ಚಿಕ್ಕಮಗಳೂರು:  ವೀರಶೈವ-ಲಿಂಗಾಯತ ಎರಡೂ ಒಂದೇ, ಸರ್ಕಾರದ ಆಸಕ್ತಿ ರೈತರ ಸಮಸ್ಯೆಗಳತ್ತ ಹರಿಯಲಿ-ಜಂಗಮಬಳಗ ಚಿಕ್ಕಮಗಳೂರು:  ವೀರಶೈವ-ಲಿಂಗಾಯತ ಎರಡೂ ಒಂದೇ, ಸರ್ಕಾರದ ಆಸಕ್ತಿ ರೈತರ ಸಮಸ್ಯೆಗಳತ್ತ ಹರಿಯಲಿ-ಜಂಗಮಬಳಗ 

Source: so english | By Arshad Koppa | Published on 15th August 2017, 8:22 AM | State News | Guest Editorial |

ಚಿಕ್ಕಮಗಳೂರು ಜುಲೈ-14  ಪ್ರಾಚೀನ ವೇದ ಆಗಮೋಕ್ತ ಪರಿಧಿಯ ವೀರಶೈವ-ಲಿಂಗಾಯತ ಎರಡೂ ಒಂದೇ. ಇವನ್ನು ಪ್ರತ್ಯೇಕಿಸುವಲ್ಲಿ ಆಸಕ್ತಿತೋರುತ್ತಿರುವ ರಾಜ್ಯ ಸರ್ಕಾರ  ರೈತಸಮಸ್ಯೆಗಳು,  ಬರ-ಅತಿವೃಷ್ಟಿ, ನೀರಾವರಿ ಸಂಗತಿಗಳತ್ತ ಗಮನ ಕೇಂದ್ರೀಕರಿಸಿದರೆ ಜನಕಲ್ಯಾಣವಾಗುತ್ತದೆ ಎಂದು ಚಿಕ್ಕಮಗಳೂರು ಜಂಗಮಬಳಗ ಹೇಳಿದೆ.


