ಫೆ.10 ಇಂಡಿಯನ್ ಅಯಿಲ್ ಸಂಸ್ಥೆಯಿಂದ ಇಂಧನ ಸಂರಕ್ಷಣೆ, ಪರಿಸರ ಸಂರಕ್ಷಣೆ ಜಾಗೃತಿಗಾಗಿ ಸೈಕಲ್ ಜಾಥಾ

Source: sonews | By Staff Correspondent | Published on 8th February 2019, 5:56 PM | Coastal News |

ಭಟ್ಕಳ: ಇಂಡಿಯನ್ ಅಯಿಲ್ ಸಂಸ್ಥೆಯ ರಂಜನ್ ಇಂಡೇನ್ ಎಜೆನ್ಸಿ, ರಫಾತ್ ಎಜೆನ್ಸಿ, ಹಾಗೂ ಸಕ್ಸಂ ಸೈಕ್ಲೋಥ್ಯಾನ್ ಭಟ್ಕಳ, ಗಾಡ್‍ವಿನ್ ಸೈಕಲ್ ಟ್ರೇಡಿಂಗ್ ಕಂಪೆನಿ ವತಿಯಿಂದ ಫೆ.10 ರಂದು ಬೆಳಿಗ್ಗೆ 7.30ರಿಂದ 9.30ರವರೆಗೆ ಇಂಧನ ಸಂರಕ್ಷಣೆ, ಪರಿಸರ ಸಂರಕ್ಷಣೆ ಜಾಗೃತಿಗಾಗಿ ಭಟ್ಕಳ ಹೇರಿಟೇಜ್ ಟ್ರೇಸರ ರೈಡ್ ಸೈಕಲ್ ಜಾಥಾ ಏರ್ಪಡಿಸಲಾಗಿದೆ.

ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ದಿಸೆಯಲ್ಲಿ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಇಂಧನ ಸಂರಕ್ಷಣೆಯ ಜವಾಬ್ದಾರಿ, ಪರಿಸರ ಸಂರಕ್ಷಣೆ, ಪೆಟ್ರೋಲಿಯಂ ಉತ್ಪನ್ನಗಳ ಸದ್ಬಳಕೆ ಅಲ್ಲದೆ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರಿಂದ ಸಂದೇಶ ನೀಡುವ ಉದ್ದೇಶದಿಂದ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಪೊಲೀಸ್ ಗ್ರೌಂಡನಿಂದ ಜಾಥಾ ಆರಂಭವಾಗಲಿದ್ದು ಅಲ್ಲಿಂದ ಮದೀನಾ ಕಾಲೋನಿ ಮೂಲಕ ಅಲ್ಲಿಂದ ತಾಲೂಕಾ ಕ್ರೀಡಾಂಗಣದ ವರೆಗೆ ಹಾಗೂ ಅಲ್ಲಿಂದ ಮತ್ತೆ ಪುನಃ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಾಗಿ ಪೊಲೀಸ್ ಗ್ರೌಂಡನಲ್ಲಿ ಮುಕ್ತಾಯಗೊಳ್ಳಲಿದೆ. ಈ ಜಾಥಾದಲ್ಲಿ ಹೆಚ್ಚಿನ ಜನರು ಸೈಕಲ್ ಜಾಥಾದಲ್ಲಿ ಭಾಗವಹಿಸಿ ಸೈಕಲ್ ಬಳಸುವಂತೆ ಕೋರಿದ್ದಾರೆ. 

ಮೊದಲು ನೊಂದಾಯಿಸಿದ 100 ಜನರಿಗೆ ಉಚಿತ ಟೀ ಸರ್ಟ್ ಮತ್ತು ಕ್ಯಾಪ ನೀಡಲಾಗುವದು. ಅಲ್ಲದೇ ಓರ್ವ ಸೈಕಲ್ ಸವಾರರಿಗೆ ಲಕ್ಕಿ ಡ್ರಾ ಮೂಲಕ ಆರಿಸಿ ಒಂದು ಸೈಕಲ್ ಉಚಿತವಾಗಿ ನೀಡಲಾಗುವದು ಎಂದು ರಂಜನ್ ಇಂಡೇನ್ ಎಜನ್ಸಿಯ ಶಿವಾನಿ ಶಾಂತರಾಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...