ಕಾಂಕ್ರೀಟ್ ರಸ್ತೆ ಕಳಪೆ ಕಾಮಗಾರಿ : ಗ್ರಾಮಸ್ಥರಿಂದ ಪಿಡಿಒ ಹಾಗೂ ಅಧ್ಯಕ್ಷರಿಗೆ ಮನವಿ

Source: sonews | By Staff Correspondent | Published on 9th December 2018, 11:29 PM | Coastal News |

ಮುಂಡಗೋಡ : ಗ್ರಾಮ ವಿಕಾಸ ಯೋಜನೆಯಡಿ ನಂದಿಗಟ್ಟಾ ಗ್ರಾಮದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆಯ  ಕಾಮಗಾರಿಯು ಕಳಪೆ ಹಾಗೂ ರಸ್ತೆ ಅಗಲಿಕರಣದಲ್ಲಿ ಕಡಿಮೆ ಯಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಹಾಗೂ ಅಧ್ಯಕ್ಷರಿಗೆ ಮನವಿ ಅರ್ಪಿಸಿದ್ದಾರೆ.

ರಸ್ತೆಯು ಸರಿಯಾದ  ರೀತಿಯಲ್ಲಿ ನಿರ್ಮಾಣವಾಗಬೇಕು ಮತ್ತು ಅಗಲಿಕರಣವು ಕಡಿಮೆ ಯಾಗಬಾರದು ಸಂಬಂದಪಟ್ಟ ಅಧಿಕಾರಿಗಳು ಅಂದಾಜು ಪತ್ರಿಕೆಯ ನಕಲು ಗ್ರಾಮಸ್ಥರಿಗೆ ನೀಡಿ ಕಾಮಗಾರಿ ಪ್ರಾರಂಭಿಸಬೇಕು. ಅಂದಾಜು ಪತ್ರಿಕೆಯಂತೆ ಕಾಮಗಾರಿ ನಡಯದೇ ಇದ್ದರೆ ನಮಗೆ ಈ ರಸ್ತೆಯ ಕಾಮಗಾರಿ ಬೇಕಾಗಿಲ್ಲ ಹಾಗೂ ಕಾಮಗಾರಿಯನ್ನು ಮುಂದುವರೆಸಲು ಬಿಡುವುದಿಲ್ಲ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. 
ಈ ಕುರಿತು  ದೂರವಾಣಿ ಮುಖಾಂತರ ಪತ್ರಿಕೆ ಜೊತೆ ಮಾತನಾಡಿದ ಎಪಿಎಮ್‍ಸಿ ಸದಸ್ಯ ನಿಂಗಪ್ಪ ಕಾವಟೆ ಮಾತನಾಡಿ ಕಾಮಗಾರಿಯು ಕಳಪೆ ಮಟ್ಟದಿಂದ ಕೂಡಿದೆ. ಸರಿಯಾಗಿ ನಡೆಯುತ್ತಿಲ್ಲಾ ಕಾಮಗಾರಿ ನಿಲ್ಲಿಸಿ ಎಂದರು ಕೇಳುತ್ತಿಲ್ಲ.ಆದ್ದರಿಂದ ಸಂಬಂದ ಪಟ್ಟ ಇಲಾಖೆಯ ಇಂಜನಿಯರರಿಗ ಫೋನಮಾಡಿ ಬಿಲ್ ಮಾಡಬಾರದು ಎಂದು ತಿಳಿಸಿದ್ದೇವೆ. 

ಮನವಿ ಕೊಡುವ ಸಂದರ್ಭದಲ್ಲಿಗ್ರಾಮಸ್ಥರಾದ ಸಂತೋಷ ಕಾಮಳೆ,  ರಾಮಕೃಷ್ಣ ರಾಧಾಪುರ, ಮಂಜುನಾಥ ನೆಮ್ಮಣ್ಣನವರ, ಅಶೋಕ ರಾವಜಿ, ನಾರಾಯಣ, ಪರಶುರಾಮ, ಮಂಜುನಾಥ ಕವಟೆ, ವಿಷ್ಣು ಹಂಚಿನಮನಿ, ಯಲ್ಲಪ್ಪ ಆಲೂರ, ಇಂದುಬಾಯಿ ರಾಧಾಪುರ, ಗೋಪಿ ವಾಸ, ಶಾಂತವ್ವಾ ಕಟ್ಟಿಮನಿ, ಫಕ್ಕಿರೇಶ ಕಟ್ಟಿಮನಿ, ರತ್ನವ್ವಾ ನಾಣಾಪೂರ, ಅಬ್ದೂಸಾಬ ತಡಸ, ಸೇರಿದಂತೆ ನೂರಾರು ಗ್ರಾಮಸ್ಥರ ಸಹಿಹಾಕಿದ ಮನವಿಯನ್ನು ಸಲ್ಲಿಸಿದ್ದಾರೆ.  

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...