ಬೇಟೆಗಾರನ ಗುಂಡಿಗೆ ಜಿಂಕೆ ಸಾವು

Source: sonews | By Staff Correspondent | Published on 12th March 2019, 4:58 PM | Coastal News |

ಮುಂಡಗೋಡ : ನೀರು ಕುಡಿಯಲು ಬಂದ ಜಿಂಕೆಯು  ಬೇಟೆಗಾರ ಗುಂಡಿಗೆ ಬಲಿಯಾದ ಘಟನೆ ತಾಲೂಕಿನ ಅತ್ತಿವೇರಿ ಬಳಿ ನಡೆದಿದೆ.

ಜಿಂಕೆಯು ಅತ್ತಿವೇರಿ ಪಕ್ಷಿಧಾಮದ ಬಳಿಯಿರುವ ಜಲಾಶಯಕ್ಕೆ ರಾತ್ರಿ ಸಮಯದಲ್ಲಿ ನೀರು ಕುಡಿಯಲು ಬಂದಾಗ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. 

ಬೇಟೆಗಾರನ ಬಂದೂಕಿನ ಗುಂಡಿನ ಹೊಡೆತದಿಂದ ಘಾಸಿಯಾಗಿ ಪ್ರಾಣ ಉಳಿಸಿಕೊಳ್ಳಲು ಓಡಿದೆ ನಿತ್ರಾಣಾಗಿ ಪಕ್ಕದ ಮಾವಿನತೋಪಿನಲ್ಲಿ ಪ್ರಾಣಬಿಟ್ಟಿದೆ ಎಂದು ಹೇಳಲಾಗಿದೆ.

ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆಯವರು ಸ್ಥಳಕ್ಕೆ ತೆರಲಿ ಪರಿಶಿಲನೇ ನಡೆಸಿ ಮರಣೋತ್ತರ ನಡೆಸಿದಾಗ ಗುಂಡಿನ ದಾಳಿಯಾಗಿರುವುದು ತಿಳಿದು ಬಂದಿದೆ. ಜಿಂಕೆಯ ಚೆಪ್ಪೆಗೆ ಎರಡು ಗುಂಡುಗಳು ತಾಗಿರುವ ಗುರುತುಗಳಿವೆ. ಹಿಂಬದಿಯ ಒಂದು ಕಾಲು ಸಹ ಮುರಿದಿದೆ. ಇಲಾಖೆಯು ಪ್ರಕರಣವನ್ನು ದಾಖಲಿಸಿಕೊಂಡಿದೆ.

ಮೊಬೈಲ್ ಮುಖಾಂತರ ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್.ಜಿ.ಭಟ್ಟ ಈ ಕುರಿತು ಪ್ರಶ್ನೆಸಿದಾಗ ಜಿಂಕೆ ಬೇಟೆಗಾರರನ್ನು ಹುಡಕಾಡುವ ಪ್ರಕ್ರಿಯೇ ಮುಂದುವರೆದಿದೆ ಒಂದುವಾರದೊಳಗಾಗಿ ಬೇಟೆಗಾರರನ್ನು ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದರು.

ಇತಿಚ್ಚಿನ ದಿನಗಳಲ್ಲಿ ತಾಲೂಕಿನಲ್ಲಿ ಬೇಟೆಗಾರರಿಗೆ ಪ್ರಾಣಿಗಳು ಹೆಚ್ಚಾಗಿ ಬಲಿಯಾಗುತ್ತಿದ್ದು ಅರಣ್ಯ ಇಲಾಖೆಯ ನಿಷ್ಕಾಳಜಿಯೇ ಎಂದು ಸಾರ್ವಜನಿಕರು ಪ್ರಶ್ನೆಸುವಂತಾಗಿದೆ. ನೀರಿನ ಸಂಗ್ರಹ  ಕೆರೆ ಪ್ರದೇಶಗಳಲ್ಲಿ ಇಲಾಖೆ ಕಟ್ಟೆಚ್ಚರ ವಹಿಸಿದರೆ ಬೇಟೆಗಾರರಿಗೆ ಕಡಿವಾಣ ಹಾಕಬಹುದಾಗಿದೆ ಎಂದು ಪ್ರಜ್ಞಾವಂತರ ಮಾತು .
 

Read These Next