ಶಾಂತಿ ಭಂಗ ಮಾಡುವರ ವಿರುದ್ಧ ನಿರ್ದಾಕ್ಷ್ಯ ಕ್ರಮ : ಶಾಂತಿ ಸಭೆಯಲ್ಲಿ ಪಿಎಸ್‍ಆಯ್ ಹರಿಹರ

Source: sonews | By Staff Correspondent | Published on 19th November 2018, 11:53 PM | Coastal News |

ಮುಂಡಗೋಡ : ಪಟ್ಟಣದಲ್ಲಿ ಬುಧವಾರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೊಲೀಸ ಠಾಣೆಯಲ್ಲಿ ಶಾಂತಿ ಸಭೆ ಪ್ರಭಾರ ಸಬ್ ಇನ್ಸಪೇಕ್ಟರ ಚಂದ್ರಶೇಖರ ಹರಿಹರ ನೇತೃತ್ವದಲ್ಲಿ ವಿವಿಧ ಮುಖಂಡರ ಸಮ್ಮುಖದಲ್ಲಿ ಶಾಂತಿ ಸಭೆ ನಡೆಯಿತು.

ಪ್ರಭಾರ ಸಬ್‍ಇನ್ಸಪೇಕ್ಟರ ಚಂದ್ರಶೇಕರ್ ಹರಿಹರ ಮಾತನಾಡಿ, ಶಾಂತಿಯುತವಾಗಿ  ಹಬ್ಬ ಆಚರಣೆ ನಡೆಸಿ ಮೆರವಣಿಗೆಯಲ್ಲಿ ಟ್ರಾಫೀಕ್ ಸಮಸ್ಯೆ ಆಗದಂತೆ  ಸಹಕರಿಸಿ ಮತ್ತು ಜಿಲ್ಲೆಯಲ್ಲಿ ಎಲ್ಲಾ ತಾಲೂಕಿನಲ್ಲಿ  ಈದ್‍ಮಿಲಾದ್  ಹಬ್ಬ ಇರುವುದರಿಂದ  ನಮ್ಮ ಇಲಾಖೆಯ ಸಿಬ್ಬಂದಿಗಳೇ ಬಂದೋಬಸ್ತದಲ್ಲಿ ಇರುತ್ತಾರೆ. ಮೇರವಣಿಗಿಗೆ ತಮ್ಮದೆ ಆದ ವಾಲಂಟರಗಳನ್ನು ನೇಮಿಸಬೇಕು. ಮೆರವಣಿಗೆಯು ಶಾಂತಿರೀತಿಯಿಂದ ನಡೆದುಕೊಂಡು ಹೋಗುವಂತೆ ನೋಡಿಕೊಳ್ಳಬೇಕು. ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ನೀಡುವುದಿಲ್ಲಾ. ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹಾಕಿ ಶಾಂತಿ ಭಂಗ ಮಾಡುವರ ವಿರುದ್ಧ ಕ್ರಮ ಕೈಗೋಳ್ಳಲಾಗುವುದು ಎಂದು ಎಚ್ಚರಿಸಿದರು.

ಸಮಾಜದ ಮುಖಂಡರು  ಮಾತನಾಡಿ,  ಪಟ್ಟಣದ 5 ಜಮಾತಿನವರು ಬನ್ನಿಗಟ್ಟಿ ಹತ್ತಿರ ಸೇರಿ ಅಲ್ಲಿಂದ ಮೇರವಣಿಗೆ ಪ್ರಾರಂಭ ವಾಗುತ್ತದೆ. ಈ ಮೆರವಣಿಗೆಯಲ್ಲಿ ಸುಮಾರ 8000 ಜನರು ಸೇರುವ ಹಿನ್ನೆಲೆ ಮೆರವಣಿಗೆ ಮಾರ್ಗವಾಗಿರುವ ಪಟ್ಟಣದ ಬಸವನಬೀದಿಯಲ್ಲಿ  ವಾಹನಗಳನ್ನು ನಿಲ್ಲಿಸುವದರಿಂದ ಮೆರವಣಿಗೆಗೆ ಅಡಚಣೆ ಆಗುತ್ತದೆ ಎಂದರು ಇದಕ್ಕೆ ಪ್ರತಿಕ್ರಿಸಿದ ಸಿಪಿಐ  ಈ ಬಗ್ಗೆ ಮುನ್ನಚರಿಕೆಯಾಗಿ ಮತ್ತು ಯಾವುದೇ ಅಡಚಣೆ ಆಗದಂತೆ  ಕ್ರಮ ಕೈಗೊಳ್ಳಲಾಗುವುದು ಸಮಾಜದವರು ಸಹಕರಿಸಬೇಕೆಂದರು.

ಸಭೆಯಲ್ಲಿ ಮುಸ್ಲೀಂ ಧರ್ಮದ ಮುಖಂಡರು ಸೇರಿದಂತೆ ಹಿಂದು ಮುಖಂಡರು  ಉಪಸ್ಥಿತರಿದ್ದರು


 

Read These Next

ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...