ಚಿಂತಾಮಣಿ ಉಪ ಕಾರಾಗೃಹದಿಂದ  ಪರಾರಿಯಾಗಿದ್ದ ಖೈದಿಗಳ ಬಂಧನ

Source: S O News service | By Staff Correspondent | Published on 31st January 2017, 5:46 PM | State News | Incidents | Don't Miss |

ಚಿಂತಾಮಣಿ: ಕಳೆದ ೨೦೧೫ ಜೂನ್ ೨೩ ರಂದು ನಗರದ ಆಶ್ರಯ ಬಡಾವಣೆಯಲ್ಲಿರುವ ಚಿಂತಾ ಮಣಿ ಉಪ ಕಾರಾಗೃಹದಲ್ಲಿದ್ದ ೩೨ ಮಂದಿ ಖೈದಿಗಳ ಪೈಕಿ ೨ ಖೈದಿಗಳು ಕಾರಾ ಗೃಹದ ಪಹರೆ ಪೊಲೀಸ್‌ರೊಬ್ಬರ ನಿರ್ಲಕ್ಷ್ಯದಿಂದಾಗಿ ಜೈಲಿನಿಂದ ಪರಾರಿಯಾಗಿದ್ದವರನ್ನು ಒಂದು ವರ್ಷದ ನಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮಲಮಾಚನಹಳ್ಳಿ ಗ್ರಾಮದಲ್ಲಿ ನಡೆದ ಕೊಲೆ ಮತ್ತು ಅತ್ಯಾಚಾರ ನಡೆ ರುವ ಎಂ.ಸಿ.ಮಧು ಹಾಗೂ ಚಿಕ್ಕಬಳ್ಳಾಪುರ ಗ್ರಾಮಾ ಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುರದಗಡ್ಡೆಯಲ್ಲಿ ತನ್ನ ಚಿಕ್ಕಪ್ಪನ ಮಗನನ್ನು ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ವೇಣು ಅಲಿಯಾಸ್ ವೇಣುಗೋಪಾಲ್ ರವರು ಪರಾರಿಯಾಗಿದ್ದವರು. 
ಬಂಧನಕ್ಕೆ ತಂಡ: ಅರೋಪಿಗಳ ಪತ್ತೆಗಾಗಿ ಜಿಲ್ಲಾ ರಕ್ಷಣಾಧಿಕಾರಿ ಚೈತ್ರ ಮಾರ್ಗದರ್ಶನ ದಲ್ಲಿ ಚಿಂತಾಮಣಿ ಉಪವಿಭಾಗದ ಡಿವೈ‌ಎಸ್‌ಪಿ ಜಿ.ಕೃಷ್ಣಮೂರ್ತಿ ನೇತೃತ್ವದಲ್ಲಿ ನಗರ  ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹನುಮಂತಪ್ಪ, ಹೆಚ್.ಸಿ.ವಿಶ್ವನಾಥ್, ಪೇದೆಗಳಾದ ಮಂಜುನಾಥ್, ನರೇಶ್, ಕೆಂಚಾರ‍್ಲಹಳ್ಳಿ ಟಾಣೆಯ ಶಿವಪ್ಪ, ಚಾಲಕ ಅಂಬರೀಶ್, ಡಿ.ಎ.ಅರ್. ಸಿಬ್ಬಂದಿಯಾದ ಶಿವಕುಮಾರ್ ಬೈರಪ್ಪ ರವರುಗಳು ತಂಡವನ್ನು ರಚನೆ ಮಾಡಿದ್ದು ತಂಡ ಗುಪ್ತ ಮಾಹಿತಿಯ ಮೇರೆಗೆ ಅವರು ಅಡಗಿರುವ ಸ್ಥಳಗಳನ್ನು ಪತ್ತೆಮಾಡುವಲ್ಲಿ ಯಶಸ್ವಿ ಯಾಗಿದ್ದರು. 

ಖಚಿತ ಮಾಹಿತಿಯ ಮೇರೆಗೆ ಜ.೩೦ ರಂದು ಸೋಮವಾರ ಬೆಳಿಗ್ಗೆ ಚಿಕ್ಕಬಳ್ಳಾಪುರ ತಾಲೂಕು ಚದಲುಪುರ ಕ್ರಾಸ್ ಬಳಿಯಿರುವ ತೋಟದ ಮನೆಯೊಂದರಲ್ಲಿ ಅಡಗಿದ್ದ ಎಂ.ಸಿ. ಮಧುವನ್ನು ಬಂಧಿಸಿರುವ ಪೊಲೀಸರು ನಂತರ ದೊಡ್ಡಬಳ್ಳಾಪುರ ಲಕ್ಷ್ಮೀದೇವಪುರ ಕಾಡಿನ ಪ್ರದೇಶದ ತೋಟದಲ್ಲಿ ಅಡಗಿದ್ದ ವೇಣು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ಅರೋಪಿಗಳನ್ನು ನ್ಯಾಯಾಂಗ ಬಂಧ ನಕ್ಕೆ ಅದೇಶಿಸಿದ್ದಾರೆ. 

ಜೈಲಿನಿಂದ ಪರಾರಿ ಹಿನ್ನೆಲೆ:-ಚಿಂತಾಮಣಿ ಉಪ ಕಾರಾಗೃಹದ ಪಹರೆ ಕೆಲಸ ನಿರ್ವಹಿ ಸುತ್ತಿರುವ ಪೇದೆ ಆನಂದ್ ಕುಡುಕನಾಗಿದ್ದು ಕೊಲೆ ಅರೋಪಿಗಳಾದ ಮಧು ಮತ್ತು ವೇಣು ಜೊತೆ ತುಂಬಾ ಸಲಿಗೆಯಿಂದ ಇದ್ದ 

೨೦೧೫ ಜೂನ್ ೨೩ ರಂದು ಬೆಳಿಗ್ಗೆ ಉಪಹಾರ ನೀಡಿದ ನಂತರ ಅವರ ಜೊತೆಯಲ್ಲಿ ಮಾತಿನ ಹರಟೆ ಹೊಡೆದುಕೊಂಡಿದ್ದ ವೀಕ್ಷಕ ಅನಂದ್ ತಾನು ಹೋಟೆಲ್‌ನಲ್ಲಿ ಇಡ್ಲಿ ಮತ್ತು ವಡೆಯನ್ನು ತಿಂದುಕೊಂಡು ಬರುವುದಾಗಿ ಹೇಳಿ ಜೈಲಿನ ಪ್ರಮುಖ ದ್ವಾರದ ಬೀಗಗಳನ್ನು ಅವರ ಕೈಗೆ ಕೊಟ್ಟು ಜೈಲರ್ ಅಥವಾ ಸಿಬ್ಬಂದಿ ಬಂದರೆ ಬಾಗಿಲು ತೆಗೆಯುವಂತೆ ಹೇಳಿ ಹೊರಟು ಹೋಗಿದ್ದ.

ನಂತರ ಪಹರೆ ಕರ್ತವ್ಯಕ್ಕೆ ಬಂದ ರಮೇಶ್‌ಬಾಬು ಎಂಬವರು ಜೈಲಿನ ಪ್ರವೇಶ ದ್ವಾರದ ಬೀಗ ಹಾಕದೆ ಇರುವುದನ್ನು ಕಂಡು ಗಾಬರಿಗೊಂಡು ಜೈಲಿನೊಳಕ್ಕೆ ಬಂದ ರಮೇಶ್ ಜೈಲಿ ನಲ್ಲಿ ಕರ್ತವ್ಯದಲ್ಲಿದ್ದ ಪೇದೆ ಆನಂದ್ ಇಲ್ಲದೆ ಇರುವುದನ್ನು ಕಂಡು ಖೈದಿಗಳ ಹಾಜರಾತಿಯ ಪುಸ್ತಕವನ್ನು ಪರಿಶೀಲನೆ ನಡೆಸಿ ಖೈದಿಗಳ ಎಣೆಕೆ ಮಾಡಿದಾಗ ೩೨ ಮಂದಿ ಪೈಕಿ ೩೦ ಮಂದಿ ಇರುವುದು ಮಧು ಮತ್ತು ವೇಣು ಪರಾರಿಯಾಗಿರುವುದು ಕಂಡು ಬಂದಿತ್ತು 

