ಸಾಮಾಜಿಕ ಕಳಕಳಿಯ ರಾಜಕಾರಣಿ ದಾಮು ಗರಡಿಕರ್ ಇನ್ನಿಲ್ಲ

Source: sonews | By sub editor | Published on 4th September 2018, 10:32 PM | Coastal News | Don't Miss |

ಭಟ್ಕಳ: ಜನತಾದಳದ ಮೂಲಕ ರಾಜಕೀಯ ಪ್ರವೇಶಿ ನಂತರ ಕಾಂಗ್ರೇಸ್ ಸಿದ್ಧಾಂತವನ್ನು ಒಪ್ಪಿ ಹಲವು ಪ್ರಮುಖ ಹುದ್ದೆಗಳನ್ನು ಹೊಂದಿದ್ದ ಸಾಮಾಜಿಕ ಕಳಕಳಿಯ ರಾಜಕಾರಣಿ, ರಾಜ್ಯಮಟ್ಟದ ಕ್ರಿಡಾಪಟು ದಾಮೋದರ್ ನಾರಾಯಣ ಗರ್ಡಿಕರ್  ಹಲವು ದಿನಗಳ ಅನಾರೋಗ್ಯದ ಬಳಿಕ ಸೋಮವಾರ ಬೆಂಗಳೂರಿನಿ ಆಸ್ಪತ್ರೆಯಲ್ಲಿ ನಿಧನರಾದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದ ಇವರು 2ಇಬ್ಬರು ಪುತ್ರಿಯರು, ಪತ್ನಿ ಹಾಗೂ ಅಪಾರ ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ವಿವಿಧ ರಾಜಕೀಯ ಪಕ್ಷದ ಮುಖಂಡರು, ಸಮಾಜಸೇವಕರು, ಹಾಗೂ ವಿವಿಧ ಸಂಘಸಂಸ್ಥೆಗಳ ಮುಖಂಡರು ಸಂತಾಪವನ್ನು ವ್ಯಕ್ತಿಪಡಿಸಿದ್ದಾರೆ.

ಮಂಗಳರ ಇವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. 
 

Read These Next