ದಮಾಮ್: ಕೊನೆಗೂ ಸ್ವದೇಶಕ್ಕೆ ತಲುಪಿದ ಭೂಮಾನಂದನ್ ಮೃತದೇಹ 

Source: dammam | By Arshad Koppa | Published on 26th October 2016, 10:53 PM | Gulf News | Don't Miss |

ದಮಾಮ್, ಅ ೨೫ : ಮೂರು ತಿಂಗಳ ಹಿಂದೆ ಸೌದಿ ಅರೇಬಿಯಾದ ದಮಾಮ್ ನಲ್ಲಿ  ಪೈಂಟ್ ಕೆಲಸ ಮಾಡುತ್ತಿದ್ದಾಗ ಕಟ್ಟಡದಿಂದ ಕಾಲುಜಾರಿ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ತೆಲಂಗಾಣ ನಿವಾಸಿ ಭೂಮಾನಂದನ್  ಎಂಬವರ ಮ್ರತದೇಹವನ್ನು  ಸ್ವದೇಶಕ್ಕೆ ಕಳುಹಿಸಿಕೊಡುವಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಯಶಸ್ವಿಯಾಗಿದೆ. ತೀರಾ ಅಪರೂಪದ ದುರಂತ ಪ್ರಕರಣ ಇದಾಗಿದ್ದು, ಸಾಕಷ್ಟು ಕಾನೂನು ತೊಡಕುಗಳನ್ನು ನಿವಾರಿಸಿ ಭೂಮಾನಂದನ್ ಮ್ರತದೇಹವನ್ನು ವಿಲೇವಾರಿ ಮಾಡುವಲ್ಲಿ ಸೋಶಿಯಲ್ ಫೋರಮ್ ಗೆಲುವು ಸಾಧಿಸಿದೆ. 

ಘಟನೆಯ ವಿವರ : ತೆಲಂಗಾಣ ಮೂಲದ ಭೂಮಾನಂದನ್ ತನ್ನ ಪ್ರಾಯೋಜಕನ ಕೈಕೆಳಗೆ ದುಡಿಯದೆ ವೈಯಕ್ತಿಕವಾಗಿ ಹೊರಗಡೆ ದುಡಿಯುತ್ತಿದ್ದರು. ಪೈಂಟರ್ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ದುರಂತ ಸಂಭವಿಸಿ ಸಾವನ್ನಪ್ಪಿರುವುದರಿಂದ ಅಪರಾಧ ಪ್ರಕರಣವಾಗಿ ದಾಖಲಾಗಿ ಪ್ರಾಯೋಜಕನು ಕೂಡ ದಂಡ ಹಾಗೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇಲ್ಲಿನ ಕಾರ್ಮಿಕ ಕಾನೂನು ಪ್ರಕಾರ ಸೂಕ್ತ ದಾಖಲೆಗಳಿಲ್ಲದೆ ಹೊರಗಡೆ ದುಡಿಯುವುದು ಅಪರಾಧವಾಗಿರುತ್ತದೆ. ದುರಂತದ ಸುದ್ದಿ ತಿಳಿದಾಕ್ಷಣ ಪ್ರಾಯೋಜಕನು ಕಾನೂನು ಕ್ರಮದಿಂದ ಪಾರಾಗುವುದಕ್ಕಾಗಿ ಭೂಮಾನಂದನ್ ಮೇಲೆ ''ನಾಪತ್ತೆ'' ಕೇಸು ದಾಖಲಿಸಿದ್ದು ಇದರಿಂದ ಭೂಮಾನಂದನ್  ಜೀವಂತವಿದ್ದರೂ ಸ್ವದೇಶಕ್ಕೆ ಮರಳಲು ಸಾಧ್ಯವಾಗುತ್ತಿರಲಿಲ್ಲ. ತಲೆಗೆ ತೀವ್ರ ಗಾಯಗೊಂಡಿದ್ದ  ಭೂಮಾನಂದನ್ ಗೆ ದಮಾಮ್ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಮ್ರತದೇಹವನ್ನು ಸ್ವದೇಶಕ್ಕೆ ಮರಳಿಸುವುದು ಅಥವಾ ಇಲ್ಲೇ ದಫನ ಮಾಡುವುದಾದರೂ ಹಲವು ಕಾನೂನು ನಿಯಮಗಳನ್ನು ಎದುರಿಸಬೇಕಾಗಿದೆ. ಭೂಮಾನಂದನ್ ಅವರ ಮಗನೂ ಇಲ್ಲೇ ಕೆಲಸ ಮಾಡುತ್ತಿದ್ದು, ಒಬ್ಬಂಟಿಗನಾಗಿ ಈ ಪ್ರಕರಣವನ್ನು ಹೇಗೆ ನಿಭಾಯಿಸುವುದೆಂದು ತಿಳಿಯದೆ ನೆರವಿಗಾಗಿ ಸೋಶಿಯಲ್ ಫೋರಮ್ ಕರ್ನಾಟಕ ಸಮಿತಿಯನ್ನು ಕೇಳಿಕೊಂಡಿದ್ದಾರೆ. 

