ಶಾಂತಿ ಮತ್ತು ಮಾನವೀಯತೆ: ರಾಷ್ಟ್ರೀಯ ಅಭಿಯಾನದ ಸುತ್ತ…

Source: S O News service | By Staff Correspondent | Published on 17th August 2016, 6:09 PM | State News | Special Report | Public Voice | Don't Miss |

@ ಅಕ್ಬರಲಿ ಉಡುಪಿ
ಅಭಿಯಾನದ ರಾಜ್ಯ ಸಂಚಾಲಕರು

maxresdefault (1)

ಪರಿಕಲ್ಪನೆ

ಭಾರತದ ಪ್ರಮುಖ ಶಕ್ತಿ ಅದರ ದೃಢವಾದ ಸಾಮಾಜಿಕ ವ್ಯವಸ್ಥೆಯಾಗಿದೆ. ಈ ವಿಶಾಲ ದೇಶದಲ್ಲಿ ಇಷ್ಟೊಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ ವರ್ಗಗಳ ಅಸ್ತಿತ್ವ ಮತ್ತು ಶತಮಾನಗಳಿಂದ ಅವುಗಳ ಮಧ್ಯೆ ಸಾಮಾಜಿಕ ನೆಲೆಯಲ್ಲಿ ಇರುವ ಸಾಮರಸ್ಯದ ಇಂತಹ ಉದಾಹರÀಣೆ ಪ್ರಪಂಚದಲ್ಲಿ ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಈ ಸ್ಥಿತಿಯು ಇಡೀ ಪ್ರಪಂಚದಲ್ಲಿ ನಮ್ಮ ದೇಶದ ಗೌರವ ಮತ್ತು ಶಕ್ತಿಯನ್ನು ಹೆಚ್ಚಿಸಿದೆ. ಸ್ವಾತಂತ್ರ್ಯದ ನಂತರ ರಚಿಸಲ್ಪಟ್ಟ ದೇಶದ ಸಂವಿಧಾನವೂ ಧಾರ್ಮಿಕ ಸ್ವಾತಂತ್ರ್ಯ ಮತ್ತು ವಿವಿಧ ಧಾರ್ಮಿಕ ವರ್ಗಗಳ ಮಧ್ಯೆ ಶಾಂತಿ ಮತ್ತು ಸಹೋದರತೆಗೆ ಬಲವಾದ ಬುನಾದಿಯನ್ನು ಒದಗಿಸಿದೆ.
ಇತ್ತೀಚಿನ ಕೆಲವು ವರ್ಷಗಳಿಂದ ದೇಶದ ಈ ಭದ್ರವಾದ ಸಾಮಾಜಿಕ ವ್ಯವಸ್ಥೆಯು ತೀವ್ರವಾದ ಪಂಥಾಹ್ವಾನಗಳನ್ನು ಎದುರಿಸುತ್ತಿದೆ. ಕೋಮು ಸೌಹಾರ್ದತೆ ವೇಗವಾಗಿ ಕೆಡುತ್ತಿದೆ. ಕೋಮುವಾದಿ ಶಕ್ತಿಗಳು ತಮ್ಮ ರಾಜಕೀಯ ಗೆಲುವು ಮಾತ್ರವಲ್ಲ ರಾಜಕೀಯ ಅಸ್ತಿತ್ವವೇ ಕೋಮು ವೈಷಮ್ಯವನ್ನು ಹೊಂದಿಕೊಂಡಿವೆಯೆಂದು ಚೆನ್ನಾಗಿ ಮನಗಂಡಿವೆ. ಈ ಧ್ರುವೀಕರಣ ಹೆಚ್ಚಿದಷ್ಟು ಅವರ ಯಶಸ್ಸು ಹೆಚ್ಚುತ್ತದೆ. ಆದ್ದರಿಂದ ಅವರು ಸಂಪೂರ್ಣ ದೇಶವನ್ನು ವಿಶೇಷತಃ ಸೂಕ್ಷ್ಮ ರಾಜ್ಯಗಳನ್ನು ನಿರಂತರ ಕೋಮುವೈಷಮ್ಯ ಮತ್ತು ಒತ್ತಡದಲ್ಲಿರಿಸಲು ಬಯಸುವಂತೆ ಭಾಸವಾಗುತ್ತಿದೆ.
