ಗಣಿತ ಕಲಿಕೆ ವೇಳೆ ಮಗುವಿಗೆ ಥಳಿತದ ವೀಡಿಯೊ ವೈರಲ್

Source: sonews | By sub editor | Published on 20th August 2017, 10:48 PM | State News | National News | Special Report | Don't Miss | |

ಹೊಸದಿಲ್ಲಿ: ಪುಟ್ಟ ಮಗುವೊಂದು ಗಣಿತ ಅಭ್ಯಾಸ ಮಾಡುತ್ತಿದ್ದ ವೇಳೆ ಮಗುವಿಗೆ ಬೈದು, ಹೊಡೆಯುತ್ತಿರುವ ಘಟನೆ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿಂಸೆ ವಿರುದ್ಧ ಸಮಾಜದ ವಿವಿಧೆಡೆಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡಾ ಮಕ್ಕಳ ಮೇಲಿನ ಇಂತಹ ದೌರ್ಜನ್ಯವನ್ನು ಖಂಡಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೊ ಹಾಕಿದವರ ಪೈಕಿ ಕೊಹ್ಲಿ ಕೂಡಾ ಸೇರಿದ್ದು, "ಮಗುವಿನ ನೋವು ಹಾಗೂ ಸಿಟ್ಟನ್ನು ನಿರ್ಲಕ್ಷಿಸಿ, ಕೆಲವರ ’ಇಗೊ’ (ಪ್ರತಿಷ್ಠೆ) ಮಗುವನ್ನು ಕಲಿಯುವಂತೆ ಮಾಡಿದೆ. ಇಲ್ಲಿ ಅನುಕಂಪಕ್ಕೆ ಜಾಗವೇ ಇಲ್ಲ. ಇದು ಆಘಾತಕಾರಿ ಹಾಗೂ ಬೇಸರದ ಸಂಗತಿ. ಇಂಥ ಹಿಂಸೆಯಿಂದ ಮಗು ಖಂಡಿತಾ ಕಲಿಯಲಾರದು. ಇದು ಹೃದಯವಿದ್ರಾವಕ" ಎಂದು ಕೊಹ್ಲಿ ಬರೆದಿದ್ದಾರೆ.

ಅರು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ 19 ಲಕ್ಷ ಮಂದಿ ಇದನ್ನು ವೀಕ್ಷಿಸಿದ್ದಾರೆ. ಕೊಹ್ಲಿಗೆ 15.1 ಲಕ್ಷ ಅನುಯಾಯಿಗಳಿದ್ದಾರೆ. 18 ಸಾವಿರ ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಆದರೆ 69 ಸೆಕೆಂಡ್‌ನ ಈ ವೀಡಿಯೊವನ್ನು ಮೊಟ್ಟಮೊದಲು ಯಾವಾಗ ಪೋಸ್ಟ್ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.

ಐದು ವರ್ಷಕ್ಕಿಂತ ಕೆಳಗಿನ ಮಗು ಬೆಡ್ ಮೇಲೆ ಪುಸ್ತಕ ಹಿಡಿದುಕೊಂಡು ಲೆಕ್ಕ ಕಲಿಯುತ್ತಾ ಅಂಕಿಗಳನ್ನು ಕಂಠಪಾಠ ಮಾಡುತ್ತಿದೆ. ಆ ಮಗುವಿಗೆ ಮಹಿಳೆಯೊಬ್ಬರು ಬೈಯುತ್ತಿದ್ದು, ಪುಟ್ಟ ಮಗು ಧಾರಾಕಾರ ಕಣ್ಣೀರು ಸುರಿಸುತ್ತಿದೆ. ದೈನ್ಯದಿಂದ ಬೇಡುತ್ತಿರುವ ಮಗುವನ್ನು ಮಹಿಳೆ ಹೊಡೆಯುತ್ತಿದ್ದಾಳೆ.

ಕ್ರಿಕೆಟರ್ ಶಿಖರ್ ಧವನ್ ಹಾಗೂ ರಾಬಿನ್ ಉತ್ತಪ್ಪ ಅವರೂ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಫೇಸ್‌ಬುಕ್ ಪೇಜ್‌ನಲ್ಲಿ ವೈರಲ್ ಸರ್ಕೇಸಮ್ ವೀಡಿಯೊವನ್ನು 17 ಗಂಟೆಗಳಲ್ಲಿ 52 ಸಾವಿರ ಮಂದಿ ವೀಕ್ಷಿಸಿದ್ದಾರೆ.

ಕೃಪೆ:ವಾರ್ತಾಭಾರತಿ

Read These Next

ಯಾರ ಸಮುದ್ರ? ಯಾರ ಕರಾವಳಿ?

ಕಳೆದ ಐದು ವರ್ಷಗಳಿಂದ ಮುಂಬೈನ ಸ್ಥಳೀಯ ಮೀನುಗಾರ ಸಮುದಾಯವು ವಿವಾದಾಸ್ಪದವಾದ ಕರಾವಳಿ ರಸ್ತೆ ಯೋಜನೆಯನ್ನು ತಾವು ಹಲವು ...

ಯಾರ ಸಮುದ್ರ? ಯಾರ ಕರಾವಳಿ?

ಕಳೆದ ಐದು ವರ್ಷಗಳಿಂದ ಮುಂಬೈನ ಸ್ಥಳೀಯ ಮೀನುಗಾರ ಸಮುದಾಯವು ವಿವಾದಾಸ್ಪದವಾದ ಕರಾವಳಿ ರಸ್ತೆ ಯೋಜನೆಯನ್ನು ತಾವು ಹಲವು ...