ಮುಂಡಗೋಡದಲ್ಲಿ ಬಕ್ರೀದ್ ಸಂಭ್ರಮ

Source: sonews | By Staff Correspondent | Published on 22nd August 2018, 11:07 PM | Coastal News | Don't Miss |

ಮುಂಡಗೋಡ : ತಾಲೂಕಾದ್ಯಂತ ತ್ಯಾಗ ಮತ್ತು ಬಲಿದಾನ ಸಂದೇಶ ಸಾರುವ ಬಕ್ರೀದ್ ಹಬ್ಬವನ್ನು ಮುಸ್ಲೀಂ ಬಾಂದವರು ಶ್ರದ್ಧಾ, ಭಕ್ತಿ, ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.

ಬೆಳಗ್ಗೆ ಮುಸ್ಲಿಂ ಬಾಂದವರು ಸ್ನಾನ ಮಾಡಿ ಶ್ವೇತ ಬಟ್ಟೆಗಳನ್ನು ಧರಿಸಿ ಮಳೆಯ ಕಾರಣದಿಂದ ಈದಗಾ ಮೈದಾನಕ್ಕೆ ಹೋಗದೇ  ಮಸಿದಿಗಳಿಗೆ ತೆರಳಿ ನಮಾಜ ಮಾಡಲಾಯಿತು  ಪಟ್ಟಣದ ನೂರಾನಿ ಮಸ್ಜೀದ, ಮದಿನಾ ಮಸ್ಜೀದ, ರಜಾಕೀಯಾ ಮಸ್ಜೀದ, ಬಿಲಾಲ್ ಮಸ್ಜೀದ ಹಾಗೂ ಮಕ್ಬೂಲಿಯಾ ಮಸೀದ ಗಳಲ್ಲಿ ಪಟ್ಟಣದ ಸೇರಿದಂತೆ ಕೆಲ ಗ್ರಾಮಾಂತರದ ಮುಸ್ಲೀಂ ಬಾಂದವರು ಅಲ್ಲಾಹನಿಗೆ  ಬಕ್ರೀದ್ ಹಬ್ಬದ್ ವಿಶೇಷ ಪ್ರಾರ್ಥನೆಸಲ್ಲಿಸಿದರು
ರಜಾಕೀಯ ಮಸ್ಜೀದ  ಇಮಾಮ ಮಹಬೂಬಅಲಿ ಫಕೀರ ಬಯಾನ ಮಾಡಿ  ಬಕ್ರೀದ್ ಹಬ್ಬವು ತ್ಯಾಗ ಮತ್ತು ಬಲಿದಾನ ದ ಹಬ್ಬವಾಗಿದೆ ಹಾಗೂ ಯಾರಂದಿಗೂ ದ್ವೇಷ ಶತ್ರುತ್ವ ಬೆಳಸಿಕೊಳ್ಳದೇ ಅವರನ್ನು ಕ್ಷಮೀಸುವಂತ ಧ್ಯಯವನ್ನು ಪರಿಪಾಲಿಸುವಂತ ಹಬ್ಬವಾಗಿದೆ.
ಅಲ್ಲಾಹ ನು ಹಜರತ್ ಇಬ್ರಾಹಿಂ ರನ್ನು ಪರಿಕ್ಷೀಸಲು ಅವರ ಕನಸಿನಲ್ಲಿ ಬಂದು  ನಿನಗೆ ಅತ್ಯಂತ ಪ್ರೀಯವಾದನ್ನು ನನಗೆ ಬಲಿದಾನ ಮಾಡಬೇಕು ಎಂದು ಕೇಳಿಕೊಂಡಾಗ ಹಜರತ್ ಇಬ್ರಾಹಿಂ ರಿಗೆ ಅತ್ಯಂತ ಪ್ರೀಯವಾದದ್ದು ಅವರ ಮಗ ಇಸ್ಮಾಯಿಲ್. ಇಸ್ಮಾಯಿಲ್ ನನ್ನ ಬಲಿಕೊಡಲು ಹೋರಟಾಗ ದಾರ ಮಧ್ಯ ಶೈತಾನ ಬಂದು ಇಸ್ಮಾಯಿಲ್ ಗೆ ಹೇಳಿದರಂತೆ ನಿನ್ನ ತಂದೆ ನಿನ್ನನ್ನು ಅಲ್ಲಾಹನಿಗೆ ಬಲಿಕೊಡಲು ಹೊರಟಿದ್ದಾರೆ ಎಂದಾಗ ಇಸ್ಮಾಯಿಲ್ ಹೇಳಿದನಂತೆ ಅಲ್ಲಾಹನಿಗಾಗಿ ನನ್ನ ತಂದೆ ನನ್ನನ್ನು ಬಲಿಕೊಡುವುದಾದರೆ ನನ್ನ ಇನ್ನೋಂದು ಕತ್ತು ಇದ್ದರು ಅದನ್ನು ಸಹ ಬಲಿಕೊಡಲು ಹೇಳುತ್ತಿದ್ದೆ. ಶೈತಾನನ ಕೆಲಸ ನಡೆಯಲಿಲ್ಲ ಆದರೂ ಶೈತನಾ ಪ್ರಯತ್ನ ಮಾಡಿ ಇಬ್ರಾಹಿಂ ರ ಮಡದಿಗೆ ಇದ್ದ ವಿಷಯ ಹೇಳಿದಾಗ ನನ್ನ ನೂರು ಮಕ್ಕಳು ಇದ್ದರೂ ಸಹಿತ ನಾನು ಅಲ್ಲಾಹನಿಗಾಗಿ ಕುರ್ಬಾನ ಮಾಡಲು ತಯಾರಿದ್ದೇನೆ ಎಂದಾಗ ಶೈತಾನ ಬಂದ ದಾರಿಗೆ ಸುಂಕವಿಲ್ಲಾ ಎಂದು ಹೊರಟು ಹೋದನಂತೆ. 
