ಚಿಕ್ಕಮಗಳೂರು:  “ಚಂದ್ರಸ್ಮೈತಿ” ಪ್ರೊ.ಚಂದ್ರಯ್ಯನಾಯ್ಡು ‘ಬದುಕು-ಬರಹ ಕುರಿತ ವಿಚಾರಸಂಕಿರಣ’ ಉದ್ಘಾಟನೆ

Source: so english | By Arshad Koppa | Published on 3rd August 2017, 8:25 AM | State News | Guest Editorial |

ಚಿಕ್ಕಮಗಳೂರು ಆ.2: “ಅಂಕಿತ” ವಚನಕಾರರ ಮನೋಧರ್ಮ ಹೇಳುತ್ತದೆ. ‘ಕೂಡಲಸಂಗಮ’ ಎಂಬ ಅಂಕಿತವನ್ನು ಲಿಂಗದೇವ ಎಂದು ಬದಲು ಮಾಡಿದರೆ ಸಾಕ್ಷಾತ್ ಬಸವಣ್ಣ ಸಹ ಕ್ಷಮಿಸುವುದಿಲ್ಲ.  ಬುದ್ಧಿ, ಜ್ಞಾನ, ಅನುಭಾವ ವಚನಗಳ ಆಶಯ ಎಂದು ವಚನಕಾರ, ಸಾಹಿತಿ ಪ್ರೊ.ಕೆ.ಓಂಕಾರಪ್ಪ ನುಡಿದರು. 
ಐಡಿಎಸ್‍ಜಿ ಸರ್ಕಾರಿ ಕಾಲೇಜಿನ ಕನ್ನಡವಿಭಾಗ ಹಾಗೂ ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಐ.ಎನ್.ಮಲ್ಲೇಗೌಡ ಸಭಾಂಗಣದಲ್ಲಿ ನಿನ್ನೆ ಆಯೋಜಿಸಿದ್ದ “ಚಂದ್ರಸ್ಮೈತಿ” ಪ್ರೊ.ಚಂದ್ರಯ್ಯನಾಯ್ಡು ‘ಬದುಕು-ಬರಹ ಕುರಿತ ವಿಚಾರಸಂಕಿರಣ’ದಲ್ಲಿ  “ಚಂದ್ರಯ್ಯನಾಯ್ಡು ಆಧುನಿಕ ವಚನ ವೈವಿಧ್ಯತೆ”  ಕುರಿತಂತೆ ಅವರು ವಿಶೇಷ ಉಪನ್ಯಾಸ ನೀಡಿದರು. 
12ನೇ ಶತಮಾನದಲ್ಲಿ ವಚನಗಳು ಚಳುವಳಿಯ ಅಸ್ತ್ರವಾಗಿ-ಉತ್ಪನ್ನಗಳಾಗಿ ಮೂಡಿದ್ದವು.  ವಚನಗಳು  ನಾಯ್ಡು ಅಭಿವ್ಯಕ್ತಿ ಪ್ರಮುಖ ಮಾಧ್ಯಮ.   ನಾಯ್ಡು ಅವರಿಗೆ “ವಚನ” ಪ್ರಿಯವಾದ  ಪ್ರಕಾರ.  25ವರ್ಷಗಳ ಕಾಲ ವಚನಪ್ರಕಾರಗಳಲ್ಲಿ ಕೆಲಸಮಾಡಿ 20ವಚನ ಸಂಕಲನ ತಂದಿದ್ದಾರೆ.  ಸರಳ-ಸುಂದರ-ನೇರ ನಿಲುವು ಅನುಭಾವದ ನೆಲೆ ಇಲ್ಲಿ ಪ್ರಮುಖ ಲಕ್ಷಣವಾಗಿತ್ತು.  ಬೆಂಕಿಯಲ್ಲಿ ಅರಳಿದ ಹೂವು ಆಗಿದ್ದ ನಾಯ್ಡು, 1800ವಚನಗಳನ್ನು ಬರೆದಿದ್ದಾರೆ.  ಸಾಮಾಜಿಕ ಆಯಾಮ ವಚನಗಳು, ವ್ಯಕ್ತಿ ಕುರಿತ ವಚನಗಳು ಮತ್ತು ತಾತ್ವಿಕ ಸಂಗತಿ ವಚನಗಳೆಂದು ಮೂರು ರೀತಿ ವರ್ಗೀಕರಿಸಬಹುದು.  ವ್ಯಕ್ತಿಗಳ ಕುರಿತ 12ವಚನ ಸಂಕಲನಗಳಿವೆ ಎಂದರು.
