ಚಿಕ್ಕಮಗಳೂರು:“ಚಂದ್ರಸ್ಮೈತಿ” ಪ್ರೊ.ಚಂದ್ರಯ್ಯನಾಯ್ಡು ಬದುಕು-ಬರಹ ಕುರಿತ ವಿಚಾರಸಂಕಿರಣ ಉದ್ಘಾಟನೆ

Source: shabbir | By Arshad Koppa | Published on 2nd August 2017, 8:20 AM | State News | Guest Editorial |

ಚಿಕ್ಕಮಗಳೂರು ಆ.1:  ಚಂದ್ರಯ್ಯನಾಯ್ಡು  ವಾಕ್‍ಚಾತುರ್ಯ ಮತ್ತು ಸಂಘಟನಾ ಕೌಶಲ್ಯ ದೈವದತ್ತವಾಗಿತ್ತು.  ಅವರ ಪ್ರತಿಭೆ ಸಾಮಥ್ರ್ಯ, ಸಂಘಟನೆ ಜಿಲ್ಲೆಯನ್ನು ಸಾಂಸ್ಕøತಿಕವಾಗಿ ಶ್ರೀಮಂತಗೊಳಿಸಿದೆ ಎಂದು ಮಾಧ್ಯಮಸಂಸ್ಕøತಿ ಪ್ರತಿಷ್ಠಾನದ ಅಧ್ಯಕ್ಷೆ ಗೌರಮ್ಮಬಸವೇಗೌಡ ನುಡಿದರು.


ಐಡಿಎಸ್‍ಜಿ ಸರ್ಕಾರಿ ಕಾಲೇಜಿನ ಕನ್ನಡವಿಭಾಗ ಹಾಗೂ ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಐ.ಎನ್.ಮಲ್ಲೇಗೌಡ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ “ಚಂದ್ರಸ್ಮೈತಿ” ಪ್ರೊ.ಚಂದ್ರಯ್ಯನಾಯ್ಡು ಬದುಕು-ಬರಹ ಕುರಿತ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭಗಳನ್ನು ಅಚ್ಚುಕಟ್ಟಾಗಿ ಸಂಘಟಿಸುತ್ತಾ ಉತ್ಸಾಹ ತುಂಬುವ ಜನಾಕರ್ಷಣೆ ಅವರಲ್ಲಿತ್ತು.  ನಿಸ್ವಾರ್ಥತತೆಯಿಂದ ಕಾರ್ಯನಿರ್ವಹಿಸಿದರೆ ತೃಪ್ತಿ, ಸಮಾಧಾನ ನಮ್ಮದಾಗುತ್ತದೆ.  ಜಿಲ್ಲೆಯ ಸಾಹಿತ್ಯ, ಕಲೆ, ಶಿಕ್ಷಣ, ಸೇರಿದಂತೆ ವಿವಿಧ ಕ್ಷೇತ್ರಗಳ ಉನ್ನತಿಗೆ ನಾಯ್ಡು ಕೊಡುಗೆ ಸ್ಮರಣ ೀಯ ಎಂದ ಗೌರಮ್ಮ,  ಒಳ್ಳೆಯದನ್ನು ಗುರುತಿಸುವ, ಗೌರವಿಸುವ, ಪ್ರೋತ್ಸಾಹಿಸುವ ಗುಣಲಕ್ಷಣಗಳು ಆದರ್ಶಪ್ರಾಯವೆಂದರು.
 ‘ಚಂದ್ರಯ್ಯನಾಯ್ಡು ಅಂಕಣ ಬರಹ’ ಕುರಿತಂತೆ ವಿಶೇಷಉಪನ್ಯಾಸ ನೀಡಿದ ಪ್ರೊ.ಎಚ್.ಎಂ.ಮಹೇಶ್, ಪತ್ರಿಕೆಗಳಿಗಾಗಿ ಹುಟ್ಟಿದ,  ಪತ್ರಿಕೆಗಳೆ ಬೆಳೆಸಿದ ಸಾಹಿತ್ಯ ‘ಅಂಕಣ’.  ಅನೇಕ ಬರಹಗಾರರ ಹುಟ್ಟಿಗೆ ಕಾರಣವಾಗಿದೆ.  ಡಾ||ಹಾ.ಮಾ.ನಾಯಕ್‍ರಿಂದ ಅಂಕಣಸಾಹಿತ್ಯಕ್ಕೆ ಹೆಚ್ಚಿನ ಬೆಲೆ ಬಂತು.  ನಾಯ್ಡುರ ಬರಹಕ್ಕಿಂತ ಅವರ ಭಾಷಣವೇ ಹೆಚ್ಚು ಜನಪ್ರಿಯ.  ವ್ಯಕ್ತಿಚಿತ್ರದ ಮೂಲಕ ಅಂಕಣ ಸಾಹಿತ್ಯವನ್ನು ‘ಜನಮಿತ್ರ’ ಮೂಲಕ ಪ್ರಾರಂಭಿಸಿದ ನಾಯ್ಡು, 200ಕ್ಕೂ ಹೆಚ್ಚು ಅಂಕಣ ಬರೆದವರು.  ಅವರ ವ್ಯಕ್ತಿಚಿತ್ರದ ವ್ಯಾಪ್ತಿ ಜಿಲ್ಲೆಗೆ ಸೀಮಿತವಾಗಿತ್ತು ಎಂದರು.
