ಮುಂಡಳ್ಳಿಯಲ್ಲಿ ನಾಗರ ಹಾವು ರಕ್ಷಣೆ

Source: sonews | By Staff Correspondent | Published on 8th October 2018, 6:04 PM | Coastal News | Don't Miss |

ಭಟ್ಕಳ: ತಾಲೂಕಿನ ಮುಂಡಳ್ಳಿ ಪಂಚಾಯತ್ ವ್ಯಾಪ್ತಿಯ ತಿರಗರನ ಮನೆಯ ಶನಿಯಾರ ನಾಯ್ಕ ಎಂಬುವರ ಮನೆಯಲ್ಲಿ ಬಲೆಯೊಂದರಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ನಾಗರ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ನಡೆದಿದೆ. 

ರಾತ್ರಿ ವೇಳೆ ಅಹಾರವನ್ನು ಅರಿಸಿ ನಾಡಿಗೆ ಬಂದ ನಾಗರವೊಂದು ಶನಿಯಾರ ನಾಯ್ಕರ ಮನೆಯ ತೋಟದಲ್ಲಿ ಮರಗಳ ರಕ್ಷಣೆಗೆಂದು ಹಾಕಿದ್ದ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದೆ. ಬೆಳಿಗ್ಗೆ ನೋಡಿದಾಗ ಹಾವೊಂದು ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದುದ್ದನ್ನು ಕಂಡ ಶನಿಯಾರ ನಾಯ್ಕರ ಕುಟುಂಬದವರು ಅದನ್ನು ಬಲೆಯಿಂದ ತಪ್ಪಿಸಲು ಪ್ರಯತ್ನಿ ವಿಫಲವಾಗಿದ್ದು ನಂತರ ಚಿತ್ರಾಪುರದ ಉರಗ ತಜ್ಞ ಮಾದೇವ ನಾಯ್ಕರನ್ನು ಕರೆದು ಅವರ ಮೂಲಕ ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...