ನೂತನ ಜಿ.ಪಂ.ಸಿಇಒ ಜಗದೀಶರಿಗೆ ರೈತಸಂಘದಿಂದ ಅಭಿನಂದನೆ

Source: sonews | By Staff Correspondent | Published on 20th September 2018, 11:00 PM | State News |

ಕೋಲಾರ: ನೂತನ ಜಿಲ್ಲಾ ಪಂಚಾಯಿತಿ ಸಿ.ಇ.ಒ ಆಗಿ ಅಧಿಕಾರ ಸ್ವೀಕಾರ ವಹಿಸಿಕೊಂಡಿರುವ ಜಗದೀಶ್‍ರವರನ್ನು ರೈತ ಸಂಘದಿಂದ ಅಭಿನಂದನೆ ಮಾಡಿ ನಂತರ ಜಿಡ್ಡುಗಟ್ಟಿರುವ ಗ್ರಾಮ ಪಂಚಾಯಿತಿಗಳ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಮನವಿ ನೀಡಿ ಒತ್ತಾಯಿಸಲಾಯಿತು.

ಅಭಿನಂದನೆ ಹಾಗೂ ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ,ನಾರಾಯಣಗೌಡ ಗ್ರಾಮೀಣ ಪ್ರದೇಶಗಳಬಡ ಕೂಲಿಕಾರ್ಮಿಕರ ಜೀವನದ ಜೊತೆ ಪಂಚಾಯಿತಿ  ಪಿ.ಡಿ.ಓ ಹಾಗೂ ಕಾರ್ಯದರ್ಶಿಗಳು ನಕಲಿ ದಾಖಲೆಗಳನ್ನು ಸೃಷ್ಠಿ ಮಾಡುವ ದಂದೆಯಿಂದ ಒಬ್ಬರ  ಸ್ವಾಧೀನದಲ್ಲಿರುವ ನೀವೇಶವೇ ಮತ್ತೊಬ್ಬರಿಗೆ ಪಿ ನಂಬರ್ ಕೊಟ್ಟು ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಗ್ರಾಮಗಳಲ್ಲಿ ಅಶಾಂತಿ ಸೃಷ್ಠಿ ಮಾಡುವ ಜೊತೆಗೆ ಕೆಲಸ ಕಾರ್ಯ ಬಿಟ್ಟು ಜಗಳಗಳಾಡಿ ಪೋಲಿಸ್ ಠಾಣೆಯ ಮೆಟ್ಟಲೇರುವ ಜೊತೆಗೆ ವರ್ಷಾನುಗಟ್ಟಲೇ ನ್ಯಾಯಾಲಯಕ್ಕೆ ಅಲೆದಾಡಬೇಕಾದ ಪರಿಸ್ಥಿತಿ ಪಂಚಾಯಿತಿಗಳಲ್ಲಿ ಸೃಷ್ಠಿ ಮಾಡುತ್ತಿದ್ದಾರೆ. ಸಂಭಂದಪಟ್ಟ ಅಧಿಕಾರಿಗಳನ್ನು ಕೇಳಿದರೆ ತಪ್ಪಿತಸ್ಥ ಅಧಿಕಾರಿಗಳ ಪರ ಮಾತನಾಡಿ ನಮ್ಮ ಅವಧಿಯಲ್ಲಿಯೇ ಆಗಿಲ್ಲ. ಬೇರೆಯವರ ಅವಧಿಯಲ್ಲಿ ಆಗಿದೆ ಈಗ ಅದಕ್ಕೆ ನಾವು ಏನು ಮಾಡಬೇಕೆಂದು ಬೆದರಿಕೆ ಹಾಕುತ್ತಾರೆ.ಹತ್ತಾರು ವರ್ಷಗಳಿಂದ ಸ್ವಾಧೀನದಲ್ಲಿರುವ ನೀವೇಶನಗಳನ್ನು ರಾತ್ರೋರಾತ್ರಿ ಪಂಚಾಯಿತಿಯಲ್ಲಿರಬೇಕಾದ ಪುಸ್ತಕಗಳನ್ನು ಮನೆಗೆ ಕೊಂಡೋಯ್ದು ತಿದ್ದುಪಡಿ ಮಾಡಿ ಲಕ್ಷ ಲಕ್ಷ ಹಣ ಪಡೆದು ಪಂಚಾಯಿತಿಗಳನ್ನು ಸಾರ್ವಜನಿಕವಾಗಿ ಅಡಹಿಟ್ಟಿದ್ದಾರೆಂದು ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮಾಡಿ ಬಡ ಕೂಲಿಕಾರ್ಮಿಕರ ಆರೋಗ್ಯವನ್ನು ಕಾಪಾಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾವಿರಾರು ಕೋಟಿ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡುತ್ತಿದ್ದರೂ ಅಧಿಕಾರಿಗಳ ಮತ್ತು ರಾಜಕಾರಣಿಗಳ ಹಣದಾಹಕ್ಕೆ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಎಂಬುದು ಮರಚಿಕೆಯಾಗಿದೆ. ಮತ್ತೊಂದು ಕಡೆ ಪಂಚಾಯಿತಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹಾಗೂ ಹಣದ ದಾಹದಿಂದ ಗ್ರಾಮೀಣ ಪ್ರದೇಶದ ಬಡ ಕೂಲಿಕಾರ್ಮಿಕರು ಗಲಾಟೆಗಳನ್ನು ಪೊಲೀಸ್ ಠಾಣೆ ಹತ್ತಿ ಹಳ್ಳಿಗಳಲ್ಲಿ ಅಶಾಂತಿ ಹಾಗೂ ಕಾನೂನು ವ್ಯವಸ್ಥೆ ಹದಗೆಡುತ್ತಿವೆ. ಮತ್ತೊಂದಡೆ ಗ್ರಾಮೀಣ ಪ್ರದೇಶಗಳ ಚರಂಡಿ, ದೀಪದ ವ್ಯವಸ್ಥೆ ರಸ್ತೆಗಳು ಸಂಪೂರ್ಣವಾಗಿ ತ್ಯಾಜ್ಯಗಳಿಂದ ಗಬ್ಬುನಾರು ತೆಗೆದು ಗ್ರಾಮೀಣ ಪ್ರದೇಶ ಜನ ಅನಾರೋಗ್ಯದಿಂದ ನರಳುತ್ತಿದ್ದು, ಅಧಿಕಾರಿಗಳ ಮನಸ್ಸು ಕರಗುತ್ತಿಲ್ಲ. ಮತ್ತೊಂದು ಮಹತ್ಮಕಾಂಕ್ಷಿ ಯೋಜನೆಯಾದ ದುಡಿಯುವ ಕೈಗೆ ಕೆಲಸ ಕೊಡುವ ನರೇಗಾ ಯೋಜನೆ ಇಂದು ಭ್ರಷ್ಟಾಚಾರದಿಂದ ಕೂಡಿ ಆಯೋಜನೆಯು ಮೂಲೆಗುಂಪಾಗುತ್ತಿದೆ. ಗ್ರಾಮೀಣ ಅಭಿವೃದ್ಧಿಯ 14ನೇ ಹಣಕಾಸು ಯೋಜನೆ ಕೋಟ್ಯಾಂತರ ರೂ ಅವ್ಯವಹಾರದಿಂದ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗುತ್ತಿಲ್ಲ. ಈ ಹಣ ಅಧಿಕಾರಿಗಳು ಮತ್ತು ರಾಜಕಾರಣಿಗಳ ಜೋಬು ಸೇರುತ್ತಿದೆ. ಇಷ್ಟೆಲ್ಲಾ ಅವ್ಯವಸ್ಥೆಗಳ ಜೊತೆಗೆ ಎನ್.ಆರ್.ಐ.ಜಿ. ಕಾಮಗಾರಿ ಮಾಡುವ ಪ್ರತಿಯೊಬ್ಬರು ಅದನ್ನು ವೀಕ್ಷಣೆ ಮಾಡಲು ಬರುವ ಇಂಜಿನಿಯರ್‍ಗೆ ಶೇಕಡವಾರು ಹಣ ನೀಡದರೆ ಮಾತ್ರ ಬಿಲ್ ಮಂಜೂರಾತಿ ಮಾಡುತ್ತಾರೆ. ಇಲ್ಲವೆ ನೂರೊಂದು ನೆಪ ಹೇಳಿ ಟೆಂಡರ್‍ದಾರರ ಹಿಂಸೆ ಮಾಡುತ್ತಾರೆಂದು  ಮನವಿ ಮಾಡಿದರು.

ಅಭಿನಂದನೆ ಹಾಗೂ ಮನವಿ ಸ್ವೀಕರಿಸಿದ ನೂನತ ಸಿ.ಇ.ಒ ಜಗದೀಶ್‍ರವರು ಮಾತನಾಡಿ ಅಧಿಕಾರ ಸ್ವೀಕಾರ ಮಾಡಿ 3 ದಿನಗಳಾಗಿದೆ ನಾನು ಯಾವುದೇ ಒತ್ತಡಗಳಿಗೆ ಮಣಿಯುವುದಿಲ್ಲ ನನ್ನ ಕೆಲಸಕ್ಕೆ ಯಾರೆ ಅಡ್ಡ ಬಂದರು ನಾನು ಸಹಿಸುವುದಿಲ್ಲ ಎಲ್ಲೇ ಕೆಲಸಮಾಡಿದರು ಜನಪರ ಕೆಲಸ ಮಾಡಬೇಕೆಂಬುದೆ ನನ್ನ ಉದ್ಧೇಶ ಅದರ ಜೊತೆಗೆ  ಪಂಚಾಯಿತಿಗಳಲ್ಲಿನ ಅವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರ ದೂರು ಹೆಚ್ಚಾಗುತ್ತಿವೆ ಅದರಲ್ಲಿ ಪ್ರಮುಖವಾಗಿ ನಿವೇಶನಗಳಿಗೆ ಸಂಬಂದಪಟ್ಟ ಖಾತೆ, ಇ-ಸ್ವತ್ತು ಮುಂತಾದ ದಾಖಲೆಗಳಿಗೆ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡುವ ದೂರುಗಳು ಹೆಚ್ಚಾಗಿದ್ದು, ಇವುಗಳ ಬಗ್ಗೆ ಹೆಚ್ಚಿನ ಗವiನ ಹರಿಸಿ ಬಗೆಹರಿಸುವ ಭರವಸೆ ನೀಡಿದರು.  

ಈ ಮನವಿ ನೀಡುವಾಗ ಜಿಲ್ಲಾದ್ಯಕ್ಷೆ  ಎ.ನಳಿನಿಗೌಡ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಪುರುಷೋತ್ತಮ್, ಪುತ್ತೇರಿ ರಾಜು, ಜನಘಟ್ಟ ಕೃಷ್ಣಮೂರ್ತಿ ಎಸ್.ಎಫ್.ಐ ವಾಸುದೇವರೆಡ್ಡಿ ಮುಂತಾದವರಿದ್ದರು.
 
    

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...