ್ನಾಟಕ ಸಂಘ, ಕಾಶಿ
                7.    ಕರ್ನಾಟಕ ಸಂಘ, ಬರೋಡಾ
                8.    ಕರ್ನಾಟಕ ಸಂಘ, ಮಂಡ್ಯ
                9.    ಕನ್ನಡ ಸಂಘ, ಕಾಂತಾವರ
                10.    ಕರ್ನಾಟಕ ಸಂಘ, ಶಿವಮೊಗ್ಗ


ಸಂಜೆ 6 ಗಂಟೆ
ವೈವಿಧ್ಯಮಯ ನೃತ್ಯ
ರತಿಕಾ ನೃತ್ಯ ನಿಕೇತನ, ಧಾರವಾಡ ತಂಡದಿಂದ
ನೃತ್ಯ ಸಂಯೋಜನೆ : ಶ್ರೀಮತಿ ನಾಗರತ್ನಾ ಹಡಗಲಿ

ಸಂಪ್ರದಾಯ ಸೊಬಗು 
ಜಾನಪದ ಸಂಶೋಧನಾ ಕೇಂದ್ರ
ಮಹಿಳಾ ಘಟಕ, ಧಾರವಾಡ

ಸಮುದಾಯ ಧಾರವಾಡ ಪ್ರಸ್ತುತಪಡಿಸುವ ನಾಟಕ
`ಕಾವ್ಯರಂಗ’
ನಿರ್ದೇಶನ: ವಿನ್ಯಾಸ: ಡಾ. ಶ್ರೀಪಾದ ಭಟ್
=============================================================


