ಕಾರ್ಮಿಕ ಹಾಗೂ ಪ್ರಗತಿಪರ ಸಂಘಟನೆಗಳಿಂದ ಧರಣಿ

Source: sonews | By sub editor | Published on 11th July 2018, 6:25 PM | State News |

ಕೋಲಾರ: ಕಾರ್ಮಿಕರಿಗೆ ವೇತನ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ನಿರ್ಲಕ್ಷ ಮಾಡುತ್ತಿದ್ದ ಶಿವಂ ಆಟೋಟೆಕ್ ಕಂಪನಿ ಮುಂದೆ ಪ್ರಗತಿಪರ ಸಂಘಟನೆಗಳು ಮತ್ತು ಕಾರ್ಮಿಕರಿಂದ ಸಾಂಕೇತಿಕವಾಗಿ ಧರಣಿ ಮಾಡಿ, ಒಂದು ವಾರದ ಸಮಯ ಕೊಟ್ಟು, ಹೆಚ್,ಆರ್ ಮ್ಯಾನೇಜರ್ ರಂಗನಾಥ್‍ರವರನ್ನು ಒತ್ತಾಯಿತು.
    
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಕೃಷಿ ಜಮೀನನ್ನು ಜಿಲ್ಲೆಯ ಅಭಿವೃದ್ದಿ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುತ್ತೇವೆಂದು ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ಸ್ಥಳಿಯರಿಗೆ ಉದ್ಯೋಗ ಕೊಡದೇ ನಿರ್ಲಕ್ಷ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನವಾಗಿರುವುದಕ್ಕೆ ಸ್ಥಳಿಯ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ವೇಮಗಲ್ ಕೈಗಾರಿಕಾ ಪ್ರದೇಶದ ಶಿವಂ ಆಟೋ ಟೇಕ್ ಕಂಪನಿಯ ಸ್ಥಳಿಯ ಕಾರ್ಮಿಕರನ್ನು ಸಂಪೂರ್ಣವಾಗಿ ನಿರ್ಲಕ್ಷೆ ಮಾಡಿ ತಮಿಳುನಾಡು ಕಾರ್ಮಿಕರಿಗೆ ಖಾಯಂ ನೌಕರಿ ಕೊಟ್ಟು ಹೆಚ್ಚಿನ ವೇತನದ ಜೊತಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸ್ಥಳಿಯ ಕಾರ್ಮಿಕರಿಗೆ ವೇತನ ತಾರತಮ್ಯ ಮೂಲಭೂತ ಸೌಕರ್ಯಗಳಾದ ಊಟ, ರಕ್ಷಾ ಕವಚ, ಹಾಗೂ ಶೌಚಾಲಯ ಮತ್ತಿತರ ಸಮಸ್ಯೆಗಳ ಜೊತೆಗೆ ದ್ವೀಚಕ್ರ ವಾಹನಗಳನ್ನು ಕಂಪನಿ ಮುಂಬಾಗ ನಿಲ್ಲಿಸುವಂತೆ ಶರತ್ತ್‍ಗಳನ್ನು ವಿಧಿಸಿ, ತೊಂದರೆ ಕೊಡುವ ಆಡಳಿತ ಮಂಡಳಿಯ ಅದಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
    
ಸ್ಥಳಿಯ ಮುಖಂಡರಾದ ಲೋಕೆಶ್ ಹಾಗೂ ಮಂಜುನಾಥ್ ಮಾತನಾಡಿ ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ವೇತನವನ್ನು ಕಡಿತಗೊಳಿಸಿ, ಪಿ.ಎಪ್, ಇಎಸ್.ಐ ಹಾಗೂ ಕಾರ್ಮಿಕರ ಹಕ್ಕುಗಳನ್ನು ಉಲ್ಲಂಘನೆ ಮಾಡಿದರೆ ಕಂಪನಿಯ ಮುಂದೆ ಬೃಹತ್ ಮಟ್ಟದ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು.
    
ಸ್ಥಳಕ್ಕೆ ಬಂದ ವೇಮಗಲ್ ಪಿ,ಎಸ್,ಐ ಲಕ್ಷೀನಾರಾಯಣ ಸಾರ್ ರವರು ಮಾತನಾಡಿ ಆಡಳಿತ ಮಂಡಳಿಗೆ ಒಂದು ವಾರದೊಳಗೆ ಸಂಬಂಧಪಟ್ಟ ಅಧಿಕಾರಿಗಳೊಡನೆ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ಮ್ಯಾನೇಜರ್ ರಂಗನಾಥ್‍ರವರಿಗೆ ತಿಳಿಸಿ ಕಾರ್ಮಿಕರಿಗೆ ಭರವಸೆ ನೀಡಿದ ನಂತರ ಹೋರಾಟವನ್ನು ಹಿಂಪಡೆಯಲಾಯಿತು.
    
ಈ ಹೋರಾಟದಲ್ಲಿ ನೊಂದ ಕಾರ್ಮಿಕರು, ಸ್ಥಳಿಯ ಸಾರ್ವಜನಿಕರು, ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಅಮರನಾರಾಯಣಸ್ವಾಮಿ, ನಟರಾಜ್, ಗಣೇಶ್, ಮುಂತಾದವರಿದ್ದರು.

Read These Next

ಶುಕ್ರವಾರದ ನಮಾಝ್ ನಲ್ಲಿ ಮುಸ್ಲಿಮ್ ಸಮುದಾಯದಿಂದ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆ ​​​​​​​

ಉಡುಪಿ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗಂಗೊಳ್ಳಿ ...