ವಿಶೇಷ ಲೇಖನ: ಅರ್ಥಪೂರ್ಣವಾಗಲಿ ಸಮ್ಮರ್ ಹಾಲಿಡೇ

Source: ಬಿ.ಎಂ.ದಾರುಕೇಶ.ಕೆ.ಇ.ಎಸ್ | By Arshad Koppa | Published on 11th April 2017, 8:32 AM | Special Report | Guest Editorial |

ಈ ಶಾಲೆಗಳು ಯಾಕಾದರೂ ರಜೆ ಬಿಟ್ಟಿವೆಯೋ ಎನಿಸುತ್ತದೆ ಸರ್ ಈ ಮಕ್ಕಳನ್ನು ಕಂಟ್ರೋಲ್ ಮಾಡಲು ನಮಗೆ ಸಾದ್ಯಾವಾಗುತ್ತಿಲ್ಲ  ಇವರಿಗೆ ಯಾವಾಗಲೂ ಟಿ.ವಿ. ಮೊಬೈಲ್ ಇಲ್ಲಾಂದ್ರೆ ಇವರನ್ನು ಹಿಡಿಯುವುದು ಇನ್ನೊ ಕಷ್ಟವಾಗುತ್ತಿತ್ತು ಪುಸ್ತಕ ಎಂದರೆ ಅಲರ್ಜಿ ಯಾಗಿಬಿಟ್ಟಿದೆ.ಬಲವಂತ ಮಾಡಿದರೆ ಕಾಟಾಚಾರಕ್ಕೆ ಬುಕ್ ಹಿಡಿಯುವುದು ಮಾಡುತ್ತಾನೆ , ನಾವು ಎದುರಿಗೆ ಇದ್ದಾಗ ಒಂದು ಥರಾ ಇರುತ್ತಾನೆ ಇಲ್ಲದಿದ್ದಾಗ ಬೇರೆ ಥರಾ ಇರುತ್ತಾನೆ ಎನಿಸುತ್ತದೆ  ಇವರಿಗೆ ಏನು ಮಾಡಬೇಕೋ ತಿಳಿಯದಾಗಿದೆ .ಎಂದು ಪಾಲಕರು ನನ್ನೂಡನೆ ಕೌನ್ಸಿಲಿಂಗ್ ಸಮಯದಲ್ಲಿ ಮತನಾಡುತ್ತಾ ಹೇಳುತ್ತ್ತಿದ್ದರು. ಅದಕ್ಕೆ ನಾನು, ಈ ಸಮಯದಲ್ಲಿ ಮಕ್ಕಳು ಪುಸ್ತಕಗಳೆಂದರೆ  ರೋಸಿ ಹೋಗಿರುತ್ತಾರೆ .ಅಂಥದ್ದರಲ್ಲಿ ನೀವು ಪುನಹ ಪುಸ್ತಕ ಹಿಡಿ ಎಂದರೆ ಅದು ಅವರಿಗೆ ಇನ್ನೊ ರೇಜಿಗೆಯಾಗಿಬಿಡುತ್ತದೆ ಆದ್ದರಿಂದ ಅವರಿಗೆ ಹೀಗೆ ಮಾಡಲು ಪ್ರಯತ್ನಿಸಬಹುದು ಎಂಬ ಸಲಹೆಗಳನ್ನು ಅವರೊಂದಿಗೆ ಚರ್ಚಿಸಿದೆ ಅವರು ಆಗಬಹುದು ಎಂದರು .ಈ ನಿಟ್ಟಿನಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ  ಹಾಲಿಡೇ ಗಳು ಅತ್ಯವಶ್ಯಕ ಮತ್ತು ರಜೆಯನ್ನು ಅರ್ಥಪೂರ್ಣವಾಗಿ ಕಳೆಯೋದು ಮಕ್ಕಳ ಮುಂದಿರುವ ಆಯ್ಕೆ. ಈ ಅವಧಿಯಲ್ಲಿ ಶಾಲಾ ದಿನಗಳಂತೆ ಪಾಠ-ಓದು ಇಷ್ಟರಲ್ಲೇ ತಲ್ಲೀನರಾಗಿ ಇರೋದು ಅಷ್ಟು ಸಮಂಜಸವಲ್ಲ.