ಮಗುವನ್ನು ಕತ್ತು ಹಿಸುಕಿ ಕೊಂದ ತಾಯಿ

Source: S O News service | By Staff Correspondent | Published on 16th January 2017, 10:40 PM | State News | Special Report | Incidents | Don't Miss |

ಚಿಂತಾಮಣಿ: ನಗರದ ವಿನೋಭಾ ಕಾಲೋನಿಯ ನಿವಾಸಿ ಹಾಲಿ ಗಾಂಧಿನಗರ ಬಡಾವಣೆಯ ನಿವಾಸಿ ತಿರುಮಲ್ಲಮ್ಮ ಎಂಬಾಕೆ ಹೆತ್ತ ೪ ವರ್ಷದ ಗಂಡು ಮಗುವನ್ನು ಕತ್ತು ಹಿಸುಕಿ ಕೊಂದು ಶವವನ್ನು ನಗರದ ಹೊರವಲಯದ ಮಾಳಪಲ್ಲಿ ಕೆರೆಯ ಅಂಗಳದಲ್ಲಿ ಹೂತಿರುವ ಘಟನೆ ನಡೆದಿದೆ.
ನಗರದ ಎಂ.ಜಿ.ರಸ್ತೆಯಲ್ಲಿರುವ ತಪತೇಶ್ವರ ಕಾಲೋನಿಯಲ್ಲಿ ವಾಸವಾಗಿದ್ದ ಯುವಕ ನೊಬ್ಬನನ್ನು ತಿರುಮಲ್ಲಮ್ಮ ಮದುವೆಯ ಮುಂಚೆಯೇ ೨೦೧೧ ರಲ್ಲಿ ಪ್ರೀತಿಸಿದ್ದ ಆಕೆಯ ನಡತೆ ಚೆನ್ನಾಗಿದೆ ಇರುವುದನ್ನು ತಿಳಿದ ನಂತರ ಮದುವೆಯಾಗಲು ನಿರಕಾರಿಸಿದ್ದರಿಂದ ಈವಿಷಯ ನಗರ ಠಾಣೆಯ ಮೆಟ್ಟಿಲೇರಿದ್ದು ಠಾಣೆಯಲ್ಲಿ ಹೂವಿನ ಹಾರಗಳು ಬದಲಾವಣೆ ಮಾಡುವ ಮೂಲಕ ಹಿರಿಯರು ಮದುವೆ ಮಾಡಿಸಿದ್ದರು.
ಮದುವೆಯಾಗಿ ಒಂದು ಮಗುವಾದ ನಂತರವೂ ತಿರುಮಲ್ಲಮ್ಮ ತನ್ನ ನಡತೆಯನ್ನು ಸರಿಪಡಿಸಿಕೊಳ್ಳದೆ ಮುಂದುವರೆಸಿದ್ದರಿಂದ ಕುಪಿತಗೊಂಡ ಆತ ಕೊನೆಗೂ ಆಕೆಯಿಂದ ವಿಛೇ ದನವನ್ನು ಪಡೆದುಕೊಂಡು ಬೇರೆ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾನೆ. 
ಆದರೆ ತಿರುಮಲಮ್ಮ ಮುರಳಿ ಎಂಬುವನ ಜೊತೆ ಅಕ್ರಮ ಸಂಬಂಧನ್ನು ಇರಿಸಿಕೊಂಡಿ ದ್ದು ಅವರಿಗೆ ಇದೀಗ ಒಂದು ವರ್ಷ ಐದು ತಿಂಗಳು ಹೆಣ್ಣು ಮಗು ಸಹ ಆಗಿದೆ, ಮೊದಲ ಮಗ ಸಿದ್ದಾರ್ಥನನ್ನು ವಿನೋಭಾ ಕಾಳೋನಿಯಲ್ಲಿರುವ ತನ್ನ ತಾಯಿಯ ಮನೆಯಲ್ಲಿ ಬಿಟ್ಟಿ ದ್ದಳು ಇತ್ತೀಚೆಗೆ ಮಗ ನನ್ನು ತಾಯಿ ಮನೆಯಿಂದ ವಾಪಸ್ಸು ಕರೆದುಕೊಂಡು ಬಂದು ತನ್ನ ಬಳಿಯೇ ಇರಿಸಿಕೊಂಡಿದ್ದಳು ಎನ್ನಲಾಗಿದೆ. 
ಕಾಣೆಯಾದ ಬಗ್ಗೆ ದೂರು:-೨೦೧೬ ಡಿಸೆಂಬರ್ ೩೧ ರಂದು ತಿರುಮಲ್ಲ ನಗರಠಾಣೆಗೆ ದೂರು ಸಲ್ಲಿಸಿ ನನ್ನ ೪ವರ್ಷದ ಮಗ ಸಿದ್ದಾರ್ಥ ಡಿಸೆಂಬರ್ ೨೧ ರಿಂದ ಕಾಣೆಯಾಗಿದ್ದಾನೆ ಎಂದು ದೂರಿ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಮುರಳಿ ಜೊತೆ ದೂರು ನೀಡಿದ್ದರು ದೂರು ಸ್ವೀಕರಿಸಿ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸ್ ಇನ್ಸ್‌ಪೆಕ್ಟರ್ ಹನುಂತಪ್ಪ ಮಗು ಪತ್ತೆಗಾಗಿ ಕ್ರಮ ಕೈಗೊಂಡಿದ್ದರು. 
ಕಾಣೆಯಾದ ಮಗು ಮೊದಲು ವಾಸವಾಗಿದ್ದ ತಿರುಮಲಮ್ಮ ಪೋಷಕರನ್ನು ವಿಚಾರಣೆ ಮಾಡಿದಾಗ ಅವರು ಮಗಳೇ ಏನು ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಿದ ನಂತರ ಪೊಲೀಸರು ಪ್ರಕರಣಕ್ಕೆ ಸ್ವಲ್ಪ ಚುರುಕು ಮಟ್ಟಿಸಿದಾಗ ನಗರದ ಹೊರವಲಯದ ಮಾಳಪಲ್ಲಿ ಕೆರೆಯಲ್ಲಿ ಬಟ್ಟೆ ಹೊಗೆಯಲಿಕ್ಕೆ ಹೋದಾಗ ಮಗು ನೀರಿನಲ್ಲಿ ಅಕಸ್ಮಿಕವಾಗಿ ಇಳಿದು ಮುಳು ಗಿದ ಆತನನ್ನು ಮೇಲೆಕ್ಕೆ ಎತ್ತಲು ಹೋದಾಗ ಮಣ್ಣಿನ ಹೂಳು ಜಾಸ್ತಿಯಾಗಿದ್ದರಿಂದ ರಕ್ಷಣೆ ಮಾಡಲಿಕ್ಕೆ ಆಗಲಿಲ್ಲ ಎಂದು ಬಾಯಿ ಬಿಟ್ಟಿದ್ದಳು.