ಪ್ರಕರಣವನ್ನು ಕೈಗೆತ್ತಿಕೊಂಡ ಸೋಶಿಯಲ್ ಫೋರಮ್, ಸೌದಿ ಪ್ರಾಯೋಜಕನನ್ನು ಕಂಡು ಆತನ ಮನವೊಲಿಸಲು ನಿರಂತರ ಶ್ರಮಿಸಿತು. ಇದರಿಂದಾಗಿ ತನಗೆ ಯಾವುದೇ ಕಾನೂನು ಸಮಸ್ಯೆ ಎದುರಾಗದು. ಯಾವುದೇ ದಂಡ ತೆರಬೇಕಾದಲ್ಲಿ ಅದಕ್ಕೆ ತಂಡವೇ ಹೊಣೆ ಎಂದು ಮುಚ್ಚಳಿಕೆ ಬರೆಸಿಕೊಂಡ ಬಳಿಕ ಪ್ರಾಯೋಜಕನು ಅಗತ್ಯ ದಾಖಲೆ ಪತ್ರಗಳಿಗೆ ಸಹಿ-ಮೊಹರು ಲಗತ್ತಿಸಿದನು. ಮತ್ತು ಭೂಮಾನಂದನ್ ಮೇಲೆ ದಾಖಲಿಸಿದ್ದ ಕೇಸನ್ನು ವಾಪಾಸು ಪಡೆದನು. ಇದರಿಂದಾಗಿ ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ಅವಕಾಶ ಸಿಕ್ಕಿತು. ಅದೇ ರೀತಿ ಆಸ್ಪತ್ರೆಯ ದಾಖಲೆ ಪತ್ರ, ಪೊಲೀಸ್ ಇಲಾಖೆಯ ದಾಖಲೆ ಪತ್ರ, ಭಾರತೀಯ ರಾಯಭಾರಿ ಕಚೇರಿಯಿಂದ ದಾಖಲೆ ಪತ್ರ, ಉರಿನಿಂದ ಅದಕ್ಕೆ ಬೇಕಾದ ದಾಖಲೆಗಳು, ಆಸ್ಪತ್ರೆಯ ಬಿಲ್ಲು, ಮ್ರತದೇಹವನ್ನು ವಿಮಾನದಲ್ಲಿ ಸ್ವದೇಶಕ್ಕೆ ಸಾಗಿಸಲು ಇರುವ ದಾಖಲೆಪತ್ರ ಮತ್ತು ಏರ್ಪಾಡುಗಳನ್ನು ಸೋಶಿಯಲ್ ಫೋರಂ ಸಮರ್ಪಕವಾಗಿ ನಿರ್ವಹಿಸಿತು. 