ಮತ್ತು ಅದೇ ಓದು ಬರಹಕ್ಕೆ ಅಂಟಿಕೊಂಡು ಸಮ್ಮರ್ ಕ್ಯಾಂಪ್ ಗಳಿಗೆ ತೆರಳುವ ಬದಲು, ಅಜ್ಜಿ ತಾತ ರ ಮನೆಗೆ ತೆರಳಿ ಹೊರ ಪ್ರಪಂಚವನ್ನು ಸ್ವಲ್ಪವಾದರೂ ಅರಿತುಕೊಳ್ಳಲು ಮತ್ತು ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಸಿಕ್ಕಿರುವ ಬಂಗಾರದಂಥಹ ಸಮಯ ಇದು. ಈ ಸಮಯದಲ್ಲಿ ಸ್ವಲ್ಪ ನೆಮ್ಮದಿಯಿಂದ ಆಟೋಟಗಳು, ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಪ್ರವಾಸಕ್ಕೆ ಹೋಗಬಹುದು. ನೆಂಟರಿಷ್ಟರ ಮನೆಗಳಿಗೆ ಹೋಗಿ ಉಳಿದುಕೊಳ್ಳಲು ಸಕಾಲ .  ಗ್ರಾಮೀಣ ಭಾಗಗಳಿಗೆ ತೆರಳುವುದರಿಂದ ಸಿಗುವ ಪ್ರಯೋಜನ ಸಾಕಷ್ಟು. ಹೀಗಾಗಿ ಪಾಲಕರು ಸಣ್ಣತನ ಬಿಟ್ಟು ಇತರೆ ಮಕ್ಕಳನ್ನು ಮನೆಯೊಳಗೆ ಬಿಟ್ಟುಕೊಳ್ಳುವುದು, ಮನೆಯ ಮಕ್ಕಳನ್ನು ಬೇರೆಡೆ ಕಳುಹಿಸುವುದು ಮಾಡಿದರೆ ಎಷ್ಟೋ ಪಾಲು ಉತ್ತಮ. 
    ರಜೆ ಹೇಗೆ ಕಳೆಯಬಹುದು ಅನ್ನೋದಕ್ಕೆ ಅನೇಕ ಆಯ್ಕೆಗಳು ಇಲ್ಲಿವೆ. ಎಲ್ಲದನೂ ಅಳವಡಿಸಿಕೊಳ್ಳುವ ಮೂಲಕ ಶಾಲೆ ಶುರುವಾಗುವ ಹೊತ್ತಿಗೆ ಹೊಸ ಚೈತನ್ಯ ಪಡೆದುಕೊಳ್ಳಬಹುದು. 
1. ಸಹಪಠ್ಯ ಚಡುವಟಿಕೆಗಳಾದ ಚಿತ್ರಕಲೆ, ಕಥೆ ಕವನ ಇತ್ಯಾದಿಗಳ ರಚನೆಯಲ್ಲಿ ತೊಡಗುವುದು 
2.     ನಿಮ್ಮ ಸುತ್ತ ಮುತ್ತ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಪಾಲಕರೊಂದಿಗೆ ಭಾಗವಹಿಸುವುದು.
3.     ವಿವಿಧ ಸಾಧಕರ ಕುರಿತ ಪುಸ್ತಕಗಳನ್ನು ಸಂಗ್ರಹಿಸಿ ಓದುವುದು.
4.     ಉತ್ತಮ ಐತಿಹಾಸಿಕ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ಇತರೆ ಪ್ರವಾಸಿ ತಾಣಗಳಿಗೆ ಭೇಟಿ.
5.     ಮಾಧ್ಯಮಗಳ ಮೂಲಕ ಲಭ್ಯವಾಗುವ ವಿವಿಧ ಸಾಧಕರ ಕುರಿತ ಮಾಹಿತಿಗಳನ್ನು ಬರಹ ರೂಪದಲ್ಲಿ ಸಂಗ್ರಹಿಸಿ ತಮ್ಮದೆ ಆದ ಒಂದು ಕಿರುಹೊತ್ತಿಗೆಯನ್ನು ಸಿದ್ದಪಡಿಸುವುದು.
6.    ಪಾಲಕರು ಸ್ಥಳೀಯ ಕವಿ, ಲೇಖಕರ ನಿವಾಸದ ಕುರಿತು ಮಾಹಿತಿ ಪಡೆದು ಅವರ ಬಿಡುವಿನ ವೇಳೆ ತಿಳಿದುಕೊಂಡು ಮಕ್ಕಳ ಸಹಿತ ಭೇಟಿ ನೀಡುವುದು ಹಾಗೂ ಚರ್ಚಿಸುವುದು. 