ಜೈಲರ್‌ಗೆ ಮಾಹಿತಿ:ಕೂಡಲೇ ಪೇದೆ ರಮೇಶ್ ಕಾರಾಗೃಹ ಇಲಾಖೆಯ ಜೈಲರ್ ತಿಲೋತ್ತಮೆ ಕೆ.ಬಿ. ರವರಿಗೆ ಮಾಹಿತಿ ನೀಡಿದ್ದು ಅವರು ಬಂದು ಪಹರೆ ಪೇದೆ ಆನಂದ್ ವಿಚಾರಣೆ ನಡೆಸಿದಾಗ ತಾನು ತಿಂಡಿಗೆ ಹೋಗುವಾಗ ಖೈದಿಗಳಾದ ಮಧು ಮತ್ತು ವೇಣು ರವರ ಕೈಗೆ ಜೈಲಿನ ಪ್ರಮುಖ ದ್ವಾರದ ಬಾಗಿಲಿನ ಬೀಗದ ಕೈಗಳನ್ನು ಕೊಟ್ಟು ತಾವು ಬಂದರೆ ತೆಗೆಯುವಂತೆ ಹೇಳಿ ಹೋಗಿದ್ದೇ ಎಂದಾಗಲೇ ಅವರಿಬ್ಬರು ಪರಾರಿಯಾಗಿರುವುದು ಬಹಿರಂಗಗೊಂಡಿದೆ. 

ಆನಂದ್ ವಿರುದ್ದ ಪ್ರಕರಣ ದಾಖಲು-ಕುಡಿತದ ಚಟವಿರುವ ಪೋಲಿಸ್ ಪೇದೆ ಆನಂದ್ ಖೈದಿ ಗಳೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದು ಈ ಬಗ್ಗೆ ಅನೇಕ ಬಾರಿ ತಿಳಿಸಿ ರುವುದಾಗಿ ಹಲವು ಬಾರಿ ನೋಟೀಸ್ ಜಾರಿ ಮಾಡಿದ್ದಾಗ ತಪ್ಪು ತಿದ್ದಿಕೊಳ್ಳುವುದಾಗಿ ಹೇಳಿದ್ದರೂ ತಿದ್ದಿ ಕೊಳ್ಳದೆ ತೀವ್ರ ನಿರ್ಲಕ್ಷ್ಯ ತಾಳಿರುವ ಹಿನ್ನೆಲೆಯಲ್ಲಿ ಇಬ್ಬರು ಖೈದಿಗಳು ಪರಾರಿಯಾಗಲು ಪಹರೇ ಪೇದೆ ಆನಂದ್ ಕಾರಣವಾಗಿದ್ದಾರೆಂದು ದೂರಿ ನಗರಠಾಣೆಗೆ ದೂರು ನೀಡಿದ್ದು ಆತನ ವಿರುದ್ದ ಪ್ರಕರಣ ಸಹ ದಾಖಲಾಗಿತ್ತು. 

