ಅತ್ಯಾಚಾರಿ ಗುರ್ಮಿತ್ ಸಿಂಗ್ ಗೆ ೧೦ ವರ್ಷ ಜೈಲು

Source: sonews | By Staff Correspondent | Published on 28th August 2017, 5:01 PM | National News | Special Report | Don't Miss |

ರೋಹ್ಟಕ್:ಇಬ್ಬರು ಸಾಧ್ವಿಗಳ ಮೇಲೆ ಮೂರು ವರ್ಷಗಳ ಕಾಲ ನಿರಂತರ ಅತ್ಯಾಚಾರ ನಡೆಸಿರುವ ಪ್ರಕರಣದಲ್ಲಿ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮಿತ್ ಸಿಂಗ್ ಗೆ ಸಿಬಿಐ ವಿಶೇಷ   ನ್ಯಾಯಾಲಯ 10  ವರ್ಷ ಜೈಲು ಶಿಕ್ಷೆ ವಿಧಿಸಿದೆ.

 

ರೋಹ್ಟಕ್ ನ ಸುನಾರಿಯಾ ಜೈಲಿನ ಆವರಣದಲ್ಲಿರುವ ಜೈಲು ಸಿಬಿಐನ ವಿಶೇಷ ನ್ಯಾಯಾಲಯದಲ್ಲಿ ಇಂದು   ನ್ಯಾಯಾಧೀಶ  ಜಗದೀಪ್ ಸಿಂಗ್ ಅವರು  ಗುರ್ಮಿತ್ ಸಿಂಗ್  ಶಿಕ್ಷೆಯ ಪ್ರಮಾಣ ನಿರ್ಧರಿಸಲು ಎರಡೂ ಕಡೆಯ ವಕೀಲರ ವಾದವನ್ನು ಆಲಿಸಿದ ಬಳಿಕ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು. ಪ್ರಾಸಿಕ್ಯೂಷನ್ ಪರ ವಾದವನ್ನು ಎತ್ತಿ ಹಿಡಿದ  ನ್ಯಾ. ಜಗದೀಪ್ ಸಿಂಗ್ ದೋಷಿ ಗುರ್ಮಿತ್ ಸಿಂಗ್ ಗೆ ಐಪಿಸಿ  ಸೆಕ್ಷನ್ 376(ಅತ್ಯಾಚಾರ) , 506 (ಜೀವ ಬೆದರಿಕೆ) , 511 ರ ಪ್ರಕಾರ ಅಪರಾಧಕ್ಕೆ ಯತ್ನದ ಹಿನ್ನೆಲೆಯಲ್ಲಿ ಗುರ್ಮಿತ್ ಸಿಂಗ್ ಗೆ  ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

  ಮೊದಲು ಗುರ್ಮಿತ್ ಪರ ವಕೀಲರಿಗೆ ವಾದ ಮಂಡಿಸಲು ಅವಕಾಶ ನೀಡಲಾಗಿತ್ತು. " ಗುರ್ಮಿತ್ ವಯಸ್ಸು , ಆರೋಗ್ಯ  ಪರಿಗಣಿಸಿ  ಕಡಿಮೆ ಶಿಕ್ಷೆ ಕೊಡಿ'' ಎಂದು ಗುರ್ಮಿತ್ ಪರ ವಕೀಲ ಎಸ್ ಕೆ ಗಾರ್ಗ್ ನರ್ವಾನ್ ವಾದ  ಮಂಡಿಸಿದ್ದರು.

ಪ್ರಾಸಿಕ್ಯೂಷನ್ ಪರ ವಕೀಲರು  "ಅತ್ಯಾಚಾರ  ಪ್ರಕರಣದ ಅಪರಾಧಿ ಗುರ್ಮಿತ್ ಗೆ ಅತೀ ಹೆಚ್ಚಿನ ಪ್ರಮಾಣದ ಶಿಕ್ಷೆ,  ಜೀವಾವಧಿ ಶಿಕ್ಷೆ ನೀಡುವಂತೆ ವಾದಿಸಿದರು.  

ವಿಚಾರಣೆ  ನಡೆಯುವ ಹೊತ್ತಿಗೆ ಗುರ್ಮಿತ್ ಸಿಂಗ್ ನ್ಯಾಯಾಲಯದಲ್ಲಿ ಕೈ ಕಟ್ಟಿ ನಿಂತಿದ್ದ ಗುರ್ಮಿತ್ ತನ್ನ ಬಗ್ಗೆ ಕನಿಕರ ತೋರುವಂತೆ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟು ಮನವಿ ಮಾಡಿದ್ದನು.  ಆದರೆ ನ್ಯಾಯಾಲಯವು ಆತನ ಮನವಿಯನ್ನು ತಿರಸ್ಕರಿಸಿತು. 

ಶಿಕ್ಷೆಯ ಪ್ರಮಾಣ ಪ್ರಕಟಗೊಂಡ ಬೆನ್ನೆಲ್ಲೆ ಗುರ್ಮಿತ್ ಸಿಂಗ್ ನನ್ನು ವೈದ್ಯಕೀಯ ತಪಾಸಣೆ ಗೊಳಪಡಿಸಲಾಯಿತು.

Read These Next

ಮೋದಿ ಸಂಪುಟದಲ್ಲಿ ರಾಜ್ಯಕ್ಕೆ ಮೂವರು ಸಚಿವ ಖಾತೆ, ಜೋಷಿ, ಡಿವಿಎಸ್, ಸುರೇಶ್ ಅಂಗಡಿಗೆ ಖಾತೆ ಹಂಚಿಕೆ

ಪ್ರಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ  ಸಚಿವ ಸಂಪುಟದ ಖಾತೆ ಹಂಚಿಕೆ ತೀರ್ಮಾನವಾಗಿದ್ದು ರಾಜ್ಯದ ಮೂವರು ...

ಅಮಿತ್ ಶಾಗೆ ಗೃಹ ಖಾತೆ, ರಾಜನಾಥ್ ಸಿಂಗ್ ಗೆ ರಕ್ಷಣೆ; ಮೋದಿ ಹೊಸ ಸರ್ಕಾರದ ಸಚಿವರ ಖಾತೆ ಹಂಚಿಕೆ ಪಟ್ಟಿ ಇಲ್ಲಿದೆ

2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ...

ಪ್ರಜಾತಂತ್ರ ಮತ್ತು ವಿನಯ

ಆದರೆ ತಮ್ಮ ವಿರೋಧಿಗಳಲ್ಲಿ ಮಾತ್ರವಲ್ಲದೆ ಒಂದು ಸಭ್ಯ ಸಮಾಜವು ಪಸರಿಸಬೇಕೆಂಬ ಆಶಯವುಳ್ಳವರಲ್ಲೂ ಸಹ ಒಂದು ಬಗೆಯ ಹತಾಷ ಭಾವಗಳನ್ನು ...

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...