ಡಿ.22 ರಂದು ದತ್ತಜಯಂತಿ ಉತ್ಸವ ಹಾಗೂ ಶ್ರೀ ದೇವಿಯ ರಥೋತ್ಸವ

Source: sonews | By Staff Correspondent | Published on 20th December 2018, 5:58 PM | Coastal News |

ಭಟ್ಕಳ : ಡಿ. 22 ರಂದು ತಿಮ್ಮಯ್ಯ ದಾಸರಿಂದ ಸಂಸ್ಥಾಪಿಸಲ್ಪಟ್ಟಿರುವ ಶ್ರೀ ಶ್ರೀಧರ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ವರ್ಷಂಪ್ರತಿಯಂತೆ ದತ್ತಜಯಂತಿ ಉತ್ಸವ ಹಾಗೂ ಶ್ರೀ ದೇವಿಯ ರಥೋತ್ಸವವು ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂದು ಮುಂಜಾನೆ ದೇವತಾ ಪ್ರಾರ್ಥನೆ, ಪುಣ್ಯಾಹ, ಪಂಚಗವ್ಯ ಹವನ, ಸಂಕಲ್ಪ, ಶ್ರೀ ಗುರು ಮಂತ್ರ ಹವನ, ಶ್ರೀ ಸೂಕ್ತ ಹವನ, ಪುರುಷಸೂಕ್ತ ಹವನ ಮಹಾಪೂಜೆ, ದಿಗ್ಬಲಿ, ರಥಬಲಿ, ಶ್ರೀಧರ ಪದ್ಮಾವತಿ ದೇವರ ಶ್ರೀ ಮಚ್ಛಂದನ ರಥೋತ್ಸವ, ಸಾಮೂಹಿಕ ಪ್ರಾರ್ಥನೆ, ತೀರ್ಥ ಪ್ರಸಾದ ವಿತರಣೆ ಅನ್ನಸಂತರ್ಪಣೆಯು ನಡೆಯಲಿದೆ. ಸಾಯಂಕಾಲ 4 ಗಂಟೆಗೆ ಪುರ ಬೀದಿಯಲ್ಲಿ ರಥೋತ್ಸವದ ಮೆರವಣಿಗೆ ನಡೆಯಲಿದೆ. 

ರಥೋತ್ಸವವು ಸಂಜೆ 4ಗಂಟೆಗೆ ದೇವಾಲಯದಿಂದ ಹೊರಟು ರಘುನಾಥ ರಸ್ತೆಯ ಮಾರ್ಗವಾಗಿ ಪುಷ್ಪಾಂಜಲಿ ಚಿತ್ರಮಂದಿರದ ವರೆಗೆ ತಲುಪಿ ಅಲ್ಲಿಂದ ಹಿಂದಿರುಗಿ ವೀರವಿಠ್ಠಲ ರಸ್ತೆಯ ಮೂಲಕ ನೆಹರು ರಸ್ತೆಯ ಮೂಲಕ ಹೂವಿನ ಚೌಕ ಅಲ್ಲಿಂದ ಮುಖ್ಯ ರಸ್ತೆಯ ಮೂಲಕ ಅರ್ಬನ್ ಬ್ಯಾಂಕವರೆಗೆ ಬಂದು ಅಲ್ಲಿಂದ ಹಿಂದಿರುಗಿ ಕಳಿಹನುಮಂತ ದೇವಸ್ಥಾನದ ಮಾರ್ಗವಾಗಿ ದೇವಾಲಯಕ್ಕೆ ಹಿಂದಿರುಗಲಿದೆ. ಅದರಿಂದ ಸದ್ಭಕ್ತ ಮಹಾಶಯರು  ದೇವತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಬೇಕಾಗಿ ದೇವಾಲಯದ ಧರ್ಮದರ್ಶಿಗಳು ಕೋರಿದ್ದಾರೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...