ಸೈಂಟ್ ಮೇರಿಸ್ ಸಮುದ್ರದಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು ​​​​​​​

Source: sonews | By Staff Correspondent | Published on 28th October 2018, 12:14 AM | Coastal News |

ಮಲ್ಪೆ: ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ವಿಹಾರಕ್ಕೆ ಬಂದಿದ್ದ ಕೇರಳದ ವಿದ್ಯಾರ್ಥಿಗಳ ತಂಡದಲ್ಲಿದ್ದ ಓರ್ವ ಸಮುದ್ರದ ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಕೇರಳ ರಾಜ್ಯದ ತ್ರಿಶೂರ್ ನಿವಾಸಿ ಅಭಿನಂದನ್(16) ಎಂದು ಗುರುತಿಸಲಾಗಿದೆ. ತ್ರಿಶೂರ್ ಶಾಲೆಯೊಂದರ ಒಟ್ಟು 67 ಮಂದಿ ಎಸೆಸೆಲ್ಸಿ ವಿದ್ಯಾರ್ಥಿಗಳು ಎಂಟು ಮಂದಿ ಅದ್ಯಾಪಕರೊಂದಿಗೆ ಅ. 26ರಂದು ಸಂಜೆ 4:30ರ ಸುಮಾರಿಗೆ ಸೈಂಟ್ ಮೇರಿಸ್ ದ್ವೀಪಕ್ಕೆ ಬೋಟಿನಲ್ಲಿ ಬಂದಿದ್ದರು. ಅಲ್ಲಿ ವಿದ್ಯಾರ್ಥಿಗಳು ಗುಂಪು ಗುಂಪಾಗಿ ಸಮುದ್ರದ ನೀರಿನಲ್ಲಿ ಆಡುತ್ತಿ ದ್ದರೆನ್ನಲಾಗಿದೆ. ಅದರಲ್ಲಿ ಅಭಿನಂದನ್ ನೀರಿನಲ್ಲಿ ಮುಳುಗಿ ಆಡುತ್ತಿದ್ದ ಎಂದು ಹೇಳಲಾಗಿದೆ.

ಈ ವೇಳೆ ಅಭಿನಂದನ್ ಸಮುದ್ರ ಪಾಲಾಗಿ ನಾಪತ್ತೆಯಾಗಿ ದ್ದನು. ಈ ವಿಚಾರ ಯಾರಿಗೂ ಗೊತ್ತಿರಲಿಲ್ಲ. ವಿಹಾರ ಮುಗಿಸಿ ಸಂಜೆ ವೇಳೆ ಅಧ್ಯಾಪಕರು ಎಲ್ಲ ವಿದ್ಯಾರ್ಥಿಗಳೊಂದಿಗೆ ಮಲ್ಪೆ ತೀರಕ್ಕೆ ವಾಪಾಸ್ಸು ಬಂದರೆ ನ್ನಲಾಗಿದೆ. ಅಲ್ಲಿ ಗಮನಿಸಿದಾಗ ಅಭಿನಂದನ್ ನಾಪತ್ತೆಯಾಗಿರುವುದು ಕಂಡು ಬಂತು.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ, ಜೀವ ರಕ್ಷಕರನ್ನು ರಾತ್ರಿ ಎಂಟು ಗಂಟೆಗೆ ಸೈಂಟ್ ಮೇರಿಸ್‌ಗೆ ಕರೆದುಕೊಂಡು ಹೋಗಿ ಹುಡುಕಾಟ ನಡೆಸ ಲಾಯಿತು. ಆದರೆ ಮೃತದೇಹ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ 11:30ರ ಸುಮಾರಿಗೆ ಅಭಿನಂದನ್ ಮೃತದೇಹವು ಸೈಂಟ್ ಮೇರಿಸ್ ದ್ವೀಪದ ಬಳಿ ಪತ್ತೆ ಯಾಗಿದೆ. ಮೃತರ ಕುಟುಂಬದವರು ಉಡುಪಿಗೆ ಆಗಮಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸ ಲಾಯಿತು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...