ಕರ್ನಾಟಕ ವಿಧಾನಸಭೆ ಚುನಾವಣೆ; ಎರಡು ವಿಚಾರಧಾರೆಗಳ ನಡುವಿನ ಹೋರಾಟ-ರಾಹುಲ್

Source: sonews | By Staff Correspondent | Published on 26th April 2018, 5:25 PM | Coastal News | State News | Don't Miss |

ಅಂಕೋಲಾ: ಕರ್ನಾಟಕದಲ್ಲಿ ನಡಯುವ ಚುನಾವಣೆಯು ಎರಡು ವಿಚಾರಧಾರೆಗಳ ನಡುವಿನ ಹೋರಾಟವಾಗಿದೆ ಎಂದು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಅವರು ಗುರುವಾರ ಅಂಕೋಲಾದಲ್ಲಿ ನಡೆದ ಕಾಂಗ್ರೇಸ್ ಪಕ್ಷದ ರೋಡ್ ಷೋ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉರಿಬಿಸಿಲಿನಲ್ಲೂ ಕಿಕ್ಕಿರಿದು ಸೇರಿದ ಜನತೆಯನ್ನು ಅಭಿನಂದಿಸಿದ ಅವರು, ರಾಜ್ಯದಲ್ಲಿ ಚುನಾವಣೆಯು ಬಿಜೆಪಿ ಆರ್.ಎಸ್‌ಎಸ್ ವಿಚಾರಧಾರೆಗಳ ವಿರುದ್ಧ ನಡೆಯುವ ಹೋರಾಟವಾಗಿದ್ದು ಇಲ್ಲಿ ಬಡವರು ಬೆವರು ಸುರಿಸಿ ದುಡಿಯುತ್ತಾರೆ. ಅವರು ತಕ್ಕ ಬೆಲೆ ಸಿಗಬೇಕು. ಆದರೆ ಆರ್.ಎಸ್.ಎಸ್.ಬಿಜೆಪಿ ಹೇಳುತ್ತದೆ ರಾಜ್ಯದ ಜನತೆಯ ಹಣ ೧೦-೧೫ ಉದ್ಯೋಗಪತಿಗಳ ಜೇಬು ತುಂಬಬೇಕು. ಇದು ಪ್ರಮುಖವಾಗಿ ಕಾಂಗ್ರೇಸ್ ಮತ್ತು ಬಿಜೆಪಿ, ಆರ್.ಎಸ್.ಎಸ್.ಗಳ ನಡುವೆ ಇರುವ ವಿಚಾರಧಾರೆಯ ಅಂತರವಾಗಿದೆ. ಉದ್ಯೋಗಪತಿಗಳ ಮನೆ ತುಂಬುವ ಕೆಲಸವನ್ನು ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ರೈತರ ಸಾಲವನ್ನು ಮನ್ನ ಮಾಡಿ ಎಂದರೆ ಇದು ನಮ್ಮ ನೀತಿಯಲ್ಲ ಎಂದು ಮೋದಿ ಹೇಳುತ್ತಾರೆ. ೨.೫ಲಕ್ಷ ಕೋಟಿ ಸಾಲವನ್ನು ಕಳೆದ ವರ್ಷ ಮೋದಿಯವರು ಶ್ರೀಮಂತರಿಗಾಗಿ ಮನ್ನಾ ಮಾಡಿದ್ದಾರೆ. ಅವರಿಗೆ ಬಡರೈತರ ಸಾಲಮನ್ನಾ ಮಾಡಲು ಹಣವಿಲ್ಲ. ಇದು ಕಾಂಗ್ರೇಶ್ ಮತ್ತು ಬಿಜೆಪಿಯ ನಡುವಿ ವಿಚಾರಧಾರೆಯ ವ್ಯತ್ಯಾಸವಾಗಿದೆ.

ಸಿದ್ದರಾಮಯ್ಯ ಬಡವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಬ್ರಷ್ಟ್ರ ಯಡಿಯೂರಪ್ಪ ಹಾಗೂ ನಾಲ್ಕು ಬ್ರಷ್ಟ ಮಂತ್ರಿಗಳನ್ನು ಮುಂದಿಟ್ಟುಕೊಂಡು ಭ್ರಷ್ಟಚಾರ ತೊಲಗಿಸುವ ಮಾತನಾಡುವ ಮೋದಿಗೆ ಜೈಲಿಗೆ ಹೋಗಿ ಬಂದಿರುವ ವ್ಯಕ್ತಿಗಳು ಕಣ್ಣಿಗೆ ಕಾಣುವುದಿಲ್ಲ. ೧೫ಲಕ್ಷ ರೂ ಬ್ಯಾಂಕ್ ಖಾತೆ ಹಾಕುತ್ತೇನೆ ಎಂದು ಹೇಳುವ ಮೋದಿಜಿ ಯಾರ ಖಾತೆಗೆ ಹಾಕಿದ್ದಾರೆ ಎಂದು ಜನರಿಗೆ ಕೇಳುವುದರ ಮೂಲಕ ಅವರು ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...