ಕೊಲೆ ರಹಸ್ಯ ಬಯಲು: ತಿರುಮಲಮ್ಮ ವಶಕ್ಕೆ ತೆಗೆದುಕೊಂಡ ನಗರಠಾಣೆ ಪೊಲೀಸರು ಆಕೆಯನ್ನು ಚಿಕ್ಕಬಳ್ಳಾಪುರದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿ ವಿಚಾರಣೆ ನಡೆಸಿದಾಗ ೨೦೧೬ ಡಿಸೆಂಬರ್ ೨೧ ರಂದು ರಾತ್ರಿ ಮನೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ ನಂತರ ಶವವನ್ನು ನಗರದ ಹೊರವಲಯದ ಮಾಳಪಲ್ಲಿ ಕೆರೆಯ ಅಂಗಳದಲ್ಲಿರುವ ಗುಂಡಿಯೊಂದ ರಲ್ಲಿ ಮಣ್ಣು ತೆಗೆದು ಅದರಲ್ಲಿ ಹೂತು ಹಾಕಿರುವುದಾಗಿ ಹೇಳಿದ್ದಾಳೆ.
ಸಿಗದ ಮಗುವಿನ ಶವ : ಚಿಂತಾಮಣಿ ಉವಿಭಾಗದ ಡಿವೈ‌ಎಸ್‌ಪಿ ಜಿ.ಕೃಷ್ಣಮೂರ್ತಿ, ನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಹನುಮಂತಪ್ಪ, ಕಾನೂನು ಸುವ್ಯವಸ್ಥೆಯ ಪಿ‌ಎಸ್‌ಐ ಸುಂದರ್, ಅಪರಾಧ ದಳದ ಪಿ‌ಎಸ್‌ಐ ನರಸಿಂಹಮೂರ್ತಿ ಸೇರಿದಂತೆ ಹಲವು ಸಿಬ್ಬಂದಿ ಅಗ್ನಿ ಶಾಮಕ ಠಾಣಾಧಿಕಾರಿ ಸೋಮಶೇಖರ್ ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರ ದೊಂದಿಗೆ ಭಾನುವಾರ ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆವಿಗೂ ಶವಕ್ಕಾಗಿ ಹುಡುಕಾಟ ನಡೆಸಿದಾಗ ಮಗು ಧರಿಸಿದ್ದ ನಿಕ್ಕರ್ ಬಿಟ್ಟರೆ ಶವ ಅಥವಾ ಶವದ ಅವಶೇಷ ಗಳು ಸಿಗದೆ ವಾಪಸ್ಸಾದ ಘಟನೆ ನಡೆಯಿತು.