ನಗರದ ‘ಸುವರ್ಣಮಾಧ್ಯಮ’ ಭವನದ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಜಂಗಮಬಳಗದ ಸಂಚಾಲಕ ಚಿ.ಸ.ಪ್ರಭುಲಿಂಗಶಾಸ್ತ್ರಿ ನೇತೃತ್ವದಲ್ಲಿ ಶನಿವಾರ ಸಂಜೆ ನಡೆದ ಸಭೆ, ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ವಿಸ್ತøತವಾಗಿ ಚರ್ಚಿಸಿ ಲಿಂಗಾಯತ ವೀರಶೈವದ ಭಾಗವೆಂದು ಸಾರಿದೆ.  
ವೀರಶೈವ-ಲಿಂಗಾಯತ ಸಮಾನಾರ್ಥ ಶಬ್ದಗಳಾಗಿದ್ದು, ಆಚಾರ್ಯರು ಮತ್ತು ಶರಣರು ಸಮಾಜದ ಎರಡುಕಣ್ಣುಗಳು.  ಶಿವಸಂಸ್ಕøತಿ ಅನಾದಿಕಾಲದಿಂದಲೂ ಎಲ್ಲರೂ ಆಚರಿಸಿಕೊಂಡು ಬರುತ್ತಿದ್ದು,  ಮಾನವಜೀವಿತದ ಷೋಡಶ ಸಂಸ್ಕಾರಗಳನ್ನು ಅನುಸರಿಸಿಕೊಂಡು ಬರುತ್ತಿರುವಾಗ ಪ್ರತ್ಯೇಕತೆಯ ಕೂಗು ಅರ್ಥಹೀನ ಎಂದು ಜಂಗಮಬಳಗ ಅಭಿಪ್ರಾಯಿಸಿದ್ದು, ಆರ್ಥಿಕ-ಸಾಮಾಜಿಕ ಸೌಲಭ್ಯ ಪಡೆಯಲು ಸಂಘಟಿತ ಪ್ರಯತ್ನ ಒಳಿತೆಂದು ನಿರ್ಣಯದಲ್ಲಿ ಹೇಳಿದೆ.
ದೇವರು-ಧರ್ಮ ನಂಬದ, ಲಿಂಗಧರಿಸದ, ಪೂಜೆ-ಧಾರ್ಮಿಕಾಚರಣೆ ನಿರ್ಲಕ್ಷಿಸುವವರು ಧರ್ಮದಲ್ಲಿ ಹಸ್ತಕ್ಷೇಪ ಮಾಡುವುದು ಪ್ರಶ್ನಾರ್ಥ ಎಂದಿರುವ ಜಂಗಮಬಳಗ, ಸರ್ಕಾರ-ರಾಜಕಾರಣ ಗಳು-ಮಠಾಧೀಶರು ತಮ್ಮ ತಮ್ಮ ಕರ್ತವ್ಯಗಳಿಂದ ವಿಮುಖರಾಗಬಾರದೆಂದು ಆಗ್ರಹಪಡಿಸಿದೆ.  
ಸನಾತನ ಹಿಂದೂಧರ್ಮದ ಭಾಗವಾಗಿರುವ ವೀರಶೈವ ಲಿಂಗಾಯತ ಸಂಸ್ಕøತಿ ಸದಾ ಐಕ್ಯತೆಯಿಂದ ಮನುಕುಲದ ಶ್ರೇಯಸ್ಸಿಗೆ ಕಾರಣ ೀಭೂತವಾಗಬೇಕು.  ಶ್ರೀಮದ್ರಂಭಾಪುರಿ ಜಗದ್ಗುರುಗಳನ್ನೊಳಗೊಂಡ ಪಂಚಾಚಾರ್ಯರು, ಅಭಿನವಬಸವಣ್ಣ ಸಿದ್ಧಗಂಗಾಶ್ರೀಗಳು, ಪ್ರಗತಿಯಮೇರು ಸುತ್ತೂರು-ಸಿರಿಗೆರೆ-ಹುಬ್ಬಳ್ಳಿ-ಯಡೆಯೂರು-ಆನಂದಪುರಂ-ಶಿವಯೋಗಿಮಂದಿರದ ಶ್ರೀಗಳ ನೇತೃತ್ವದಲ್ಲಿ ಅಖಿಲಭಾರತ ವೀರಶೈವ ಮಹಾಸಭಾ ಸೂಕ್ತ ಮಾರ್ಗದರ್ಶನ ನೀಡಿ ರಾಜಕೀಯ ಹುನ್ನಾರಗಳನ್ನೆಲ್ಲ ವಿಫಲಗೊಳಿಸಬೇಕೆಂದು ಕರೆ ನೀಡುವ ನಿರ್ಣಯವನ್ನು ಅಂಗೀಕರಿಸಿರುವ ಜಂಗಮಬಳಗ, ಲೋಕದ ಅಭ್ಯುದಯಕ್ಕಾಗಿ ವೀರಶೈವ ಸಮುದಾಯ ಸಣ್ಣಪುಟ್ಟ ಭಿನ್ನತೆ ಬದಿಗೊತ್ತಿ ಒಟ್ಟಾಗಿ ಹೆಜ್ಜೆ ಹಾಕಬೇಕಾಗಿರುವುದು ಕಾಲದಕರೆ ಎಂದು ಅಭಿಪ್ರಾಯಿಸಿದೆ. 
ಕೂಡಲಸಂಗಮ ಎಂಬ ಅಂಕಿತವನ್ನೆ ತಿರುಚಿದವರನ್ನು ಮುಂದೆ ಮಾಡಿಕೊಂಡು ವೀರಶೈವ-ಲಿಂಗಾಯತ ನಡುವೆ ಕಂದಕ ಸೃಷ್ಟಿಸುವಲ್ಲಿ ರಾಜಕೀಯ ಹುನ್ನಾರ ಗೋಚರಿಸುತ್ತಿದೆ.  ಐವರು ಸಂಪುಟ ಸದಸ್ಯರನ್ನು ರಾಜಪ್ರವಾಸಕ್ಕೆ ಮುಖ್ಯಮಂತ್ರಿಗಳೆ ನಿಯೋಜಿಸಿದ್ದರೆಂಬ ಸಂಗತಿ ಮಾಧ್ಯಮಗಳು ಭಿತ್ತರಿಸಿದ್ದು, ಮುಂದಿನ ಪರಿಣಾಮಗಳನ್ನು ಊಹಿಸಿದ ಸಚಿವರೆ ಹಿಂದೆ ಸರಿದರು.  ವಿಧಾನಸೌಧದ ನೆರಳಿನಲ್ಲಿ  ತಮ್ಮ ಬೆಂಬಲಿಗ ಸಚಿವ, ಶಾಸಕರ ಮುಂದಾಳತ್ವದಲ್ಲಿ ಸಭೆ ಸಂಘಟಿಸಿ ಸದಾ ಪ್ರಚಾರದಲ್ಲಿರುವ ಕೆಲವು ಮಠಾಧೀಶರಿಂದ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯ ಕೂಗು ಹಾಕಿಸಲಾಗಿದೆ ಎಂದು ಜಂಗಮ ಬಳಗ ದೂರಿದೆ.
