ಕ್ಯೂಬಾ: ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ನಿಧನ

Source: so english | By Arshad Koppa | Published on 27th November 2016, 10:17 AM | Global News |

ಹವಾನಾ: ಕ್ಯೂಬಾದ ಕ್ರಾಂತಿಕಾರಿ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಶುಕ್ರವಾರ ನಿಧನರಾಗಿದ್ದಾರೆ. 90 ವರ್ಷದ ಮಾಜಿ ಅಧ್ಯಕ್ಷರ ನಿಧನದ ಸುದ್ದಿಯನ್ನು ಸ್ವತಃ ಅವರ ಸಹೋದರ ರೌಲ್ ಕ್ಯಾಸ್ಟ್ರೋ ನೀಡಿದ್ದಾರೆ.

2006ರ ಬಳಿಕ ಫಿಡೆಲ್ ಕ್ಯಾಸ್ಟ್ರೋ ಅವರ ಆರೋಗ್ಯ ಹದೆಗೆಟ್ಟಿತ್ತು. ಹೀಗಾಗಿ ಅಂದಿನಿಂದಲೇ ತನ್ನ ಅಧಿಕಾರವನ್ನು ಸಹೋದರನ ಕೈಗೆ ಹಸ್ತಾಂತರಿಸಿದ್ದರು. ಹೀಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಿನ್ನೆ ಇಹಲೋಕ ತ್ಯಜಿಸಿದ್ದಾರೆ.

ಫಿಡೆಲ್ ಕ್ಯಾಸ್ಟ್ರೋ ಅವರು 1926ರಂದು ಕ್ಯಾಬಾದ ಆಗ್ನೇಯ ಪೂರ್ವ ಪ್ರಾಂತ್ಯದಲ್ಲಿ ಜನಿಸಿದ್ದಾರೆ. 1959ರಲ್ಲಿ ಕ್ಯೂಬಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1976ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಕಮ್ಯೂನಿಸ್ಟ್ ಪಕ್ಷವನ್ನು ಗೆಲ್ಲಿಸುವ ಮೂಲಕ ಕ್ಯಾಸ್ಟ್ರೋ ಮತ್ತೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಸುಮಾರು 49 ವರ್ಷಗಳ ಕಾಲ ಕ್ಯೂಬಾವನ್ನು ಆಳಿದ್ದ ಫಿಡೆಲ್, 2008ರಲ್ಲಿ ತಮ್ಮ ಅನಾರೋಗ್ಯದ ನಿಮಿತ್ತ ಸಹೋದರ ರೌಲ್ ಕ್ಯಾಸ್ಟ್ರೋಗೆ ಅಧಿಕಾರ ಹಸ್ತಾಂತರಿಸಿದ್ದರು.

Read These Next