ಕೋಲಾರ ನಗರಸಭೆಗೆ ಮತ್ತೆ ವಕ್ಕರಿಸಿದ ಭ್ರಷ್ಠ ಆಯುಕ್ತ ; ನಗರಸಭಾ ಸದಸ್ಯ ಮುರಳಿಗೌಡ ಆರೋಪ

Source: sonews | By Staff Correspondent | Published on 19th September 2018, 11:09 PM | State News | Don't Miss |

ಕೋಲಾರ : ಕೋಲಾರ ನಗರಸಭೆಯ ಹಿಂದಿನ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸದ್ದ ಭ್ರಷ್ಠ ಪೌರಾಯಕ್ತ ರಾಮ್‍ಪ್ರಕಾಶ್ ಹಲವಾರು ಆರೋಪಗಳನ್ನು ಹೊತ್ತಿದ್ದು, ನಗರಸಭೆಯ ಆಡಳಿತ ಗಬ್ಬೆದ್ದು ಹೋಗಿ ಕೌನ್ಸಿಲ್‍ನ ಸಭೆಯು ಸರ್ವಾನುಮತದಿಂದ ವರ್ಗಾಯಿಸಬೇಕೆಂದು ಸರ್ಕಾರಕ್ಕೆ ಒತ್ತಡ ಹೇರಿತ್ತು. ಅದರಂತೆ ರಾಮ್‍ಪ್ರಕಾಶ್‍ರವರನ್ನು ಪೌರಾಢಳಿತ ನಿರ್ದೇಶನಾಲಯದ ನಿರ್ದೇಶಕರು ಅಮಾನತ್ತುಗೊಳಿಸಿದರು. ನ್ಯಾಯಾಲಯದಲ್ಲಿ ತಡೆಯಾಜ್ಞೆಯಾದ ಕಾರಣ ತದ ನಂತರ ಸರ್ಕಾರವು ವರ್ಗಾವಣೆಗೊಳಿಸಿತು. 

ಇಂತಹ ಭಷ್ಠ ಆಯುಕ್ತನನ್ನು ಕೋಲಾರದ ಶಾಸಕರಾದ ಕೆ ಶ್ರೀನಿವಾಸಗೌಡರು ವಿಶೇಷ ಆಸಕ್ತಿ ವಹಿಸಿ ರಾಮ್‍ಪ್ರಕಾಶ್ ರಂತಹ ಭ್ರಷ್ಠ ಆಯುಕ್ತನಿಗೆ ತಮ್ಮ ಪತ್ರದಲ್ಲಿ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಿ ಮತ್ತೆ ಕೋಲಾರ ನಗರಸಭೆಗೆ ಅವರನ್ನು ಬರಮಾಡಿಕೊಂಡಿದ್ದಾರೆ. ಮುಂದೆ ನಗರದ ಗತಿ ಏನಾಗುವುದೋ ದೇವರೇ ಬಲ್ಲ ಎಂದು ನಗರಸಭಾ ಸದಸ್ಯ ಎಸ್.ಆರ್. ಮುರಳಿಗೌಡ ಆರೋಪಿಸಿದ್ದಾರೆ.

2017-18ನೇ ಸಾಲಿನ ಎಸ್.ಎಫ್.ಸಿ. ಕುಡಿಯುವ ನೀರಿನ ಅನುದಾನ 1.5 ಕೋಟಿ ಸರ್ಕಾರದಿಂದ ಬಿಡುಗಡೆಯಾಗಿದ್ದು, ಈ ಅನುದಾನಕ್ಕೆ ಸ್ಥಳೀಯ ಶಾಸಕರು ಟಾಸ್ಕ್ ಪೊರ್ಸ್ ಸಮಿತಿಯ ಅಧ್ಯಕ್ಷರಾಗಿದ್ದು, ಇವರು ಮಾಡಿರುವ ಕ್ರಿಯಾ ಯೋಜನೆಯಲ್ಲಿ ವಾರ್ಡ್ ನಂ. 14ಕ್ಕೆ ಒಂದು ನಯಾಪೈಸೆ ಕೂಡ ನೀಡದೆ ಜನರಿಗೆ ಅನ್ಯಾಯ ವೆಸಗಿದ್ದಾರೆ. 

ಸರ್ಕಾರವು ಅಧಿಕೃತವಾಗಿ ಸ್ಥಳೀಯ ಕೋಲಾರ ನಗರಸಭೆಯ ಮೀಸಲಾತಿಯಲ್ಲಿ ಕರಡು ಅಧಿಸೂಚನೆಯನ್ನು ಪ್ರಕಟಿಸಿ ಆಕ್ಷೇಪಣೆಗಳನ್ನು ಪಡೆದು ಅಧಿಕೃತವಾಗಿ ಮೀಸಲಾತಿಯನ್ನು ಘೋಷಿಸಿದ್ದು, ವಾರ್ಡ್ ನಂ. 14ನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿದ್ದು, ಮತ್ತೆ ಅದನ್ನು ಬದಲಾಯಿಸಲು ಸರ್ಕಾರಕ್ಕೆ ಸ್ಥಳೀಯ ಶಾಸಕರು ಶಿಫಾರಸ್ಸು ಮಾಡಿರುವುದು ವೈಯುಕ್ತಿಕ ಹಗೆತನವನ್ನು ತೋರಿದಂತಾಗಿದೆ ಎಂದು ನಗರಸಭಾ ಸದಸ್ಯ ಎಸ್.ಆರ್.ಮುರಳಿಗೌಡರು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

                            


 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...