ಕಾರಾಗೃಹದ ಮಹಾನಿರ್ದೇಶಕರು ಬೇಟಿ:-ಚಿಂತಾಮಣಿ ಜೈಲಿನಿಂದ ಮಧು ಮತ್ತು ವೇಣು ಎಂಬ ಇಬ್ಬರು ಖೈದಿಗಳು ಪರಾರಿಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಅಂದು ಸಂಜೆ ರಾಜ್ಯ ಹೆಚ್ಚುವರಿ ಕಾರಾಗೃಹದ ಮಹಾನಿರ್ದೇಶಕರಾಗಿದ್ದ ವಿ.ರಾಜು ಇಲ್ಲಿನ ಉಪ ಕಾರಾಗೃಹಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಜೈಲರ್ ತಿಲೋತ್ತಮೆಯಿಂದ ವಿವರ ಪಡೆದುಕೊಂಡ ಅವರು ನಗರಠಾಣೆಗೆ ಸಲ್ಲಿಸಿದ್ದ ದೂರನ್ನು ಪರಿಶೀಲನೆ ನಡೆಸಿದ ನಂತರ ಪೇದೆ ಅನಂದ್ ಬಗ್ಗೆ ಜೈಲರ್‌ನಿಂದ ಬಂದ ಮಾಹಿತಿಯ ಮೇರೆಗೆ ಅಮಾನತ್ತುಗೂ ಸಹ ಅದೇಶಿಸಿದ್ದರು. 

ಅರೋಪಿಗಳ ಹಿನ್ನೆಲೆ:- ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮಲಮಾಚನಹಳ್ಳಿ ಗ್ರಾಮದ ಅರೋಪಿ ಮಧು ಗ್ರಾಮದ ದೇವರಾಜ್ ಎಂಬುವರ 
ಅಪ್ರಾಪ್ತ ಮಗಳನ್ನು ಪ್ರೀತಿಸುತ್ತಿದ್ದ ಅದನ್ನು ತಡೆದಿದ್ದಕ್ಕಾಗಿ ಪ್ರತೀಕಾರವಾಗಿ ತನ್ನ ಸ್ನೇಹಿತ ನೊಂದಿಗೆ ಸೇರಿ ಕಳೆದ ಜನವರಿ ತಿಂಗಳಲ್ಲಿ ದೇವರಾಜ್‌ಗೆ ಮದ್ಯದಲ್ಲಿ ವಿಷ ಸೇರಿಸಿ ಕೊಲೆ ಮಾಡಿದಲ್ಲದೆ ಕೊಲೆಯಾದ ದೇವರಾಜ್ ರವರ ಪುತ್ರಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾ ಚಾರವನ್ನು ನಡೆಸಿದ್ದ ಪೊಲೀಸರು ಅರೋಪಿ ಮಧುನನ್ನು ಬಂಧಿಸಿ ಕೊಲೆ ಮತ್ತು ಪೋಸ್ಕೊ ಪ್ರಕರಣಗಳನ್ನು ದಾಖಲು ಮಾಡಿ ಅರೋಪಿಯನ್ನು ಜೈಲಿಗೆ ಕಳುಹಿಸಿದ್ದರು. 

ಪರಾರಿಯಾಗಿರುವ ಮತ್ತೊಬ್ಚ ಅರೋಪಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುರದಗಡ್ಡೆಯ ನಿವಾಸಿಯಾದ ವೇಣು ಅಲಿಯಾಸ್ ವೇಣುಗೋಪಾಲ್ ದಾಯಾದಿ ಕಲಹ ಹಿನ್ನೆಲೆಯಲ್ಲಿ ತನ್ನ ಚಿಕ್ಕಪ್ಪನ ಮಗ ಕೃಷ್ಣಪ್ಪನನ್ನು ತಮ್ಮ ಗ್ರಾಮಕ್ಕೆ ಸಮೀಪದ ಗಟ್ಟಿಹೊಸಹಳ್ಳಿ ಸಮೀಪ ಕೊಲೆ ಮಾಡಿದ್ದ ಆತನನ್ನು ಚಿಕ್ಕಬಳ್ಳಾಪುರ ಗ್ರಾಮಾ ಂತರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. 

ಈ ಬಗ್ಗೆ ವಾದ ವಿವಾದಗಳು ನ್ಯಾಯಾಲಯದಲ್ಲಿ ನಡೆದ ನಂತರ ಅರೋಪಿ ವೇಣುಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆಗೆ ಒಳಕ್ಕೆ ಪಡಿಸಲಾಗಿತ್ತು. 
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...