“ಸತ್ಯಪ್ರಿಯ” ಅವರ ಆರಂಭದ ವಚನಗಳ ಅಂಕಿತವಾಗಿತ್ತು.  ನಂತರ ಅಂಕಿತ ಕಾಣೆಯಾಯಿತು. ವಾಸ್ತವವಾಗಿ ಅಂಕಿತಗಳು ಮನೋಧರ್ಮವನ್ನು ಬಿಂಬಿಸುವ ಜೊತೆಗೆ ಬರೆದವರನ್ನು ಗುರುತಿಸುವ ಮಹತ್ವದ ಸಂಗತಿ. ನಾಯ್ಡು  ಅಂಕಿತ ಬಿಟ್ಟು ವ್ಯಕ್ತಿಗಳ ಕಡೆಗೆ ಏಕೋ ತಿರುಗಿದರು.  ಆದರೂ ವ್ಯಕ್ತಿತ್ವವನ್ನು ಸಾಂಸ್ಕøತಿಕವಾಗಿ ಪರಿಚಯಿಸುವ ಗುಣಗ್ರಾಹಿತ್ವ ಇಲ್ಲಿ ಗುರುತಿಸಬಹುದು.  ವೇಗದ ವಚನ ರಚನೆ ಇತ್ತು.  ವ್ಯಕ್ತಿತ್ವದ ಶುಭ್ರಪರಿಚಯ ಇದ್ದು,  ಪದ್ಯ ಮತ್ತು ಗದ್ಯ ಎರಡರ ಸಮಿಶ್ರವಾಗಿತ್ತು. ಗುಣಕ್ಕಿಂತ ಗಾತ್ರಕ್ಕೆ ಮಹತ್ವ ಕೊಟ್ಟಿದ್ದರೂ ಅವರ ಉತ್ಸಾಹ-ವೇಗಕ್ಕೆ ಒಳಗಾಗಿ ಕೆಲ ವಚನಗಳ ಚೌಕಟ್ಟು ಒಂದೇ ಆಗಿದುದ್ದು ಮಿತಿ ಎಂದ ಪ್ರೊ.ಓಂಕಾರಪ್ಪ, ಆಧುನಿಕ ವಚನಸಾಹಿತ್ಯದಲ್ಲಿ ನಾಯ್ಡು ಅವರನ್ನು ಮರೆಯಲಾಗದು ಎಂದರು.