ಜೀವನಚರಿತ್ರೆಯ ಸಂಕ್ಷಿಪ್ತರೂಪವೇ ವ್ಯಕ್ತಿಚಿತ್ರ.  ಸಾಧಕರು, ವಿದ್ವಾಂಸರು, ಕಲಾವಿದರು, ಅಧ್ಯಾಪಕರು, ವೈದ್ಯರು, ವಿದ್ಯಾರ್ಥಿಗಳು ಹೀಗೆ ಎಲ್ಲ ವರ್ಗವನ್ನೂ ಅಂಕಣ ಒಳಗೊಳ್ಳುತ್ತಿತ್ತು.  ವ್ಯಕ್ತಿಚಿತ್ರ ನಿಪುಣರಾಗಿದ್ದ ನಾಯ್ಡು, ಅಂಕಣಗಳ ಮೂಲಕ ಜನಪರ ಶಿಕ್ಷಣ ಕೊಟ್ಟವರು. ಬಿಡಿಯಾಗಿ ಅಲ್ಲಿಲ್ಲಿ ಬಂದ ಅಂಕಣ ಸಾಹಿತ್ಯವನ್ನು ಇಡಿಯಾಗಿ ಪುಸ್ತಕರೂಪದಲ್ಲಿ ನೀಡಿದವರು.  ಕೇವಲ ಗುಣವನ್ನಷ್ಟೇ ನೋಡಿ ವ್ಯಕ್ತಿಯ ಕೆಡುಕನ್ನು ದಾಖಲಿಸದಿದ್ದದ್ದುಟೀಕೆಗಳಿಗೂ ಗ್ರಾಸವಾಗಿತ್ತು ಎಂದ ಪ್ರೊ.ಮಹೇಶ್, ಸೇವೆಯ ಮೂಲಕ ಸಮಾಜ ತಲುಪುವವರನ್ನು ಹುಡುಕಿಕೊಂಡು ಹೋಗಿ ಪತ್ರಿಕೆಗಳ ಮೂಲಕ ಜನರಿಗೆ ಪರಿಚಯಿಸಿದವರು.  
ನಾಯ್ಡು ಅವರ ವ್ಯಕ್ತಿಚಿತ್ರಗಳನ್ನೊಳಗೊಂಡ ಅಂಕಣಗಳು ಮುಂದೊಂದು ದಿನ ಜಿಲ್ಲೆಯ ಸಾಂಸ್ಕøತಿಕ ಚರಿತ್ರೆಯನ್ನು ರೂಪಿಸಲಿದೆ.  ಸಿರಿವಂತರು ಅಧಿಕಾರಸ್ಥರೊಂದಿಗೆ ವಿಶ್ವಾಸ ಹೊಂದಿದ್ದರೂ ಗುಣಪರ ಮೌಲ್ಯ ಹೊಂದಿದ್ದರಿಂದಲೇ ಕುಲುವಾಡಿಚನ್ನವೀರಯ್ಯ, ದಲಿತ ರಾಮನಂತಹವರೂ ಜನರಿಗೆ ಪರಿಚಯಿಸಲ್ಪಟ್ಟರು ಎಂದ  ಮಹೇಶ್,  ಪತ್ರಿಕೆಗಳ ಅಂಕಣದಿಂದ ನಾಯ್ಡು ಜನಪ್ರಿಯತೆಯೂ ಹೆಚ್ಚಿತ್ತು ಎಂದರು.
