ಸರ್ದಾರ ವಲ್ಲಭಬಾಯಿ ಪಟೇಲ್ ಉದ್ಯಾನವನದ ನಿರ್ಮಾಣದಲ್ಲಿ ಅಧಿಕಾರಿಗಳಿಂದ ಭ್ರಷ್ಟಾಚಾರ:ಸುಂದರ ಉದ್ಯಾನವನ ನಿರ್ಮಾಣಕ್ಕೆ ಸಾರ್ವಜನಿಕರಿಂದ ಮನವಿ.  

Source: S.O. News Service | By Manju Naik | Published on 15th August 2018, 9:40 PM | Coastal News | Don't Miss |

ಭಟ್ಕಳ: ಇಲ್ಲಿನ ಪುರಸಭೆಯ ವ್ಯಾಪ್ತಿಯ ನಗರದ ಬಂದರ ರಸ್ತೆಯಲ್ಲಿನ ಸರ್ದಾರ ವಲ್ಲಭಬಾಯಿ ಪಟೇಲ್ ಉದ್ಯಾನವನದ ಹೆಸರಿನಲ್ಲಿ ಆಗುತ್ತಿರುವ ಭ್ರಷ್ಠಾಚಾರ ಹಾಗೂ ಪುರಸಭೆಯ ನಿರ್ಲಕ್ಷದಿಂದ ಉದ್ಯಾನವನಕ್ಕೆ ಆಗಿರುವ ದುಸ್ಥಿತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿ ಮಂಗಳವಾರದಂದು ಉದ್ಯಾನವನಕ್ಕೆ ಪುರಸಭೆ ಇಂಜಿನಿಯರ ಉಮೇಶ ಮಡಿವಾಳ ಅವರ ಮೂಲಕ ಅವರನ್ನು ಕರೆಯಿಸಿ ಸ್ಥಳದಲ್ಲಿಯೇ ಮನವಿಯನ್ನು ಸಲ್ಲಿಸಲಾಯಿತು.
ಇಲ್ಲಿನ ಪಟ್ಟಣ ವ್ಯಾಪ್ತಿಯಲ್ಲಿ ಈ ಹಿಂದೆ ಸುಂದರ ಗಿಡ ಮರ ಹಾಗೂ ಮಕ್ಕಳಿಗೆ ಮುದ ನೀಡುವಂತಹ ಆಟಿಕೆ ವಸ್ತುಗಳಿಂದ ಕೂಡಿದ ಪುರಸಭೆ ಉತ್ತಮ ನಿರ್ವಹಣೆಗೆ ಒಳಪಟ್ಟ ಸುಸಜ್ಜಿತವಾದ ಉದ್ಯಾನವನವೂ ಕಂಡು ಬರುತ್ತದೆ. ಆದರೆ ಇಲ್ಲಿನ ಬಂದರ ರಸ್ತೆಯ ದಿ ನ್ಯೂ ಇಂಗ್ಲಿಷ್ ಸ್ಕೂಲ ಪಕ್ಕದಲ್ಲಿನ ಸರ್ದಾರ ವಲ್ಲಭಬಾಯಿ ಪಟೇಲ್ ಉದ್ಯಾನವನದ ಸ್ಥಿತಿ ಮಾತ್ರ ಕೇಳುವವರಿಲ್ಲ. ಪುರಸಭೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕೇವಲ ಬ್ರಷ್ಟಾಚಾರದ ಕೂಪವಾಗಿದೆ. ಉದ್ಯಾನವನವೂ 18 ರಿಂದ 20 ವರ್ಷಗಳ ಹಿಂದೆ ಸುಂದರವಾದ ಹೂ ಗಿಡಗಳಿಂದ ಕಂಗೊಳಿಸುತ್ತಿದ್ದವು. ಈ ಉದ್ಯಾನವನದ ನಿರ್ವಹಣೆಗೆಂದೆ ಪುರಸಭೆಯ ಇಬ್ಬರು ಕಾರ್ಮಿಕರನ್ನು ಖಾಯಂ ಆಗಿ ನೇಮಿಸಿ ಉತ್ತಮ ನಿರ್ವಹಣೆ ಮಾಡಿ ಯಾವುದೇ ಅನೈತಿಕ ಚಟುವಟಿಕೆಗಳು ನಡೆಯದಂತೆ ಸ್ವಚ್ಛವಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಈ ಉದ್ಯಾನವನ ಸ್ಥಿತಿ ಪುರಸಭೆ ಅಧಿಕಾರಿಗಳ ನಿರ್ಲಕ್ಷ ಹಾಗೂ ಗುತ್ತಿಗೆದಾರರ ಭ್ರಷ್ಠಾಚಾರಕ್ಕೆ ತುತ್ತಾಗಿ ಹಾಳು ಕೊಂಪೆಯಾಗಿದೆ.  
