ಚಿಕ್ಕಾಬಳ್ಳಾಪುರ:ಅಸಭ್ಯವಾಗಿ ವರ್ತಿಸಿದ ಕಾಮುಕನಿಗೆ ಬಸ್ ನಿಲ್ದಾಣದಲ್ಲಿ ಥಳಿಸಿದ ಮಹಿಳೆಯರು

Source: manju | By Arshad Koppa | Published on 29th June 2016, 7:10 AM | State News | Incidents |


ಚಿಕ್ಕಾಬಳ್ಳಾಪುರ, ಜೂನ್ ೨೮: ಬಸ್ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿದ ಕಾಮುಕನಿಗೆ ಇಬ್ಬರು ಮಹಿಳೆಯರು ಹಿಗ್ಗಾಮುಗ್ಗಾ ಥಳಿಸಿ, ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ನಗರದಲ್ಲಿ ನಡೆದಿದೆ.


ಆಂಧ್ರದ ಕರ್ನೂಲು ಮೂಲದ ಶ್ರೀನಿವಾಸ ಮಹಿಳೆಯರ ಕೈಯಿಂದ ಗೂಸಾ ತಿಂದ ವ್ಯಕ್ತಿ. ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಲ್ಲಿ ಕೋಲಾರ ಮೂಲದ ರತ್ಮಮ್ಮ ಹಾಗೂ ಗಂಗಮ್ಮ ಬಸ್ ನಲ್ಲಿ ಪ್ರಯಾಣಿಸಲು ಹಣವಿಲ್ಲದೇ ಸುಮ್ಮನೆ ಕುಳಿತುಕೊಂಡಿದ್ದಾಗ ಶ್ರೀನಿವಾಸ್ ಸ್ಥಳಕ್ಕೆ ಬಂದಿದ್ದಾನೆ.
ಬಂದವನೇ ನನ್ನ ಜೊತೆ ಬನ್ನಿ ನಿಮಗೆ ಎಷ್ಟು ಬೇಕು ಅಷ್ಟು ಹಣವನ್ನು ನೀಡುತ್ತೇನೆ ಎಂದು ಹೇಳಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಇಬ್ಬರು ಮಹಿಳೆಯರು ರಣ ಚಂಡಿಯಂತೆ ಶ್ರೀನಿವಾಸ್ ನನ್ನು ಹಿಡಿದು ಸಿಕ್ಕಾಪಟ್ಟೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...