‘ಚಂದ್ರಯ್ಯನಾಯ್ಡು ಸಾಹಿತ್ಯಸಂಘಟನೆ’ ಕುರಿತಂತೆ ಉಪನ್ಯಾಸ ನೀಡಿದ ಹಿರಿಯಪತ್ರಕರ್ತ ಸ.ಗಿರಿಜಾಶಂಕರ್  ಚಿಕ್ಕಮಗಳೂರನ್ನು ಸಾಂಸ್ಕøತಿಕ ಜಿಲ್ಲೆಯೆಂದು ಪರಿಚಯಿಸಿದ ಕೀರ್ತಿ ನಾಯ್ಡು ಅವರಿಗೆ ಸಲ್ಲುತ್ತದೆ.  ರಾಜ್ಯದ ಅನೇಕ ಹಿರಿಯ ಸಾಹಿತಿಗಳನ್ನು ಜಿಲ್ಲೆಗೆ ಕರೆತಂದರು.  ಶ್ರೀಮಂತರನ್ನು ಸಾಹಿತ್ಯದ ಪರಿಧಿಯೊಳಗೆ ತಂದರು.  ಸಾಹಿತ್ಯ-ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಹಣಕೊಡಬೇಕೆಂಬುದನ್ನು ಕಲಿಸಿದರು.  ಸಾಹಿತ್ಯಪರಿಷತ್‍ನ್ನು ಸಾಮಾನ್ಯರ ಬಳಿಗೆ ಒಯ್ದರು.   “ದತ್ತಿನಿಧಿ”ಯಲ್ಲಿ ವಿಕ್ರಮ ಸ್ಥಾಪಿಸಿದರು.  ಸಮಾರಂಭಗಳಿಗೆ ಹೊಸರೂಪು-ಶಿಸ್ತು, ಆಡಂಬರ-ಆಕರ್ಷಣೆ ತಂದುಕೊಟ್ಟವರೆಂದು ಬಣ ್ಣಸಿದರು.
ಕಾರ್ಯಕ್ರಮ ವ್ಯವಸ್ಥಿತವಾಗಿ ಆಕರ್ಷಣ ೀಯವಾಗಿ ಸಂಘಟಿಸುತ್ತಿದ್ದು,  ಝಗಮಯಿಸುವ ವೇದಿಕೆ, ವೈವಿಧ್ಯಮಯವಾದ ಹಾರ-ತುರಾಯಿ-ಶಾಲು-ಪೇಟ-ಹಣ ್ಣನ ಬುಟ್ಟಿಗಳ ವೈಭವ ಇರುತ್ತಿತ್ತು.  ವಿಚಾರದ ಜೊತೆಗೆ ರಂಗಿರಬೇಕೆಂದು ಬಯಸುತ್ತಿದ್ದರು.  ಹೂರಣ-ತೋರಣ ಚನ್ನಾಗಿರಬೇಕೆಂದು ಅಪೇಕ್ಷಿಸುತ್ತಿದ್ದ ನಾಯ್ಡು,  ವರ್ಷದಲ್ಲಿ ನಾಲ್ಕಾರು ಉತ್ತಮ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದರೆಂದರು.
ಒಳಿತನ್ನು ಗುರುತಿಸುವ ಹೃದಯ, ಕಣ್ಣು, ಮನಸ್ಸು ಹೊಂದಿದ ನಾಯ್ಡು, ಇನ್ನೊಬ್ಬರ ಕೀರ್ತಿ, ಪ್ರತಿಭೆ, ಸಾಧನೆ, ಯಶಸ್ಸು ನೋಡಿ ಸಂತೋಷ ಪಡುತ್ತಿದ್ದರು.  ದೀರ್ಘ ದ್ವೇಷಿಗಳಾಗಿರಲಿಲ್ಲ.  ನಿಸ್ಪøಹತೆ ಸಾಹಿತ್ಯ ಸಂಸ್ಕøತಿ ಪ್ರೀತಿಯಿಂದ ಸದಾ ನೆನಪಿನಂಗಳದಲ್ಲಿ ವಿಹರಿಸುವ ನಾಯ್ಡು,  ಇನ್ನೊಬ್ಬರ ಉತ್ಕರ್ಷ ನೋಡಿ ಹರ್ಷಸುತ್ತಿದ್ದ  ಜೇನಿನ ಹೃದಯದವರು.  ಸಾವಿನಲ್ಲಿ ಸರತಿಸಾಲನ್ನು ಮುರಿದ ಗೆಳೆಯ ಎಂದು ಗಿರಿಜಾಶಂಕರ್ ಭಾವುಕರಾದರು.
