ದಾವಣಗೆರೆ: ರಾಜ್ಯ ಮರಾಠಾ ಸಮುದಾಯದ ಕಾಳಜಿಗೆ ಅಭಿನಂದನೆ-ಪುರುಷೋತ್ತಮ ಸಾವಂತ

Source: shabbir ahmed | By Arshad Koppa | Published on 17th March 2017, 10:36 AM | Guest Editorial |

ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಮ್ಮ 13ನೇ ಬಾರಿಯ ರಾಜ್ಯದ 2016-17ರ 12ನೇಯ ಸುಮಾರು ಎರಡು ಲಕ್ಷ ಕೋಟಿ ರಾಜ್ಯ ಬಜೆಟ್‍ನ್ನು ಮಂಡಿಸಿದ್ದು ಅದು ಜನಸಾಮಾನ್ಯರಿಗೆ ಹೆಚ್ಚಿನ ಸ್ಪೂರ್ತಿದಾಯಕವಾಗಿರುವುದಿಲ್ಲ. ಅಲ್ಲದೇ ರೈತರ ಸಾಲ ಮನ್ನಾಮಾಡುತ್ತನೆಂದು ಹಲವು ಬಾರಿ ಸುದ್ಧಿ ಮಾಡಿದ ಸಿದ್ದರಾಮಯ್ಯರವರು ಮಂಡಿಸಿದ ಬಜೆಟ್ ರೈತರ ಪಾಲಿಗೆ ನಿರಾಶೆ ತಂದ ಬಜೆಟ್ ಆಗಿದ್ದು ರಾಜ್ಯದ ಜನತೆ ಅವರ ಮೇಲೆ ಇಟ್ಟಿರುವ ಎಲ್ಲಾ ನಿರೀಕ್ಷೆಗಳನ್ನು ಹುಸಿಮಾಡಿದ್ದಾರೆ.  ಅಲ್ಲದೇ ರಾಜ್ಯ ಗಡಿ ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಯಾವುದೇ ಅನುದಾನ ಈ ಬಜೆಟ್‍ನಲ್ಲಿ ಪ್ರಸ್ಥಾಪಿಸಿಲ್ಲ ಎಂದು ಜೆ.ಡಿ.ಎಸ್. ಮುಖಂಡ ಪುರುಷೋತ್ತಮ ಸಾವಂತರು ಅಭಿಪ್ರಾಯ ಪಟ್ಟಿದ್ದಾರೆ.  
    ಆದರೆ, ದಾವಣಗೇರಿಯ ಚೆನ್ನಗಿರಿ ತಾಲೂಕಿನ ಹೊದಿಗೇರಿ ಗ್ರಾಮದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಶಾಹಾದಿ ರಾವ್ ಭೋಸ್ಲೆ ಇವರ ಸಮಾದಿ ಸ್ಥಳವನ್ನು ಅಭಿವೃದ್ಧಿಗೋಳಿಸಿ ಪ್ರವಾಸ ಸ್ಥಾನ ಮಾಡಲು ಎರಡು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿರುತ್ತಾರೆ ಮತ್ತು ಧಾರವಾಡ ವಿಶ್ವವಿದ್ಧಾಯಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಧ್ಯಯನ ಪೀಠ ಸ್ಥಾಪನೆಗೆ ಅನುದಾನ ಘೋಷಣೆ ಮಾಡಿದ ನಿರ್ಧಾರವನ್ನು ತೆಗೆದುಕೊಂಡು ರಾಜ್ಯ ಮರಾಠಾ ಸಮುದಾಯದ ಮೇಲಿರುವ ಕಾಳಜಿಗೆ ಸ್ವಾಗತ ಕೋರಿದ ಉತ್ತರ ಕನ್ನಡ ಜಿಲ್ಲೆ ಕ್ಷತ್ರೀಯ ಮರಾಠಾ ಒಕ್ಕೂಟ ಉಪಾಧ್ಯಕ್ಷರಾದ ಪುರುಷೋತ್ತಮ ಸಾವಂತರು ಅಭಿನಂದಿಸಿದ್ದಾರೆ.  

Read These Next

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...