ಚಿಕ್ಕಮಗಳೂರು: ಲೋಕಕಲ್ಯಾಣಕ್ಕಾಗಿ ಶ್ರೀಕೃಷ್ಣನ ಅವತಾರವಾಗಿದ್ದು ನೀತಿ, ಧರ್ಮಪಾಲನೆಗೆ ಕೃಷ್ಣನೇ ಮಾದರಿ -ನರೇಂದ್ರ ಪೈ

Source: so english | By Arshad Koppa | Published on 15th August 2017, 8:22 AM | State News | Guest Editorial |

ಚಿಕ್ಕಮಗಳೂರು ಜುಲೈ-14  ಲೋಕಕಲ್ಯಾಣಕ್ಕಾಗಿ ಶ್ರೀಕೃಷ್ಣನ ಅವತಾರವಾಗಿದ್ದು ನ್ಯಾಯ, ನೀತಿ, ಧರ್ಮಪಾಲನೆಗೆ ಕೃಷ್ಣ ಮಾದರಿ ಎಂದು ಶಿಕ್ಷಣತಜ್ಞ ಬಿ.ಎಚ್.ನರೇಂದ್ರ ಪೈ ಅಭಿಪ್ರಾಯಿಸಿದರು.  
ನಗರದ ಶ್ರೀಭುವನೇಂದ್ರ ವಿದ್ಯಾಸಂಸ್ಥೆಯಲ್ಲಿ ಕೃಷ್ಣಜನ್ಮಾಷ್ಠಮಿಯ ಅಂಗವಾಗಿ ಇಂದು ಆಯೋಜಿಸಿದ್ದ “ರಾಧಾಕೃಷ್ಣವೇಷ” ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಕೃಷ್ಣನ ತುಂಟತನ, ಮುಗ್ಧತೆ ಎಲ್ಲರಿಗೂ ಆಪ್ಯಾಯಮಾನ.  ಮಕ್ಕಳು ಕೃಷ್ಣನವೇಷದಲ್ಲಿ ಹೇಗಿದ್ದರೂ ಚನ್ನ.  ನಮ್ಮ ಪುರಾತನ ಸಂಸ್ಕøತಿ ಆಚರಣೆಯ ಪರಿಪಾಲನೆಯಲ್ಲಿ ಕೃಷ್ಣನ ಮಾರ್ಗದರ್ಶನ ಅಮೂಲ್ಯವಾದದ್ದು ಎಂದರು. 


ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಪ್ರಭುಲಿಂಗಶಾಸ್ತ್ರಿ  ಧರ್ಮ ಸಂಸ್ಥಾಪನೆಗಾಗಿಯೆ ಕೃಷ್ಣನ ಅವತಾರವೆಂಬುದು ನಂಬಿಕೆ.  ರಾಮ ಮತ್ತು ಕೃಷ್ಣ ಭಾರತೀಯ ಸಂಸ್ಕøತಿಯ ಮೌಲ್ಯಗಳ ಪ್ರತಿಪಾದಕರು.  ಜಾತಿ, ಧರ್ಮ, ಪ್ರಾಂತ್ಯ, ಪಕ್ಷ, ಪ್ರದೇಶಗಳನ್ನು ಮೀರಿ ಜಗದ್ವಿಖ್ಯಾತರಾಗಿರುವ ಕೃಷ್ಣನ ವೇಷಭೂಷಣದಲ್ಲಿ  ಮಕ್ಕಳನ್ನು ನೋಡಿ ಆನಂದಿಸುವ ಸಂಪ್ರದಾಯ ಹಿಂದಿನಿಂದಲು ನಡೆದುಕೊಂಡು ಬಂದಿದೆ.  ಮೂರು ದಶಕಗಳಿಂದ ಭುವನೇಂದ್ರ ವಿದ್ಯಾಸಂಸ್ಥೆ ಕೃಷ್ಣವೇಷ ಸ್ಪರ್ಧೆಗಳನ್ನು ನಗರದಲ್ಲಿ ನಡೆಸಿಕೊಂಡು ಬಂದಿದೆ ಎಂದರು.
ಪ್ರಾಂಶುಪಾಲ ಬಿ.ವೀರಪ್ಪಯ್ಯ ಅಧ್ಯಕ್ಷತೆವಹಿಸಿ ಮಾತನಾಡಿ ನ್ಯಾಯಪಕ್ಷಪಾತಿಯಾದ ಕೃಷ್ಣ ನೀತಿ ನಿಯಮ ಮೌಲ್ಯಗಳ ಪ್ರತೀಕ.  ಕೌರವರು 18ಅಕ್ಷೋಣ  ಸೈನ್ಯ ಹೊಂದಿದ್ದರೂ ಪಾಂಡವರು ಮಹಾಭಾರತ ಯುದ್ಧವನ್ನು ಕೃಷ್ಣನ ಸಹಾಯದಿಂದ ಗೆದ್ದಿದ್ದು ಇತಿಹಾಸ.  ಮಕ್ಕಳಿಗೆ ಒಳ್ಳೆಯ ಆದರ್ಶ ಕಲಿಸಬೇಕೆಂದರು.
ಮುಖ್ಯಶಿಕ್ಷಕಿ ಜಮೀಲಾಖಾನಂ, ಎನ್.ಪೂಣ ್ಮಾ, ತೀರ್ಪುಗಾರದ ಲಕ್ಷ್ಮೀಶಿವರಾಮ್, ಸುಮಿತ್ರಾಶಾಸ್ತ್ರಿ ಮತ್ತು ಕೌಸರಿಬೇಗಂ ಪಾಲ್ಗೊಂಡಿದ್ದರು.  ಪಂಕಜಾ ಪ್ರಾರ್ಥಿಸಿ, ವಾಣ  ಸ್ವಾಗತಿಸಿ, ಚಂದ್ರಕಲಾ ವಂದಿಸಿದರು.  ಶಬನಾಅಕ್ತರ್ ಮತ್ತು ಸ್ಫೂರ್ತಿ ನಿರೂಪಿಸಿದರು. ಪ್ಲೇಗ್ರೂಪ್, ಎಲ್‍ಕೆಜಿ, ಯುಕೆಜಿ, 1ನೇ ತರಗತಿ, 2ನೇತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಸ್ಪರ್ಧೆ ನಡೆಸಿದ್ದು, 60ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

Read These Next

ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ನೇಮಕ

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ...

ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ...

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ...

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...