ಚಿಂತಾಮಣಿ: ೮೦ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಜೆಡಿ‌ಎಸ್‌ಗೆ ಸೇರ್ಪಡೆ

Source: S O News service | By Staff Correspondent | Published on 24th August 2016, 11:00 PM | State News | Don't Miss |



ಚಿಂತಾಮಣಿ :ತಾಲೂಕಿನಲ್ಲಿ  ಸಾಕಷ್ಟು ಮೂಲಭೂತ ಸಮಸ್ಯೆಗಳು ತಾಂಡವವಾಡುತ್ತಿದ್ದು ಪಕ್ಷದ ಮುಖಂಡರು ಹಾಗೂ ಜೆ.ಡಿ.ಎಸ್ ಕಾರ್ಯಕರ್ತರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಸಮಸ್ಯೆಗಳಿಗೆ ಸೂಕ್ತಪರಿಹಾರವನ್ನು ಕೊಡಿಸುವಲ್ಲಿ ಪಕ್ಷಬೇದವಿಲ್ಲದೇ ಪ್ರಮಾಣಿಕವಾಗಿ ದುಡಿದು ಸರ್ಕಾರದ ಸೌಲಭ್ಯಗಳನ್ನು ಜನತೆಗೆ ಒದಗಿಸುವಲ್ಲಿ ಮುಖ್ಯ ಪಾತ್ರವಹಿಸಬೇಕು ಎಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ  ಕಾರ್ಯಕರ್ತರಿಗೆ ಕರೆ ನೀಡಿದರು.
ಚಿಂತಾಮಣಿ ನಗರದ ಶಾಸಕರ ಗೃಹ ಜೆಡಿ‌ಎಸ್ ಕಛೇರಿಯಲ್ಲಿ  ಹಮ್ಮಿಕೊಂಡಿದ್ದ ಬಿಜೆಪಿ ಪಕ್ಷದಿಂದ ಸುಮಾರು ನೂರಕ್ಕೂ ಹೆಚ್ಚು ಕಾರ್ಯಕರ್ತರು  ಮಂಜುನಾಥಚಾರಿರವರ ನೇತೃತ್ವದಲ್ಲಿ ಶಾಸಕ ಜೆ.ಕೆ ಕೃಷ್ಣಾರೆಡ್ಡಿರವರ  ಹೂಮಾಲೆ ಹಾಕಿ  ಜೆಡಿ‌ಎಸ್ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡು ಪಕ್ಷದ ಸಂಘಟನೆ ದುಡಿಯುವಂತೆ ಶುಭ ಹಾರೈಸಿ  ಈ ವೇಳೆ ಮಾತನಾಡಿದ ಶಾಸಕರು ಈ ಹಿಂದೆ ನಡೆದ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ  ಜೆ.ಡಿ.ಎಸ್ ಪಕ್ಷವು ಹೀನಾಯ ಸೊಲನ್ನು ಅನುಭವಿಸಿದೆ ಇದೇ ರೀತಿ ಮುಂದುವರೆದರೆ ಪಕ್ಷಕ್ಕೆ ಸಾಕಷ್ಟು ಅಡೆತೆಗಳು ಎದುರಾಗಿ ತಾಲೂಕಿನಲ್ಲಿ ಪಕ್ಷವು ನಶಿಸಿ ಹೋಗುವ ಸಂಬವಗಳು ಹೆಚ್ಚುತ್ತವೆ ಆದರಿಂದ ಪಕ್ಷದ ಕಾರ್ಯಕರತರು ಇಂದಿನಿಂದಲೇ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಾಕ್ಷಷ್ಟು ಶ್ರಮಿಸಿ ಜನರ ಸೇವೆ ಮಾಡಿ ಮನಸೇಳೆಯುವ ಕಾರ್ಯ ಮಾಡ ಬೇಕಾಗಿದೆ ಎಂದ ಅವರು  ಕ್ಷೇತ್ರದ ಜನತೆಯು ನಮ್ಮ ಪಕ್ಷದ ಮೇಲೆ ಅಪಾರ ನಂಬಿಕೆಯಿಟ್ಟಿದ್ದು ಪಕ್ಷಕ್ಕೆ ದುಡಿಯುವ ಜನತೆ ತಾಲೂಕಿನಲ್ಲಿ ಸಾಕಷ್ಟು ಜನ ಇದ್ದಾರೆ ಅಷ್ಟೇ ಅಲ್ಲದೆ ತಾಲೂಕಿನಲ್ಲಿ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪಕ್ಷ ಜೆಡಿ‌ಎಸ್ ಪಕ್ಷ ಎಂದು ನಂಬಿರುವ ಜನತೆಯ ನಂಬಿಕೆಯನ್ನು ಉಸಿಮಾಡದೆ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿ ಎಂದು ನೂತನ ಕಾರ್ಯಕರ್ತರಿಗೆ ಸೂಚನೆ ನೀಡಿದರು.
  ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಅನ್ವರ್ ಪಾಷಾ, ಜೆಡಿ‌ಎಸ್ ತಾ.ಅಧ್ಯಕ್ಷ ರಾಜ್ ಗೋಪಾಲ್,  ಉಪಾಧ್ಯಕ್ಷ ದಿನ್ನಮಿಂದನಹಳ್ಳಿ ಬೈರರೆಡ್ಡಿ, ಕುರುಬೂರು ರವೀಂದ್ರಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಯಿಷಾ ಸುಲ್ತಾನ, ಅಬ್ಬುಗುಂಡ ಶ್ರೀನಿವಾಸರೆಡ್ಡಿ, ಅಬ್ಬುಗುಂಡ ಬಾಬು, ಗುಡೆ ಶ್ರೀನಿವಾಸ್ ರೆಡ್ಡಿ, ಮುರುಗಮಲ್ಲ ಲಕ್ಷ್ಮೀನಾರಾಯಣರೆಡ್ಡಿ, ಕೃಷ್ಣಮೂರ್ತಿ, ನಗರಸಭೆ ಸದಸ್ಯರಾದ ಪ್ರಕಾಶ್, ಜೆಸಿಬಿ ನಟರಾಜ್, ಮಂಜುನಾಥ್, ಸಾಧಪ್ಪ,ಎಂ ಎನ್ ವೆಂಕಟರೆಡ್ಡಿ, ವೆಂಕಟರವಣಪ್ಪ, ಮಾಜಿ ಸದಸ್ಯ ವೆಂಕಟೇಶ್ ಜೆಕೆಗ್ರೂಪ್ ಮುಖಂಡ ವಿ.ಅಮರ್, ಜನಾರ್ದನ್,ಎಸ್‌ಎಲ್‌ಎನ್ ಮೆಡಿಕಲ್ ರಾಜಣ್ಣ,  ಕುರುಟಹಳ್ಳಿ ಮಂಜುನಾಥ್, ಬದ್ರಿನಾಥ್, ವೇಣು, ಕೇಶವ ಸೇರಿದಂತೆ ಕಾರ್ಯಕರ್ತರಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...