ಚಿತ್ರಾಪುರ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ

Source: sonews | By Staff Correspondent | Published on 11th October 2018, 10:51 PM | Coastal News |

ಭಟ್ಕಳ: ಶಿರಾಲಿಯ ಚಿತ್ರಾಪುರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹೊನ್ನಾವರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾ ಕೂಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 

ಕುಲದೀಪಕುಮಾರ್ ಜಗತ್ಪಾಲ ಕರಪ್ ಈತನು ಗುಂಡು ಎಸೆತ, ಚಕ್ರ ಎಸೆತ, ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವುದರೊಂದಿಗೆ ಜಿಲ್ಲಾ ವೀರಾಗ್ರಣಿ ಬಾಲಕ ನಾಗಿ ಹೊರಹೊಮ್ಮಿದ್ದಾನೆ. 

ಮಂದಾರ ವೆಂಕಟರಮಣ ನಾಯ್ಕ ಈಕೆಯು 400 ಮೀ., 600 ಮೀ., ಓಟದಲ್ಲಿ ದ್ವಿತೀಯ ಸ್ಥಾನಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಪುನೀತ ನಾರಾಯಣ ನಾಯ್ಕ ಈತನು ಹರ್ಡಲ್ಸ್‍ನಲ್ಲಿ ತೃತೀಯ ಸ್ಥಾನ ಪಡೆದಿದ್ದಾನೆ.  4-400 ಮೀ., ರಿಲೇಯಲ್ಲಿ ಶಾಲಾ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ ಗಳಿಸಿದೆ. 

ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ. ಸದಸ್ಯರು ಅಭಿನಂದಿಸಿದ್ದಾರೆ. (ಫೋಟೊ: 12-ಬಿಕೆಲ್-05-ಚಿತ್ರಾಪುರ ವಿದ್ಯಾರ್ಥಿಗಳ)
 

Read These Next