7.    ಸ್ಥಳೀಯವಾಗಿ ಯಾವುದೇ ವೃದ್ಧಾಶ್ರಮ, ಅನಾಥಾಶ್ರಮ, ಜೈಲು, ಅಂಚೆ ಕಛೇರಿ, ಬ್ಯಾಂಕ್ ಗ್ರಾಮ ಪಂಚಾಯತ್  ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸ್ಥಿತಿಗತಿ, ಕಾರ್ಯವಿಧಾನ ಕುರಿತು ತಿಳಿಯಬಹುದು
8.    ಟಿವಿ, ಮೊಬೈಲ್, ಕಂಪ್ಯೂಟರ್‍ಗಳ ಒಡನಾಟದಿಂದ ದೂರ ಸರಿದು ವಠಾರದಲ್ಲಿನ ಅಜ್ಜಿಯರಿಂದ ಕಾಡಿ ಬೇಡಿ ಕಥೆಗಳನ್ನು, ಅವರ ಅನುಭವದ ಮಾತುಗಳನ್ನು ಕೇಳಿದಾಗ ಏನೋ ಹೊಸತನದ ಭಾಸವಾಗುತ್ತದೆ. ಮತ್ತು ಬಿಡುವಿನ ವೇಳೆಯನ್ನು ಅವರು ಹೇಗೆ ಕಳೆಯುತ್ತಿದ್ದರು ಎಂದು ಕೇಳಿ ಅವರ ಜೀವನ ವಿಧಾನಗಳನ್ನು ಅರಿಯಬಹುದು
9.    ಕಸದಿಂದ ರಸ ಎನ್ನುವಂತೆ, ನಿರುಪಯುಕ್ತ ಎನಿಸುವ ವಸ್ತುಗಳನ್ನು ಸಂಗ್ರಹಿಸಿ ಅದರಿಂದ ಉಪಯುಕ್ತ ವಸ್ತುವನ್ನು ಕೈಯ್ಯಾರೆ ತಯಾರಿಸಿ ಶಾಲೆಗೆ ಕೊಂಡೊಯ್ದು ಎಲ್ಲರಿಂದ ಮೆಚ್ಚುಗೆ ಗಿಟ್ಟಿಸಿಕೊಳ್ಳಬಹುದು.ಮತ್ತು ಸ್ಥಳಿಯ ಕರಕುಶಲ ಕಲೆಗಳು ಹಾಗೂ ವಂಶ ಪಾರಂಪರ್ಯವಾಗಿ ಬಂದಿರುವ ವಿದ್ಯೆಗಳನ್ನು ಹಿರಿಯರಿಂದ ಕಲಿಯಬಹುದು. 
10. ಪಠ್ಯ ಪುಸ್ತಕದಲ್ಲಿ ಬಂದಿರುವ ಮತ್ತು ನೀವು ಕಲಿತಿರುವ ವಿಷಯಗಳನ್ನು ಹಳ್ಳಿಗಳಿಗೆ ತೆರಳಿ ಅವುಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿಕೂಳ್ಳಲು ಇದು ಸಕಾಲ.
 11.    ಸ್ಥಳೀಯವಾಗಿ ಸಣ್ಣ-ಪುಟ್ಟ ಕೆರೆಗಳು, ಈಜುಕೊಳಗಳು ಲಬ್ಯವಿದ್ದಲ್ಲಿ ಪಾಲಕರೊಂದಿಗೆ ಭೇಟಿ ನೀಡಿ ಈಜು ಕಲಿಯುವುದು..ವಾಹನ ಚಾಲನೆ,ಹಾಗೂ ದೈನಂದಿನ ಚಟುವಟಿಕೆಗಳನ್ನು ಸ್ವಂತ ಮಾಡಿಕೊಂಡು ಜೀವನ ಕೌಶಲಗಳನ್ನು ಕಲಿಯಬಹುದು.   
12.ಸ್ಥಳೀಯ ಹಬ್ಬ ಜಾತ್ರೆ ಕಾರ್ತಿಕೋತ್ಸವದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮತ್ತು ಸಾಮಾಜಿಕ ಮತ್ತು ಸಾಂಸ್ಕ್ರುತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮಾಡುವುದರಿಂದ ಉತ್ತಮ ಸಂವಹನ ಕೌಶಲಗಳನ್ನು ಕಲಿಯಬಹುದು
13.ಗುಬ್ಬಚ್ಚಿ ಗೂಡು ಕಟ್ಟುವುದು ನಾಯಿ ಬೆಕ್ಕು ದನ ಕರು ಗಳು ಜೀವನ ಹಾಗೂ ಅವುಗಳ ಜೀವನ ಶೈಲಿಗಳ ಬಗ್ಗೆ ತಿಳಿಯಬಹುದು
14.ನಮ್ಮ ಸರ್ಕಾರವು ಸ್ವಲ್ಪ ಮೋಜು ಸ್ವಲ್ಪ ಓದು ಕಾರ್ಯಕ್ರಮ ಜಾರಿಗೆ ತಂದಿದೆ.ಅಲ್ಲಿಗೆ ತೆರಳಿ ಕೂತೂಹಲಕಾರೀ ವಿಷಯಗಳನ್ನು ತಿಳಿಯಬಹುದು.