ಇಸ್ಮಾಯಿಲ್ ತನ್ನ ತಂದೆಗೆ ಹೇಳಿದನಂತೆ ಅಪ್ಪಾ ನನಗೆ ಅಲ್ಲಾಹನಿಗಾಗಿ ಕುರ್ಬಾನ ಮಾಡುತ್ತಿದ್ದಾಗ ನೀವು ಕಣ್ಣು ಮುಚ್ಚಿಕೊಳ್ಳಿರಿ ಹಾಗೂ ನನ್ನ ಕೈಕಾಲು ಕಟ್ಟಿರಿ ಎಕೆಂದರೆ ಮಗನ ಪ್ರೀತಿಯದಿಂದ ನಿಮಗೆ ಅಲ್ಹಾಹನ ಅದೇಶ ಪಾಲನೆ ಮಾಡಲು ಅಡಚಣೆ ಯಾಗಬಹುದು ಆದ್ದರಿಂದ ಹೇಳುತ್ತಿದ್ದೇನೆ ಎಂದನಂತೆ.
ಹಜರತ್ ಇಬ್ರಾಹಿಂ ತಮ್ಮ ಮಗನನ್ನು ಬಲಿಕೊಡಲು ಚೂರಿಯಿಂದ ಕತ್ತು ಕೊಯ್ಯಲು ಹಲವಾರು ಬಾರಿ ಪ್ರಯತ್ನಿಸಿದರು ಇಸ್ಮಾಯಿಲ್ ರ ಕತ್ತು ಕೊಯ್ಯದ ಹೋದಾಗ ಇಬ್ರಾಹಿಂ ರು ಚೂರಿಯನ್ನು ಸಿಟ್ಟಿನಿಂದ ಒಗೆದರಂತೆ ಚೂರಿ ಹಾರಿಹೋಗಿ ಬಂಡೆಗಲ್ಲಿಗೆ ಬಡೆದಾಗ ಬಂಡೆಗಲ್ಲು ಎರಡು ಹೋಳಾಯಿತಂತೆ. ಮತ್ತೆ ಪ್ರಯತ್ನಿಸುತ್ತಿದ್ದಾಗ ಅಲ್ಲಾಹನು ಸಂತೃಪ್ತಿಗೊಂಡು ಅಲ್ಹಾನು ದೇವದೂತನಿಗೆ ಸಂದೇಶನೀಡಿ ಇಸ್ಮಾಯಿಲ್ ನನ್ನು ಪಕ್ಕಕ್ಕೆ ಸರಿಸಿ ಕುರಿಯನ್ನು ಇಡಲು ಅಜ್ಞಾಪಿಸಿದನಂತೆ. ಹಜರತ್ ಇಬ್ರಾಹಿಂ ಕಣ್ಣು ಕಟ್ಟಿಕೊಂಡಿದ್ದರಿಂದ ಕುರಿಯಂದು ತಿಳಿಯದೇ ಚೂರಿಯಿಂದ ಪ್ರಯತ್ನಿಸಿದಾಗ ಬಿಸಿ ರಕ್ತ ಕೈಗಳಿಗೆ ತಾಗಿದಾಗ ಅಲ್ಲಾಹನಿಗೆ ಬಲಿದಾನ ನೀಡಿದೆ ಎಂದು ಕಣ್ಣು ಕಟ್ಟಿದ್ದು ತೆಗೆದಾಗ ಇಸ್ಮಾಯಿಲ್ ಅವರ ಎದುರಿಗೆ ನಗುತ್ತಾ ನಿಂತಿದ್ದನಂತೆ.
ಅಂದಿನಿಂದ ಮುಸ್ಲೀಂ ಬಾಂದವರು ಬಲಿದಾನ ಕೊಡುವುದು ಜಾರಿಗೆ ಬಂದಿತು.
ಇವತ್ತಿನ ದಿನ ಯಾರಮೇಲು ದ್ವೇಷ ಇದ್ದರೆ ಮರೆತು ಒಂದಾಗುವ ದಿನ. ಯಾರಮೇಲಾದರೂ ದ್ವೇಷ ಇಟ್ಟುಕೊಂಡು ನಮಾಜ ಮಾಡಿ, ದಾನ ಮಾಡಿ, ಅಲ್ಲಾಹನ ಸ್ಮರಣೆಮಾಡಿದರೂ ಅಲ್ಲಾಹ ಹೇಳುತ್ತಾನಂತೆ ನಾನೂ ನಿನ್ನನ್ನು ಕ್ಷಮೀಸ ಬಹುದು ಆದರೆ ಯಾರಿಗೆ ದ್ವೇಷ ಮಾಡುತ್ತಿದ್ದಿಯೋ ಆತನೂ ನಿನಗೆ ಕ್ಷಮೆ ನೀಡಬೇಕು. ಆದ್ದರಿಂದ ಪರಸ್ಪರರು ಕ್ಷಮೇ ಮಾಡುವುದನ್ನು ಪರಿಪಾಲಿಸಿಕೊಂಡು ಹೋಗಬೇಕು ಎಂದು ಮೌಲಾನ ಬಯಾನ ಮಾಡಿದರು
 

Read These Next

ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ...

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ...