ಲೋಕಾಯುಕ್ತರಿಂದ ದೂರು ಸ್ವೀಕಾರ

Source: sonews | By Staff Correspondent | Published on 24th January 2019, 11:34 PM | Coastal News |

ಕಾರವಾರ:  ಕರ್ನಾಟಕ ಲೋಕಾಯುಕ್ತ ,ಕಾರವಾರ ಘಟಕದ ಪೊಲೀಸ ಅಧಿಕಾರಿಗಳು. ಜಿಲ್ಲೇಯ ವಿವಿಧ ತಾಲೂಕುಗಳ ಬೇಟಿ ನೀಡಿ ಸಾರ್ವಜವನಿಕರಿಂದ ಲೋಕಾಯುಕ್ತ ದೂರು ಅರ್ಜಿ ನಮೂನೆ 1 & 2 ನೇದನ್ನು ಸ್ವೀಕರಿಸಲಿದ್ದಾರೆ. ಸಿವಿಲ್ ಮತ್ತು ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಪ್ರಕರಣಗಳನ್ನು ಹೊರತುಪಡಿಸಿ,  ಸಾರ್ವಜನಿಕ / ಸರ್ಕಾರಿ ನೌಕರರ ಕರ್ತವ್ಯ ಲೋಪಕ್ಕೆ ಸಂಬಂದಿಸಿದಂತೆ ನೋಟರಿಯಿಂದ ಅಪಿಡೇವಿಡ ಮಾಡಿ, ಅರ್ಜಿ ನಮೋನೆ 1 & 2 ರಲ್ಲಿ ಭರ್ತಿಮಾಡಿ ಸಂಬಂದಪಟ್ಟ ಸೂಕ್ತ ದಾಖಲೆಗಳೊಂದಿಗೆ ದೂರು ಅರ್ಜಿಗಳನ್ನು ನೇರವಾಗಿ ಅಥವಾ, ಕರ್ನಾಟಕ ಲೋಕಾಯುಕ್ತ ಬಹುಮಹಡಿ ಕಟ್ಟಡಿ ಡಾ // ಬಿ,ಆರ್, ಅಂಬೇಡ್ಕರ ವೀದಿ ಬೆಂಗಳೂರಿಗೆ ಸಲ್ಲಿಸಬಹುದು. 

ದೂರು ನೀಡಲು ಇಚ್ಚಿಸುವವರು ದಿನಾಂಕ : 24-01-2019 ಗುರುವಾರ ಬೆಳಿಗ್ಗೆ 11-30 ರಿಂದ ಮದ್ಯಾಹ್ನ 1-00 ಗಂಟೆ, ಪ್ರವಾಸಿ ಮಂದಿರ ಸಿದ್ದಾಪುರ. ಅದೇ ದಿನ ಮದ್ಯಾಹ್ನ 3-00 ಗಂಟೆಯಿಂದ ಸಾಯಂಕಾಲ 4-00 ಗಂಟೆವರೆ ಪ್ರವಾಸಿ ಮಂದಿರ ಶಿರಶಿ. 28-01-2019 ರಂದು ಸೋಮವಾರ ಬೆಳ್ಳಿಗೆ 11-00 ರಿಂದ 12-30 ಪ್ರವಾಸಿ ಮಂದಿರ  ಭಟ್ಕಳ. ಮದ್ಯಾಹ್ನ 3-00 ರಿಂದ ಸಾಂಯಕಾಲ 4-30 ಗಂಟೆ ಪ್ರವಾಸಿ ಮಂದಿರ ಹೊನ್ನಾವರ. 29-01-2019 ಬೆಳ್ಳಿಗೆ 11-00 ರಿಂದ ಮದ್ಯಾಹ್ನ 12-30 ಗಂಟೆ ಪ್ರವಾಸಿ ಮಂದಿರ ಮುಂಡಗೋಡ. ಮದ್ಯಾಹ್ನ 3-00 ರಿಂದ ಸಾಯಂಕಾಲ 4-30 ಗಂಟೆ ಪ್ರವಾಸಿ ಮಂದಿರ ಯಲ್ಲಾಪುರ. ಹಾಗೂ 30-01-2019 ಬುಧವಾರ ಬೆಳ್ಳಿಗೆ 11-00 ರಿಂದ ಮಧ್ಯಾಹ್ನ 12-30 ಗಂಟೆ ಪೋಲಿಸ್ ಅಧೀಕ್ಷಕರ ಕಛೇರಿ ಕಾರವಾರದಲ್ಲಿ ದೂರುಗಳನ್ನು ನೀಡಬಹುದು. ದೂರುದಾರರು ಅರ್ಜಿಯಲ್ಲಿ ತಮ್ಮ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖೈಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಇಲ್ಲವಾದಲ್ಲಿ ಅಂತಹ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಲಾಗಿದೆ.

ಜ.26ರಂದು ದಾಂಡೇಲಿಯಲ್ಲಿ ಸೀಮನ್ಸ್ ಜೇಷ್ಠತಾ ಕೇಂದ್ರದ ಉದ್ಘಾಟನೆ
ಕಾರವಾರ:  ಸೀಮನ್ಸ್ ಶ್ರೇಷ್ಠತಾ ಕೇಂದ್ರದ ಕೌಶಲ್ಯ ತರಬೇತಿಗಳ ಉದ್ಘಾಟನಾ ಸಮಾರಂಭ ದಿನಾಂಕ 26-01-2019ರಂದು ಸಂಜೆ 4ಕ್ಕೆ ದಾಂಡೇಲಿಯಲ್ಲಿ ನಡೆಯಲಿದೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ದಾಂಡೇಲಿ ಇವರ ಸಂಯುಕ್ತಾಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆ ಉದ್ಘಾಟಿಸಲಿದ್ದಾರೆ.

ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಅವರ ಘನ ಉಪಸ್ಥಿತಿ ಇರಲಿದ್ದು, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಶಿವರಾಮ ಹೆಬ್ಬಾರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ ಸೇರಿದಂತೆ ಎಲ್ಲ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ.

 

ಜ.26ರಂದು ಗಣರಾಜ್ಯೋತ್ಸವ
ಕಾರವಾರ:  ಜನೇವರಿ 26 ಗಣರಾಜ್ಯೋತ್ಸವ ದಿನಾಚರಣೆಯನ್ನು, ಬೆಳ್ಳಿಗ್ಗೆ 9 ಗಂಟೆಗೆ ಪೊಲೀಸ್ ಪರೇಡ ಮೈದಾನದಲ್ಲಿ ಅದ್ದೂರಿಯಾಗಿ ನಡೆಸಲು ಜಿಲ್ಲಾಡಳಿತ ತಯಾರಿ ನಡೆಸಿದೆ.

ಈ ಕಾರ್ಯಕ್ರಮದ್ದಲ್ಲಿ ಆರ್.ವ್ಹಿ.ದೇಶಪಾಂಡೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಶುಭ ಸಂದೇಶ ನೀಡಲ್ಲಿದ್ದಾರೆ. ಗೌರವ ಉಪಸ್ಥಿತಿಯನ್ನು ಅನಂತಕುಮಾರ ಹೆಗಡೆ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರು ಭಾರತ ಸರ್ಕಾರ ಇವರಿರಲ್ಲಿದ್ದು. ಗೌರಾವಾನ್ವಿತ ಅತಿಥಿಗಳಾಗಿ  ಜಿಲ್ಲೆಯ ಮಾನ್ಯ  ಶಾಸಕರು, ಜಿಲ್ಲಾ, ತಾಲೂಕು, ಹಾಗೂ ಗ್ರಾಮ ಪಂಚಾಯತಿಯ, ನಗರ ಸ್ಥಳೀಯ ಸಂಸ್ಥೆಗಳ, ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸದ್ಯಸರುಗಳು ಇರಲ್ಲಿದ್ದಾರೆ.

ಪೊಲೀಸ್, ಅರಣ್ಯ, ಗೃಹರಕ್ಷಕ ದಳ, ಎನಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಇವರಿಂದ ಪಥ ಸಂಚಲನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವಿದ್ದು. ಸಾಂಯಕಾಲ 5.30 ಘಂಟೆಗೆ ಜಿಲ್ಲಾ ರಂಗಮಂದಿರದಲ್ಲಿ ಶಾಲಾ ಮಕ್ಕಳ ಮನರಂಜನಾ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.  
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...