15 ಹಳ್ಳಿಯ ಸಾಂಪ್ರದಾಯಿಕ ಆಚರಣೆಗಳು ಹಳ್ಳಿ ಜನರ ಜೀವನ ಶ್ಯೆಲಿ ಅವರ ಕೃಷಿ ವಿಧಿ ವಿದಾನಗಳು ಊರಿನ ಹೆಸರು ಅದರ ಮಹತ್ವ ಊರಿನ ಲ್ಲಿ ಹಿರಯರು ಸಮಾಜಕ್ಕೆ ಕೂಟ್ಟ ಕೂಡುಗೆಗಳ ಬಗ್ಗೆ ಹೀಗೆ ಅನೇಕ ವಿಷಯಗಳನ್ನು ಅರಿಯಬಹುದು ಆದರೆ ನಿಮಗೆ ತಿಳಿಯುವ ಹಂಬಲ ವಿರಬೇಕು.
    ಈ ರೀತಿಯಾಗಿ ಮಕ್ಕಳು ರಜಾ ಅವಧಿಗಳನ್ನು ಸಕಾರಾತ್ಮಕವಾಗಿ ಕಳೆಯಬಹುದಾಗಿದೆ. ಆದರೆ ಇವುಗಳಲ್ಲಿ ಭಾಗವಹಿಸುವುದರ ಜೊತೆಗೆ ಪಠ್ಯ ವಿಷಯಗಳನ್ನು ನಿರ್ಲಕ್ಷ್ಯ ಮಾಡದಿದ್ದರೆ ರಜೆ ಹೆಚ್ಚು ಅರ್ಥಪೂರ್ಣವಾದೀತು.
    ಮೊಟ್ಟಮೊದಲು ರಜೆಯಲ್ಲಿ ಓದುವುದಕ್ಕೆ ಬೇಸರ ಮಾಡಿಕೊಳ್ಳಬಾರದು. ಏಕೆಂದರೆ, ರಜೆ ಅವಧಿ ನೋಡುತ್ತಿದ್ದ ಹಾಗೆಯೇ ಮುಗಿದು ಹೋಗುತ್ತದೆ. ರಜಾ ದಿನಗಳಲ್ಲಿಯೂ ದಿನಪೂರ್ತಿ ಓದಬೇಕೆಂದಿಲ್ಲ. ಪ್ರತಿದಿನವೂ ಸಂಜೆಯೋ, ಬೆಳಿಗ್ಗೆಯೋ ಸ್ವಲ್ಪ ಕಾಲ ನಿಯಮಿತವಾಗಿ ಓದುವುದರಿಂದ ಓದಿನ ನಂಟು ತಪ್ಪುವುದಿಲ್ಲ. ಇಲ್ಲವಾದರೆ, ಓದಿನ ನಂಟು ತಪ್ಪಿದಂತಾಗಿ ಪುಸ್ತಕ ಕೈಯ್ಯಲ್ಲಿ ಹಿಡಿದರೆ ಬೋರೆನಿಸುತ್ತದೆ. ಆದ್ದರಿಂದ ದಿನಕ್ಕೆ ಕನಿಷ್ಟ ಒಂದು ಗಂಟೆಯಾದರೂ ಓದುವುದು ಸರಿಯಾದ ಮಾರ್ಗ.
ಯಾವುದೇ  ವಿದ್ಯಾರ್ಥಿಗಳಿಗೆ ಪಾಲಕರಿಗೆ ಈ ಬಗ್ಗೆ  ಯಾವುದೇ ಸಮಸ್ಯೆಗಳಿದ್ದರೆ ಫೋನ್ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು. ಅಥವಾ ಫೇಸ್ ಬುಕ್ ನಲ್ಲಿ ದಾರುಕೇಶ ಬಿ.ಎಂ. ಎಂದು ಹುಡುಕಿದರೆ ಶಿಕ್ಷಣಕ್ಕೆ ಸಂಭಂದಿಸಿದ ವೀಡಿಯೋಗಳು ಲಭ್ಯ ಅವುಗಳನ್ನು ಬಳಸಿಕೂಳ್ಳಬಹುದು 

ಶುಭಾಶಯಗಳೂಂದಿಗೆ

ಬಿ.ಎಂ.ದಾರುಕೇಶ.ಕೆ.ಇ.ಎಸ್
ಉಪನ್ಯಾಸಕರು ಹಾಗೂ ರಾಜ್ಯ ಮಟ್ಟದ ತರಬೇತುದಾರರು ಮತ್ತು ಆಪ್ತ ಸಮಾಲೋಚಕರು 
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ದಾವಣಗೆರೆ .9886229378. 
[email protected]
 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...