ಅಧ್ಯಕ್ಷರಾಗಿ ಪಾಪು 50 ವರ್ಷ 

 ಕನ್ನಡದ ಕಟ್ಟಾಳು, ಕನ್ನಡವನ್ನೇ ಉಸಿರಾಗಿಸಿಕೊಂಡ ಧೀಮಂತ ಪತ್ರಕರ್ತ, ಹೋರಾಟಗಾರ ಹೀಗೆ ಹಲವು ಉಪಮೆಗಳೊಂದಿಗೆ ಕರೆಯಲ್ಪಡುವ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಚುಕ್ಕಾಣ  ಹಿಡಿದು 50 ವರ್ಷಗಳಾದವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮೂಲಕ ಸೋಲರಿಯದ ಸರದಾರರಾಗಿ ನಿರಂತರವಾಗಿ ಅಧ್ಯಕ್ಷರಾಗಿ ಆಯ್ಕೆ ಆಗುತ್ತಾ ಬಂದದ್ದು `ಗಿನ್ನಿಸ್’ ದಾಖಲೆಯಾಗುವಂತಹದ್ದು. ಇಂದು ಆರೂವರೆ ಸಾವಿರ ಸದಸ್ಯರನ್ನು ಸಂಘವು ಹೊಂದಿದೆ. 128 ವರ್ಷಗಳಲ್ಲಿ ಒಟ್ಟು ಹದಿನೈದು ಮಹನೀಯರು ಅಧ್ಯಕ್ಷರಾಗಿ ಕಾರ್ಯಮಾಡಿದ್ದಾರೆ. ಬ್ರಿಟೀಷ ಕಲೆಕ್ಟರುಗಳಾದ ಝಿಗ್ಲರ್, ಎಂಡರಿಸನ್, ಫೆರಲಿ ಮತ್ತು ಸವಣೂರು ನವಾಬರಂತವರು ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ್ದಾರೆ. 1967 ರಿಂದ ಪಾಟೀಲ ಪುಟ್ಟಪ್ಪನವರ ನೇತೃತ್ವದ ಈ ಸುಧೀರ್ಘ ಅವಧಿಯಲ್ಲಿ ಸಂಘವು ತನ್ನ ಮೂಲ ಆಶಯದೊಂದಿಗೆ ಎಲ್ಲ ರೀತಿಯಲ್ಲಿ ಬೆಳವಣ ಗೆ ಕಾಣುವಂತೆ ಮಾಡಿದ ಹಿರಿಮೆ ಪುಟ್ಟಪ್ಪರವರದಾಗಿದೆ.
 ಸಂಕ್ಷಿಪ್ತ ಪರಿಚಯ
ಕರ್ನಾಟಕ ವಿದ್ಯಾವರ್ಧಕ ಸಂಘ 
ಹದಿನೆಂಟನೆ ಶತಮಾನದ ಉತ್ತರಾರ್ಧ ನಾಡಿನ ಉತ್ತರ ಭಾಗದಲ್ಲಿ ಅದೂ ಧಾರವಾಡ ಪ್ರದೇಶದಲ್ಲಿ ಮರಾಠಿ ಪ್ರಾಬಲ್ಯ ಮೆರೆಯತೊಡಗಿ ಕನ್ನಡದ ಧ್ವನಿ ಕ್ಷೀಣ ಸಿದಂತಾಗಿತ್ತು. ಕನ್ನಡಿಗರಿಗೆ ತಮ್ಮ ನೆಲವೇ ಪರಕೀಯವೆನಿಸಿದ ಭಾವನೆ ಮೂಡಿದ್ದ ಕಾಲವದು. ಇಂತಹ ಸಂಕ್ರಮಣ ಸಂದರ್ಭದಲ್ಲಿ `ಸಿರಿಗನ್ನಡಂ ಗೆಲ್ಗೆ’ ಮಂತ್ರದ ದೃಷ್ಟಾರ ರಾ. ಹ. ದೇಶಪಾಂಡೆ ಅವರ ನೇತೃತ್ವದಲ್ಲಿ ನಗರದ ಹಿರಿಯರ ಕನ್ನಡದ ಕಾಳಜಿಯ ಫಲವಾಗಿ 20 ಜುಲೈ 1890 ರಂದು ಕರ್ನಾಟಕ ವಿದ್ಯಾವರ್ಧಕ ಸಂಘ ಅಸ್ತಿತ್ವಕ್ಕೆ ಬಂತು. ಕನ್ನಡದ ಸಾಹಿತ್ಯ ಪ್ರೋತ್ಸಾಹದ ಪರಿಣಾಮ `ಬಾಣ’ ಕಾದಂಬರಿಯಂತಹ ನೂರಾರು ಶ್ರೇಷ್ಠ ಕೃತಿಗಳು ರಚಿಸಲ್ಪಟ್ಟವು. ಸಂಘದ ಸಂಸ್ಥಾಪಕರ ದೂರದೃಷ್ಟಿಯ ಫಲ ಇಂದು ಧಾರವಾಡ ಪರಿಸರ ನೂರಕ್ಕೆ ನೂರರಷ್ಟು ಕನ್ನಡಮಯವಾದದ್ದು. ದೇಶದ ಸ್ವಾತಂತ್ರ್ಯ ಹೋರಾಟಕ್ಕೂ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ ಸಂಘವು, ಸ್ಥಾಪನೆಯ ಉದ್ದೇಶಕ್ಕನುಗುಣವಾಗಿ ಕರ್ನಾಟಕದ ಏಕೀಕರಣದ ಸೂತ್ರದಾರನೆನಿಸಿಕೊಂಡಿತು. ಸಂಘ ಬಿತ್ತಿದ ಏಕೀಕರಣ ಬೀಜದ ಫಲ ದೇಶದ ನಕ್ಷೆಯಲ್ಲಿ ಕರ್ನಾಟಕ ರಾಜ್ಯದ ಗೆರೆಗಳು ಮೂಡುವಂತಾಯಿತು. ನಂತರ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ, ಗೋಕಾಕ ಚಳುವಳಿಯ ಯಶಸ್ವಿ ನೇತೃತ್ವ ಮೊದಲಗೊಂಡು 127 ವರ್ಷಗಳಿಂದ ಸಾರ್ಥಕ ಕನ್ನಡಮ್ಮನ ಸೇವೆಯಲ್ಲಿ ತೊಡಗಿಸಿಕೊಂಡ ಹೆಮ್ಮೆ ಕರ್ನಾಟಕ ವಿದ್ಯಾವರ್ಧಕ ಸಂಘದ್ದು. ಕನ್ನಡ-ಕನ್ನಡಿಗ-ಕರ್ನಾಟಕದ ಅಸ್ಮಿತೆಯ ಸಂರಕ್ಷಕನಂತೆ ಇಂದು ಕನ್ನಡದ ಗುಡಿಯಾಗಿ ನಮ್ಮ ಮುಂದಿದೆ.                
ಸಂಘದ ಕಟ್ಟಡಕ್ಕೆ ಕಾಯಕಲ್ಪ 
    ಶತಮಾನ ಕಂಡ ಸಂಘದ ಕಟ್ಟಡ ವಿನ್ಯಾಸ ಎಲ್ಲ ರೀತಿಯಿಂದಲೂ ಮಾದರಿಯಾಗಿದೆ. ಮೈಸೂರು ಮಹಾರಾಜರು ಕಟ್ಟಡ ಕಟ್ಟಲು ನೆರವು ನೀಡಿದ್ದು ಕನ್ನಡದ ಗುಡಿ ತಲೆ ಎತ್ತುವಂತೆ ಮಾಡಿದರು. ಮಣ್ಣನ್ನು ಬಳಸಿ ಇಟ್ಟಿಗೆಯಿಂದ ಕಟ್ಟಿದ ಈ ಕಟ್ಟಡದ ಆತ್ಮದೊಳಗೆ ಕನ್ನಡ-ಕನ್ನಡಿಗ-ಕರ್ನಾಟಕ ಉಸಿರಾಗಿಸಿಕೊಂಡು ಕರ್ನಾಟಕ ಕಟ್ಟಿದ ಹಿರಿಮೆ ಇದರದಾಗಿದೆ. 
    ಶತಮಾನೋತ್ತರ ಬೆಳ್ಳಿ ಹಬ್ಬವನ್ನು ಸಂಘವು ಆಚರಿಸುವ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಪಾರಂಪರಿಕ ಕಟ್ಟಡದ ನವೀಕರಣಕ್ಕೆ ನೆರವು ಕೇಳಿದಾಗ ಸಂಘ ನಾಡಿಗೆ ನೀಡಿದ ಕೊಡುಗೆಯನ್ನು ಬಲ್ಲವರಾಗಿದ್ದರಿಂದ ಮರು ಮಾತಿಲ್ಲದೇ ಒಂದು ಕೋಟಿ ಅನುದಾನವನ್ನು ತಕ್ಷಣ ಬಿಡುಗಡೆಗೆ ಆದೇಶಿಸಿ, ಹಣ ಬಿಡುಗಡೆ ಮಾಡಿದರು. ಅದರ ಫಲವಾಗಿ 128 ನೇ ಸಂಸ್ಥಾಪನಾ ದಿನದಂದು ನವೀಕರಣಗೊಂಡ ಸಂಘದ ಕಟ್ಟಡವನ್ನು ಹಣ ನೀಡಿದ ಕೈಗಳಿಂದಲೇ ಉದ್ಘಾಟನೆಗೊಳ್ಳುತ್ತಿರುವುದು ನಮಗೆಲ್ಲಾ ಅಭಿಮಾನ ಮತ್ತು ಹೆಮ್ಮೆ.
    ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ವಿದ್ಯಾವರ್ಧಕ ಸಂಘದ ನಿರಂತರ ಕಾರ್ಯಚಟುವಟಿಕೆಗಳನ್ನು ಮತ್ತು ಹಣಕಾಸಿನ ಪಾರದರ್ಶಿಕೆಯಲ್ಲಿ ವೆಚ್ಚ ಮಾಡುವ ಬಗ್ಗೆ ಮೆಚ್ಚುತ್ತಾ ಎಲ್ಲ ರೀತಿಯ ನೆರವು, ಸಹಕಾರ ನೀಡುತ್ತಾ ಬಂದಿದೆ. ಹಾಗೆಯೇ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದ ಕಟ್ಟಡಕ್ಕೆ ಅನುದಾನ ನೀಡಿದ್ದಲ್ಲದೇ ಸಂಘದ ಸಿಬ್ಬಂದಿಗೆ ವೇತನಾನುದಾನವನ್ನು ನೀಡುತ್ತಲಿದೆ. 125 ರ ಸವಿನೆನಪಿಗಾಗಿ ವಿಶೇಷ ಅನುದಾನ ನೀಡಿದ್ದನ್ನೂ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇವೆ.      
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...