ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರನ ಸಾವು

Source: sonews | By Sub Editor | Published on 11th October 2017, 5:36 PM | Coastal News | Incidents | Don't Miss |

ಭಟ್ಕಳ: ತಾಲೂಕಿನ ಮುರುಡೇಶ್ವರ ಬೈಲೂರು ಕ್ರಾಸ್ ರಾ.ಹೆ.೬೬ರಲ್ಲಿ ಅಪರಿಚಿತ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಜರಗಿದೆ.

ಮೃತ ಬೈಕ್ ಚಾಲಕನನ್ನು  ಹೊನ್ನಾವರ ತಲೂಕಿನ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಬಳಕೂರು ಗ್ರಾಮದ ನಿವಾಸಿ ಗಣೇಶ ಗೋವಿಂದ ನಾಯ್ಕ(೨೬) ಎಂದು ಗುರುತಿಸಲಾಗಿದೆ.
ಇವರು ಭಟ್ಕಳ ಕಡೆಯಿಂದ ಹೊನ್ನಾವರ ಕಡೆ ಹೋಗುತ್ತಿದ್ದಾಗ ಅಪರಿಚಿತ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. 

ಘಟನೆ ತಿಳಿಯುತ್ತಿದ್ದಂತೆ ಮುರುಡೇಶ್ವರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿದ್ದಾರೆ. 

Read These Next

ಕುಂದಾಪುರ: ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಸ್ನಾನಕ್ಕೆಂದು ಇಳಿದ ಈರ್ವರು ಪದವಿ ವಿದ್ಯಾರ್ಥಿಗಳು ...

ರೋಟರಿ ಸಂಸ್ಥೆ ಸಮಾಜ ಸೇವೆಗೆ ಎಲ್ಲರನ್ನು ಒಗ್ಗೂಡಿಸುವ ಕೆಲಸಗಳಿಗೆ ಪ್ರೇರಣೆ ನಿಡುತ್ತಿದೆ- ಮಂಜುನಾಥರೆಡ್ಡಿ

ಶ್ರೀನಿವಾಸಪುರ: ರೋಟರಿ ಸಂಸ್ಥೆ ಜಗತ್ತಿನ ಮೂಲೆ ಮೂಲೆಗಳಲ್ಲಿ ಸಾಮಾಜಿಕ ಕೆಲಸಗಳನ್ನು ನಡೆಸುತ್ತಿದ್ದು ಸಮಾಜ ಸೇವೆಗೆ ಎಲ್ಲರನ್ನು ...

ಜು.19 ರಂದು ಎಸೆಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ;ಎಸ್.ಎಂ.ಎಸ್ ಮೂಲಕ ಮೂಬೈಲ್ ಗೆ ರವಾನೆ

ಬೆಂಗಳೂರು: ಜೂನ್ 2018ರ ಎಸೆಸೆಲ್ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಜು.19ರ ಮಧ್ಯಾಹ್ನ 12 ಗಂಟೆ ನಂತರ ...