ಮಾತು ಕೇಳದಿದ್ದಕ್ಕೆ ಕೊಲೆ: ಕೊಲೆ ಮಾಡಲು ಕಾರಣ ಕೇಳಿದ ಬಗ್ಗೆ ತಿರುಮಲ್ಲಮ್ಮ ನನ್ನು ಪ್ರಶ್ನಿಸಿದಾಗ ನಮ್ಮ ಪೋಷಕರು ನನ್ನ ಜೀವನ ಹಾಳು ಮಾಡಿದ್ದಾರೆ, ನನ್ನ ಮಗನನ್ನು ಅಲ್ಲಿ ಬಿಟ್ಟಿದ್ದಾಗ ಆವನು ನನ್ನ ಮಾತನ್ನು ಕೇಳದಂತೆ ಮಾಡಿದ್ದರಿಂದ ಕುಪಿತಗೊಂಡು ಕೊಲೆ ಮಾಡಿದ್ದಾಗಿ ಹೇಳಿದ್ದಾಳೆ 
ಮುರಳಿ ಮೇಲೆ ಅನುಮಾನ: ಮೊದಲ ಮಗು ಬೇರೆಯ ವರಿಗೆ ಹುಟ್ಟಿದ ಕಾರಣ ಆ ಮಗುವನ್ನು ಮುರಳಿ ಮತ್ತು ತಿರಮಲಮ್ಮ ಸೇರಿ ಕೊಲೆ ಮಾಡಿದ ನಂತರ ಶವವನ್ನು ಮರೆ ಮಾಚಿ ಕೊಲೆಯನ್ನು ಮರೆ ಮಾಚಲು ಮಗು ಕಾಣಿಯಾಗಿರುವ ಬಗ್ಗೆ ದೂರು ನೀಡಿರಬಹು ದೆಂದ ಶಂಖೆ ವ್ಯಕ್ತಪಡಿಸಿದ್ದಾರೆ. ಮುರಳಿ ವಿಚಾರಣೆ ನಡೆಸಲು ಮುಂದಾಗಿದ್ದು ಆತ ಇದೀಗ ಪರಾರಿಯಾಗಿದ್ದು ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ. 
ಕೊಲೆ ಪ್ರಕರಣ ದಾಖಲು:-ತನ್ನ ೪ವರ್ಷದ ಮಗು ಸಿದ್ದಾರ್ಥನನ್ನು ನಾನೇ ಕೊಲೆ ಮಾಡಿರುವುದಾಗಿ ಮತ್ತು ಶವವನ್ನು ಕೆರೆಯಲ್ಲಿ ನಾನೇ ಹೂತು ಹಾಕಿರುವುದಾಗಿ ಹೇಳಿದ್ದ ಹಿನ್ನೆಲೆಯಲ್ಲಿ ನಗರಠಾಣೆ ಪೊಲೀಸರು ಭಾನುವಾರ ಸಂಜೆ ಆಕೆಯ ವಿರುದ್ದು ಕೊಲೆ ಪ್ರಕರಣ ದಾಖಲು ಮಾಡಿಕೊಂಡು ಇಲ್ಲಿನ ನ್ಯಾಯಾಲಯದಲ್ಲಿ ಹಾಜರು ಪಡಿಸಿದಾಗ ನ್ಯಾಯಾಧೀಶರು ಅರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಅದೇಶಿದಿದಾರೆ. 

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...