ಚಂದ್ರಯ್ಯನಾಯ್ಡು ಶೈಕ್ಷಣ ಕ ಮತ್ತು ಸಾಮಾಜಿಕ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷೆ ವಾಣ ನಾಯ್ಡು  ವಿಚಾರ ಸಂಕಿರಣದ ಸಮಾರೋಪ ಭಾಷಣದಲ್ಲಿ ಪತಿಯ ಅಗಲಿಕೆ ನೋವಾದರೆ ಅವರ ಸಾಧನೆಯ ಮೆಲುಕು ಸಂತೋಷ ತಂದಿದೆ.  ಅವರ ಸಾಹಿತ್ಯ ವಿಮರ್ಶೆಗೊಳಪಡುತ್ತಿರುವ ವಿಚಾರಸಂಕಿರಣ ತಮಗೆ ಸುಖ ಮತ್ತು ದುಃಖ ಎರಡನ್ನೂ ತಂದುಕೊಟ್ಟಿದೆ.  ಪುಸ್ತಕಪ್ರೀತಿಯನ್ನು ಹೊಂದಿದ್ದ ಅವರು, ಅಪಾರ ಪುಸ್ತಕ ಸಂಪತ್ತಿನೊಂದಿಗೆ ಪ್ರೀತಿ-ವಿಶ್ವಾಸ ಬಿಟ್ಟುಹೋಗಿದ್ದಾರೆ.  ಅವರ ಹುಟ್ಟೂರು ಹಗರೆಯಲ್ಲಿ 8,000ಪುಸ್ತಕಗಳನ್ನು ನೀಡಿ ಪುಸ್ತಕಭಂಡಾರ ಸ್ಥಾಪಿಸಲಾಗಿದೆ. 12,000ಪುಸ್ತಕಗಳ ಸಂಗ್ರಹ ಮನೆಯಲ್ಲಿದ್ದು, ಆಸಕ್ತರಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಪ್ರಾಂಶುಪಾಲ ಪ್ರೊ.ಟಿ.ಸಿ.ಬಸವರಾಜಪ್ಪ ವಿಚಾರಸಂಕಿರಣದÀ ಅಧ್ಯಕ್ಷತೆವಹಿಸಿದ್ದರು. ಪ್ರೊ.ಎಚ್.ಎಂ.ಮಹೇಶ್, ಪ್ರೊ.ಎಸ್.ಸುಂದರೇಶ್, ಮಾಧ್ಯಮಸಂಸ್ಕøತಿ ಪ್ರತಿಷ್ಠಾನದ ಅಧ್ಯಕ್ಷೆ ಗೌರಮ್ಮಬಸವೇಗೌಡ, ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ, ಕಾರ್ಯದರ್ಶಿ  ಸುಮಿತ್ರಾಶಾಸ್ತ್ರಿ, ಉಪನ್ಯಾಸಕರಾದ ಯು.ಸಿ.ಮಹೇಶ್, ಪರ್ವತೇಗೌಡ, ಪ್ರೊ.ಜಗದೀಶಪ್ಪ, ಪ್ರೊ.ಸುಧಾಪ್ರಶಾಂತ್, ದರ್ಶನ್‍ನಾಯ್ಡು  ಮತ್ತಿತರರು ಪಾಲ್ಗೊಂಡಿದ್ದರು.  

ನಗರದಲ್ಲಿಂದು:ಪೂರ್ವಾಹ್ನ 11ಗಂಟೆಗೆ ಮೌಂಟೆನ್ ವ್ಯೂ ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ಹೊಸವಿದ್ಯಾರ್ಥಿಗಳ ಸ್ವಾಗತ ಸಮಾರಂಭ.  ಅಧ್ಯಕ್ಷತೆ: ವಿದ್ಯಾಸಂಸ್ಥೆ ಅಧ್ಯಕ್ಷೆ ಹಬೀಬಾ ಎನ್.ಪಾಷ.  ಮುಖ್ಯಅತಿಥಿಗಳು: ಆಡಳಿತಾಧಿಕಾರಿ ಭದ್ರೇಗೌಡ ಮತ್ತು ಪ್ರಾಂಶುಪಾಲೆ ತಸ್ನಿಮ್‍ಫಾತೀಮಾ.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...