ಕರಕುಶಲ ಆಭರಣ ತಯಾರಿಕಾ ತರಬೇತಿ ಶಿಬಿರ ಸಮಾರೋಪ

Source: sonews | By Staff Correspondent | Published on 3rd December 2018, 6:10 PM | Coastal News | Don't Miss |

ಭಟ್ಕಳ: ಕರಕುಶಲ ಆಭರಣ ತಯಾರಿಕಾ ತರಬೇತಿ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ  ತರಬೇತಿ ಪಡೆದಿದ್ದು ವ್ಯವಹಾರಿಕವಾಗಿ ಹೆಚ್ಚಿನ ಪ್ರಮಾಣದಲ್ಲಿ  ಉತ್ಪಾದನೆಯನ್ನು ಮಾಡಲು ಇಚ್ಚಿಸಿದಲ್ಲಿ ಮುದ್ರಾ ಯೋಜನೆ ಅಡಿಯಲ್ಲಿ ಆರ್ಥಿಕ ಸಹಾಯವನ್ನು ಮಾಡಲು ನಮ್ಮ ಬ್ಯಾಂಕ್ ಸಿದ್ದವಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ಬಾಜಾರ್ ಬ್ಯಾಂಕಿನ ಮ್ಯಾನೆಜರ್ ಅರುಣ ರೊಯ್ ಹೇಳಿದರು. 

ಅವರು ಭಟ್ಕಳ ಎಜ್ಯುಕೇಶನ್ ಟ್ರಸ್ಟ್ (ರಿ) ನ ರೋಟರಿ ಕೌಶಲ್ಯಾಭಿವೃದ್ಧಿ ತರಬೇತಿ ಸಂಸ್ಥೆ, ಬಂದರ ರೋಡ್, ಭಟ್ಕಳ ಹಾಗೂ ಕೆನರಾ ದೈವಜ್ಞ ಕೌಶಲ್ಯ ಜ್ಞಾನೋದಯ ಟ್ರಸ್ಟ(ರಿ), ಸೋನಾರಕೇರಿ, ಭಟ್ಕಳ ಇವರ ಸಹಯೋಗದಲ್ಲಿ  ನಡೆಯುತ್ತಿರುವ ಕರಕುಶಲ ಆಭರಣ ತಯಾರಿಕಾ ತರಬೇತಿ ಶಿಬಿರದ ಸಮಾರೋಪದಲ್ಲಿ ಪ್ರಶಸ್ತಿ ಪತ್ರವನ್ನು ವಿತರಿಸಿ  ಮಾತನಾಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟನ ಅಧ್ಯಕ್ಷ ಡಾ.ಸುರೇಶ ನಾಯಕ ಮಾತನಾಡುತ್ತ ಮಹಿಳೆಯರು ಮನೆಗೆಲಸಕ್ಕಷ್ಟೆ ಸಿಮೀತ ಎನ್ನುವ ಸ್ಥಿತಿ ಈಗ ಉಳಿದಿಲ್ಲ, ಮಹಿಳೆಯರು ಪುರುಷರಿಗೆ ಸಮಾನವಾಗಿ ಕಾರ್ಯ ನಿರ್ವಹಿಸುವ ಕ್ಷಮತೆಯನ್ನು ಹೊಂದಿದ್ದು, ಈ ಶಿಬಿರದಿಂದ ಪ್ರಯೋಜನ ಪಡೆದುಕೊಂಡು ಜೀವನ ಮಟ್ಟವನ್ನು ಸುದಾರಿಸುವಲ್ಲಿ ಪ್ರಯತ್ನಿಸಬೇಕೆಂದು ಹೇಳಿದರು.  

ತರಬೇತುದಾರೆ ಶ್ರೀಮತಿ ವಿಜಯಾ ಗುರುರಾಜ ಶೇಟ್  ಅವರನ್ನು ಸನ್ಮಾನಿಸಲಾಯಿತು. ಕೆನರಾ ದೈವಜ್ಞ ಕೌಶಲ್ಯ ಜ್ಞಾನೋದಯ ಟ್ರಸ್ಟಿನ ಅಧ್ಯಕ್ಷರಾದ ರಾಘವೇಂದ್ರ ಶೇಟ್ ಉಪಸ್ಥಿತರಿದ್ದರು. ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನ ಪ್ರಾಂಶುಪಾಲ ವಿರೇಂದ್ರ ವಿ. ಶ್ಯಾನಭಾಗ ಸ್ವಾಗತಿಸಿದರು. ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನ ಉಪನ್ಯಾಸಕ ರಾಮಚಂದ್ರ ಭಟ್ ನಿರೂಪಿಸಿದರು.


 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...