ಸ್ವದೇಶದಲ್ಲಿ ಹಿಂದೂ ಶಾಸ್ತ್ರ ವಿಧಿಯಂತೆ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ತೀರ್ಮಾನಿಸಿದ್ದು, ಅಕ್ಟೋಬರ್ 21ರಂದು ಮ್ರತದೇಹವು ಮನೆ ತಲುಪಲಿದೆ. ಈ ಎಲ್ಲ ಪ್ರಕ್ರಿಯೆಗಳಲ್ಲಿ ನಿರಂತರವಾಗಿ ಸಹಕರಿಸಿ ಆಸ್ಪತ್ರೆಯ ಬಿಲ್ಲನ್ನು ಬಹಳಷ್ಟು ಕಡಿತಗೊಳಿಸಿದ ದಮಾಮ್ ಆಸ್ಪತ್ರೆಯ ವೈದ್ಯ ಡಾ. ಅಭಿಜಿತ್ ಅವರಿಗೆ ಮತ್ತು ವೈಮಾನಿಕ ಸಂಚಾರದ ವೆಚ್ಚವನ್ನು ಭರಿಸಿದ ಭಾರತೀಯ ರಾಯಭಾರಿ ಕಚೇರಿ ಮತ್ತು ಅಗತ್ಯ ದಾಖಲೆಗಳಿಗೆ ಸಹಕರಿಸಿದ ಅಲ್ಲಿನ ಜಿಲ್ಲಾಡಳಿತಕ್ಕೂ ಸೋಶಿಯಲ್ ಫೋರಂ ಧನ್ಯವಾದ ಸಲ್ಲಿಸುತ್ತದೆ. 

 ಫೋರಂ ನ ಕಮ್ಯುನಿಟಿ ವೆಲ್ಫೇರ್ ವಿಭಾಗದ ಮುಖ್ಯಸ್ಥ ನೌಶಾದ್ ಕಾಟಿಪಳ್ಳ ನೇತ್ರತ್ವದಲ್ಲಿ ಮುಹಮ್ಮದ್ ಶರಫುದ್ದೀನ್, ಇಬ್ರಾಹೀಮ್ ಕ್ರಷ್ಣಾಪುರ, ಜ಼ಕರಿಯಾ, ಅಬ್ದುಲ್ ಖಾದರ್ ಆಂಧ್ರ ಪ್ರದೇಶ ಮುಂತಾದವರು ಕಾರ್ಯನಿರ್ವಹಿಸಿದ್ದರು.  
     

ಇಂಡಿಯನ್ ಸೋಶಿಯಲ್ ಫೋರಮ್
ಕರ್ನಾಟಕ ರಾಜ್ಯ
ಈಸ್ಟರ್ನ್ ಪ್ರೊವಿನ್ಸ್, ಸೌದಿಅರೇಬಿಯ


 

Read These Next

ವಂಚನೆಗೊಳಗಾದ ಸಾವಿರಾರು ಅಗ್ರಿಗೋಲ್ಡ್ ಗ್ರಾಹಕರಿಗೆ ಸರ್ಕಾರ ನ್ಯಾಯ ಒದಗಿಸಬೇಕು-ರಮೇಶ

ಭಟ್ಕಳ: ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದ ಗ್ರಾಹಕರಿಗೆ ನ್ಯಾಯ ವದಗಿಸುವ ದೃಷ್ಟಿಯಿಂದ ಅಗ್ರಿಗೋಲ್ಡ್ ಗ್ರೂಫ್ ಆಫ್ ...

ಮುರ್ಡೇಶ್ವರದ ಆರ್.ಎನ್.ಎಸ್.ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂಲ್ ಕ್ಯಾಂಪಸ್ ಸಂದರ್ಶನ

ಭಟ್ಕಳ: ಗ್ರೀಟ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ (ಟ್ಯಾಲಿ ಸಾಪ್ಟವೇರ್ ಗ್ರೂಪ್) ಬೆಂಗಳೂರು ಕಂಪನಿಯಲ್ಲಿ ಕೆಲಸ ನಿರ್ವಹಿಸಲು 100 ಜನ ...

ರಾ.ಹೆ.ಅಗಲೀಕರಣ;೩೦ರ ಬದಲು ೪೫ಮೀಟರ್ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

ಭಟ್ಕಳ: ಇಲ್ಲಿನ ಶಿರಾಲಿ ಪಂಚಾಯತ ವ್ಯಾಪ್ತಿಯಲ್ಲಿ ಹೆದ್ದಾರಿ ಅಗಲೀಕರಣ ವಿಚಾರವಾಗಿ ಸುಮಾರು 700 ಮೀಟರವರೆಗೆ ರಸ್ತೆ ಅಗಲೀಕರಣವನ್ನು 45 ...