ಭಕ್ತಿಭಂಡಾರಿ ಬಸವೇಶ್ವರರನ್ನು ಸಣ್ಣಗುಂಪೊಂದನ್ನು ಪೇಟೆಂಟ್ ಪಡೆಯಲು ಸಾಧ್ಯವಿಲ್ಲ.  ಹಿಂದೂಸ್ತಾನದಲ್ಲಿ ತಾಲಿಬಾನ್ ವಿಕೃತಿ ಸಹಿಸಲಾಗದೆಂದಿರುವ ಜಂಗಮಬಳಗ, ಶ್ರೀಮದ್ರಂಭಾಪುರಿ ಡಾ||ವೀರಸೋಮೇಶ್ವರ ಜಗದ್ಗುರುಗಳ ಸಮನ್ವಯ ನಡೆ ಅನುಸರಿಸುವಲ್ಲಿ ಧರ್ಮಕ್ಕೆ ಶ್ರೇಯಸ್ಸಿದೆ ಎಂದು ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ.
ವೀರಶೈವ ಚಾರಿತ್ರಿಕ ಹಿನ್ನಲೆಯನ್ನು ಡಿಐಸಿ ನಿವೃತ್ತಜಂಟಿನಿರ್ದೇಶಕ ಬಿ.ಪಿ.ಶಿವಮೂರ್ತಿ ವಿವರಿಸಿದರು.  ಬಳಗದ ಸಂಚಾಲಕ ಪ್ರಭುಲಿಂಗಶಾಸ್ತ್ರಿ ನಿರ್ಣಯಗಳನ್ನು ಮಂಡಿಸಿದರು.  ರಂಗಕರ್ಮಿ ಆರ್.ಚಂದ್ರಶೇಖರ್ ನಿರೂಪಿಸಿದರು.  ರೇಖಾಪ್ರಸನ್ನ ತಂಡ ರೇಣುಕಗೀತೆ ಹಾಡಿದರು. 
ಪ್ರೊ.ರೇವಣಸಿದ್ದಯ್ಯ, ನಿವೃತ್ತ ಉಪಪ್ರಾಂಶುಪಾಲರಾದ ಜಯದೇವರಾಧ್ಯ ಮತ್ತು ಮಹಾಲಿಂಗಯ್ಯ, ನಿವೃತ್ತಡೆಪ್ಯುಟಿತಹಶೀಲ್ದಾರ್ ಚಂದ್ರಶೇಖರ್, ವೀರಶೈವ ಸಹಕಾರಬ್ಯಾಂಕಿನ ನಿರ್ದೇಶಕರಾದ ರವಿಕುಮಾರ್ ಮತ್ತು ಸುಶೀಲಮ್ಮ, ಅರ್ಚಕರ ಸಂಘದ ವೇ.ಮೂ.ಉಪ್ಪಳ್ಳಿ ಬಸರಾಜಯ್ಯಶಾಸ್ತ್ರಿ ಮತ್ತು ವೇ.ಮೂ.ಪುಪ್ಪಯ್ಯನವರು,  ವೀರಭದ್ರಸ್ವಾಮಿ ದೇವಸ್ಥಾನಸಮಿತಿ ಉಪಾಧ್ಯಕ್ಷ ಟಿ.ಪಿ.ಪ್ರಸನ್ನಕುಮಾರ್, ಪಾರ್ವತಿಮಹಿಳಾಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತ್ರಿ, ಪಂಚಾಚಾರ್ಯ ಸೇವಾಸಮಿತಿ ಉಪಾಧ್ಯಕ್ಷ ವೀರಭದ್ರಯ್ಯ, ರಾಮಕೃಷ್ಣ ಕಾಲೇಜಿನ ಆಡಳಿತಾಧಿಕಾರಿ ಉಮಾಮಹೇಶ್ವರಯ್ಯ, ಸಾಫÀ್ಟವೇರ್ ಇಂಜಿನಿಯರ್ ರವೀಶ್‍ಜಿ.ಹಿರೇಮಠ, ನಿವೃತ್ತಶಿಕ್ಷಕರಾದ ಎ.ಎಂ.ರುದ್ರಾರಾಧ್ಯ, ಓಂಕಾರಯ್ಯ ಮತ್ತು ಸ್ವರ್ಣಗೌರಿ, ಕುನ್ನಾಳು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚಂದ್ರಶೇಖರ ಆರಾಧ್ಯ, ಮುಖಂಡರಾದ ಗುರುಕಾಂತಆರಾಧ್ಯ, ಪರಮೇಶ್ವರಪ್ಪ, ಕರಿಬಸಯ್ಯ, ತೀರ್ಥಸ್ವಾಮಿ, ಕುಮಾರಸ್ವಾಮಿ, ಆರ್.ಡಿ.ಆರಾಧ್ಯ, ವನಜಾಕ್ಷಮ್ಮ, ಚನ್ನಗೊಡನಹಳ್ಳಿಉಮೇಶ್, ಮರುಳಸಿದ್ದಯ್ಯ ಮತ್ತಿತರರು ಮಾತನಾಡಿ ವೀರಶೈವಲಿಂಗಾಯತ ಭಿನ್ನವಲ್ಲ ಏಕತೆ ಕಾಪಾಡಲು ಬೃಹತ್ ರ್ಯಾಲಿ ಆಯೋಜಿಸಬೇಕೆಂದು ಸಲಹೆ ಮಾಡಿದರು.

Read These Next

ಕೊನೆಗೂ ಮೈತ್ರಿ ಸರ್ಕಾರ ಪತನ

ಬೆಂಗಳೂರು: ಕಳೆದ ೧೪ ತಿಂಗಳ ಹಿಂದೆ ರಚನೆಗೊಂಡ ಜೆ.ಡಿ.ಎಸ್. ಮತ್ತು ಕಾಂಗ್ರೇಸ್ ಮೈತ್ರಿ ಸರ್ಕಾರ ಕೊನೆಗೂ ಮಂಗಳವಾರ ಅಲ್ಪಮತಕ್ಕೆ ...

ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ನೇಮಕ

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ...

ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ...

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...