ಕನ್ನಡವಿಭಾಗದ ಮುಖ್ಯಸ್ಥ ಪ್ರೊ.ಎನ್.ಸುಂದರೇಶ್ ಮುಖ್ಯಅತಿಥಿಗಳಾಗಿ ಮಾತನಾಡಿ ಕ್ರಿಯಾಶೀಲ ಮನಸ್ಸುಗಳನ್ನು ಎಚ್ಚರವಾಗಿಡುವಲ್ಲಿ ನಾಯ್ಡು ಶ್ರಮವಹಿಸಿದವರು.  ಸಾಹಿತ್ಯಕೃಷಿಗೆ ತೊಡಗಿಸಿಕೊಳ್ಳುವ ಮೂಲಕ ಅವರಿನ್ನೂ ಜೀವಂತವಾಗಿದ್ದಾರೆ.      ಸಾಹಿತ್ಯಕೃಷಿಯಲ್ಲಿ ಕ್ರಿಯಾಶೀಲಗೊಂಡರೆ  ಮನಸ್ಸು ಅರಳುತ್ತದೆ.  ಹೆಚ್ಚು ಕೃತಿಗಳನ್ನು ವಿದ್ಯಾರ್ಥಿಗಳು ಓದಬೇಕೆಂದು ಪ್ರೋತ್ಸಾಹಿಸುತ್ತಿದ್ದ ನಾಯ್ಡು, ಅನೇಕ ಆಧುನಿಕ ವಚನಗಳಲ್ಲಿ ಸಮಾಜದ ವಿವಿಧ ಮಗ್ಗಲುಗಳನ್ನು ಪರಿಚಯಿಸಿದ್ದಾರೆಂದರು. 
ಮಾ.ಸಂ.ಪ್ರ.ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯ ಕವಿ, ಕಲಾವಿದ, ಬರಹಗಾರರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದ  ನಾಯ್ಡು, ಸಾಹಿತ್ಯಕವಾಗಿ ಜಿಲ್ಲೆಯನ್ನು ಶ್ರೀಮಂತಗೊಳಿಸಿದವರು.  ಸಾಹಿತ್ಯ-ಸಂಸ್ಕøತಿಯ ಕಾರ್ಯಕ್ರಮಗಳಿಗೆ ಅದ್ಧೂರಿಯ ಮೆರಗು ತಂದುಕೊಟ್ಟವರು.  ಅವರ ಸಂಪರ್ಕ, ಪ್ರಭಾವಗಳನ್ನೆಲ್ಲ ಸ್ವಂತಕ್ಕಿಂತ ಸಾಹಿತ್ಯ ಸೇವೆಗೆ ಬಳಸಿಕೊಂಡವರು.  ಅಂಕಣಸಾಹಿತ್ಯಕ್ಕೆ ಜಿಲ್ಲೆಯಲ್ಲಿ ನೆಲೆ, ಬೆಲೆ ತಂದುಕೊಟ್ಟವರೆಂದು ಬಣ ್ಣಸಿದರು.  
ಪ್ರಾಂಶುಪಾಲ ಪ್ರೊ.ಟಿ.ಸಿ.ಬಸವರಾಜಪ್ಪ ವಿಚಾರಸಂಕಿರಣ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಸಾಹಿತ್ಯ ಬೆಳವಣ ಗೆ ತಂದುಕೊಟ್ಟ ಕೀರ್ತಿ ನಾಯ್ಡು ಅವರದ್ದು.  ದಿಗ್ಗಜ್ಜರನ್ನು ಊರಿಗೆ ಬರಮಾಡಿಕೊಂಡು,  ಸುಂದರ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸುವಲ್ಲಿ ಇವರ ಪರಿಶ್ರಮ ಅಪಾರ. ದೇಶ ಮತ್ತು ಸಮಾಜಕ್ಕೆ ಉಪಯುಕ್ತರಾಗಿ  ಬದುಕುವುದನ್ನು ಇವರಿಂದ ಕಲಿಯಬಹುದೆಂದರು. 
ವಿದ್ಯಾರ್ಥಿಗಳೊಂದಿಗೆ ಹಿರಿಯಪತ್ರಕರ್ತ ಸ.ಗಿರಿಜಾಶಂಕರ್, ಸಾಹಿತಿ ಪ್ರೊ.ಕೆ.ಓಂಕಾರಪ್ಪ ಸಂವಾದಿಸಿದರು.  ಉಪನ್ಯಾಸಕರಾದ ಯು.ಸಿ.ಮಹೇಶ್ ಸ್ವಾಗತಿಸಿ, ಪರ್ವತೇಗೌಡ ವಂದಿಸಿದರು. ಸುಮಿತ್ರಾಶಾಸ್ತ್ರಿ ಪ್ರಾರ್ಥಿಸಿದ್ದು,  ಸುಪ್ರಿತಾ ನಿರೂಪಿಸಿದರು. ವಾಣ ಚಂದ್ರಯ್ಯನಾಯ್ಡು  ಪ್ರೊ.ಜಗದೀಶಪ್ಪ, ಪ್ರೊ.ಸುಧಾಪ್ರಶಾಂತ್ ಉಪಸ್ಥಿತರಿದ್ದ

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...