ಭ್ರಷ್ಠಾಚಾರ ನಡೆದ ಬಗ್ಗೆ ಸಾಕ್ಷಿ :
ಹಳೆಯ ಕಾಲದ ಪಳಿಯುಳಿಕೆಯಂತೆ ಉದ್ಘಾಟನೆಗೊಂಡದ ಕಾಣದ ಹಾಳುಬಿದ್ದಿರುವ ನೀರಿಲ್ಲದ ನೀರಿನ ಕಾರಂಜಿಗಳು, ನವೀಕರಣದ ಹೆಸರಿನಲ್ಲಿ ಕೇವಲ ಟೈಲ್ಸ್ ಬದಲಾವಣೆಗೆ ಬದಲಾಗುತ್ತಿರುವ ಆಸನಗಳು, ಉದ್ಯಾನವನದಲ್ಲಿನ ಜಾರು ಬಂಡಿ ಸಮೇತ ಇನ್ನಿತರ ಆಟಿಕೆಯ ವಸ್ತುಗಳು ಕೈಕಾಲು ಮುರಿದು ಕೆಳಗೆ ಬಿದ್ದಿದ್ದರು ಸಹ ನವೀಕರಣ ಭಾಗ್ಯದ ಹೆಸರಿನಲ್ಲಿ ಬಣ್ಣ ಬಳಿದು 2017ರಲ್ಲಿ ಸುಮಾರು 2 ಲಕ್ಷ ರೂ. ದುರುಪಯೋಗವಾಗಿದೆ. ಈ ಹಿಂದೆ ನವೀಕರಣ ಕಾಣದ ಅರ್ಧಂಬರ್ಧ ಕಾಣಿಸುತ್ತಿದ್ದ ಉದ್ಯಾನವನ ನಾಮಫಲಕಕ್ಕೆ 2017ರಲ್ಲಿ ನವೀಕರಣದ ಹೆಸರಿನಲ್ಲಿ ಕನ್ನಡದ ನಾಮಫಲಕಕ್ಕೆ ಉರ್ದುವಿನಲ್ಲಿ ಬರೆಯಲಾಗಿದ್ದು, ನಾಮಫಲಕ ಮಾತ್ರ ಒಂದೇ ವರ್ಷದಲ್ಲಿ ನೆಲಕ್ಕುರಳಿದೆ. ಈಗ ಹೊಸದಾಗಿ 4.5ಲಕ್ಷ ರೂ. ಯೋಜನೆ ಬಂದಿದ್ದು ಇದರಲ್ಲಿ ಈಗಾಗಲೇ ಕಾಮಗಾರಿ ಹಂತದರಲ್ಲಿ ಅಳವಡಿಸಿದ ಕಳಪೆ ಮಟ್ಟದ ಹೊಸ ಜಾರು ಬಂಡಿ ರಂದ್ರಗಳಾಗಿ ಒಡೆದಿದ್ದು ನಾಲ್ಕೈದು ಆಟಿಕೆಗೆ 4.5ಲಕ್ಷ ಖರ್ಚಾಯಿತೇ..? ಈ ರೀತಿ ಇಲ್ಲಿನ ಉದ್ಯಾನವನದಲ್ಲಿ ಸಾಕಷ್ಟು ಭ್ರಷ್ಠಾಚಾರಗಳು ನಡೆದಿರುವುದು ಕಂಡು ಬಂದಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.  
ಈ ವಿಚಾರದಲ್ಲಿ ನಡೆದ ಎಲ್ಲಾ ಭ್ರಷ್ಠಾಚಾರದಲ್ಲಿ ಸಮಗ್ರ ತನಿಖೆಯಾಗಬೇಕು ಹಾಗೂ ಸುಂದರ ಉದ್ಯಾನವನವನ್ನು ನಿರ್ಮಿಸಿ ಜನರ ಉಪಯೋಗಕ್ಕೆ ನೀಡಬೇಕೆಂದು ಪುರಸಭೆ ಅಧಿಕಾರಿಗಳು, ಇಂಜಿನಿಯರಗಳು  ಕಾರ್ಯ ಮಾಡಬೇಕಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕ್ಕೆ ಆದೇಶಿಸಬೇಕೆಂದು ಪಟ್ಟಣ ವ್ಯಾಪ್ತಿಯ ಸಾರ್ವಜನಿಕರು ಪುರಸಭೆ ಇಂಜಿನಿಯರ ಅವರಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಲ್ಲಿ ಸಾರ್ವಜನಿಕರು ಬೀದಿಗಿಳಿಜu ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂಧರ್ಭದಲ್ಲಿ ಶ್ರೀಕಾಂತ ನಾಯ್ಕ, ಈಶ್ವರ ಎನ್. ನಾಯ್ಕ, ಅಣ್ಣಪ್ಪ ರಾಯ್ಕರ, ಸದಾನಂದ ರಾಯ್ಕರ, ರಾಜು

Read These Next