ದೊಡ್ಡ ಗಲಭೆಗಳ ಪರಿಣಾಮವಾಗಿ ಜಾಗತಿಕ ನೆಲೆಯಲ್ಲಿ ದೇಶದ ಹೆಸರು ಕೆಡುತ್ತದೆ ಹಾಗೂ ದೇಶದ ವಿರುದ್ಧ ಜಾಗತಿಕ ಜನಾಭಿಪ್ರಾಯದ ಅಪಾಯವಿರುವುದರಿಂದ ಸಣ್ಣ ಸಣ್ಣ, ಆದರೆ ಭೀಕರವಾದ(low volume high intensity) ಘಟನೆಗಳ ನಿರಂತರ ಸರಣಿ ಈಗಿನ ಪ್ರವೃತ್ತಿಯಾಗಿದೆ. ಲೋಕ ಸಭೆಯಲ್ಲಿ ಗೃಹ ಸಚಿವರು ನೀಡಿದ ಅಂಕಿ-ಅಂಶದಂತೆ ಕಳೆದ ವರ್ಷ (2015) ಕೋಮು ಹಿಂಸೆಯ ಘಟನೆಯಲ್ಲಿ 17% ಹೆಚ್ಚಳವಾಗಿದ್ದು ಕೇವಲ ಒಂದು ವರ್ಷದಲ್ಲಿ 751 ಘಟನೆಗಳು ದಾಖಲಿಸಲ್ಪಟ್ಟಿವೆ. ಇವುಗಳಲ್ಲಿ ಹೆಚ್ಚಿನ(87%) ಘಟನೆಗಳು 7 ರಾಜ್ಯಗಳಲ್ಲಿ (ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಬಿಹಾರ, ರಾಜಸ್ತಾನ, ಗುಜರಾತ್) ಸಂಭವಿಸಿವೆ ಹಾಗೂ ಚುನಾವಣೆಗಳು ಸವಿೂಪಿಸಿದಂತೆ ಇವುಗಳಲ್ಲಿ ಇದ್ದಕ್ಕಿದ್ದಂತೆ ಹೆಚ್ಚಳವಾಗುವುದೂ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಅದರಂತೆ ರಾಷ್ಟ್ರಮಟ್ಟದಲ್ಲಿ ಅತೀ ಹೆಚ್ಚು ಘಟನೆಗಳು (823 ಘಟನೆಗಳು) 2013ರಲ್ಲಿ ಸಂಭವಿಸಿವೆ.
ಈ ಸಣ್ಣ ಆದರೆ ಅಷ್ಟೇ ಭೀಕರ ದೌರ್ಜನ್ಯಯುತ, ಭಯಾನಕ ಘಟನೆಗಳ ಹಲವಾರು ಉದಾಹರಣೆಗಳು ಪ್ರಸಕ್ತ ದಿನಗಳಲ್ಲಿ ಕಂಡು ಬಂದಿವೆ. ಜಾರ್ಖಂಡ್‍ನಲ್ಲಿ ಓರ್ವ ಯುವಕ ಮತ್ತು ಅಪ್ರಾಪ್ತ ವಯಸ್ಸಿನ ಬಾಲಕನ ಮೃತ ದೇಹಗಳು ಮರದಲ್ಲಿ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾದದ್ದು ದಾದ್ರಿಯಲ್ಲಿ ಮುಹಮ್ಮದ್ ಅಖ್ಲಾಕ್‍ನ ಭೀಕರ ಕೊಲೆ, ಕೋಮುವಾದವನ್ನು ವಿರೋಧಿಸುವ ಬುದ್ಧಿ ಜೀವಿಗಳನ್ನು ಗುರಿಯಾಗಿಸಿ ನಡೆಯುತ್ತಿರುವ ಹತ್ಯಾ ಘಟನೆಗಳು, ದೆಹಲಿ, ಹರಿಯಾಣ, ಮಧ್ಯ ಪ್ರದೇಶ, ಛತ್ತೀಸ್‍ಗಡ, ಆಗ್ರ ಮತ್ತು ಮುಂಬಯಿಯಲ್ಲಿ ಚರ್ಚುಗಳ ಮೇಲಿನ ದಾಳಿ, ವಿಶ್ವವಿದ್ಯಾಲಯಗಳಲ್ಲಿ ದಲಿತರ ಮೇಲಿನ ದೌರ್ಜನ್ಯ, ಪೂನಾದಲ್ಲಿ ಐಟಿ ಇಂಜಿನಿಯರ್ ಓರ್ವರನ್ನು ಜನರ ಗುಂಪಿನ ಮೂಲಕ ಥಳಿಸಿ ಕೊಲೆ ಮಾಡಲಾದದ್ದು ಇತ್ಯಾದಿ ಪ್ರಕರಣಗಳು ಮಾಧ್ಯಮಗಳಲ್ಲಿ ಬಹು ಚರ್ಚಿತ ಕೆಲವೊಂದು ಘಟನೆಗಳು. ಇವುಗಳ ಹೊರತು ಹಳ್ಳಿಗಳಲ್ಲಿ, ರಸ್ತೆಗಳಲ್ಲಿ, ಬಸ್, ರೈಲು ಮಾತ್ರವಲ್ಲ ಕಚೇರಿ ಕೆಲಸದ ಸ್ಥಳಗಳಲ್ಲಿಯೂ ಕೋಮುವಾದದ ನೆಲೆಯಲ್ಲಿ ಅಪಹಾಸ್ಯ, ಪೀಡನೆ ಮತ್ತು ಹಿಂಸೆಯ ಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿವೆ. ದೇಶದ ಉತ್ತರ, ಪಶ್ಚಿಮ ಪ್ರದೇಶಗಳಲ್ಲಿ ಹಾಗೂ ದಕ್ಷಿಣದ ಕರ್ನಾಟಕ ಮತ್ತು ಕೇರಳದ ಕೆಲವು ಪ್ರದೇಶಗಳಲ್ಲಿ ವಿಶೇಷತಃ ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ರಾಜಕೀಯ ಉದ್ದೇಶಕ್ಕಾಗಿ ಪ್ರಚೋದಿಸುತ್ತಿರುವ ಈ ಕೋಮು ವೈಷಮ್ಯದ ಬೆಂಕಿಯು ನಮ್ಮ ದೇಶದ ಭದ್ರ ಸಾಮಾಜಿಕ ವ್ಯವಸ್ಥೆ ಮತ್ತು ಶತಮಾನಗಳ ಹಳೆಯ ಸಾಮಾಜಿಕ ಮೌಲ್ಯಗಳನ್ನು ತನ್ನ ತೆಕ್ಕೆಗೆ ಸೆಳೆಯುತ್ತಿವೆ.
ಇವು ಆಕಸ್ಮಿಕ ಘಟನೆಗಳಲ್ಲ. ಇವುಗಳ ಹಿಂದೆ ದ್ವೇಷ ಭರಿತ ಭಾಷಣಗಳು, ವ್ಯವಸ್ಥಿತ ಪ್ರಚೋದನೆ, ಪತ್ರಿಕಾ ಲೇಖನಗಳು ಮತ್ತು ಟಿವಿ ಪ್ರಸಾರಗಳ ಒಂದು ದೀರ್ಘ ಮತ್ತು ನಿರಂತರ ಸರಣಿ ಇದೆ. ಗೋರಕ್ಷಣೆ, ಭಾರತ ಮಾತೆ, ದೇಶಭಕ್ತಿ, ಭಯೋತ್ಪಾದನೆ, ಮುಸ್ಲಿಮ್ ಜನಸಂಖ್ಯಾ ಸ್ಫೋಟ, ಲವ್ ಜಿಹಾದ್ ಇತ್ಯಾದಿ ವಿಶೇಷ ಇಶ್ಯೂಗಳನ್ನು ಸೃಷ್ಟಿಸಲಾಗಿದೆ. ಈ ಇಶ್ಯೂಗಳನ್ನು ಪ್ರಚೋದನಾತ್ಮಕ ಭಾಷಣ ಮತ್ತು ಭಾವನಾತ್ಮಕ ಘೋಷಣೆಗಳ ಮೂಲಕ ಜನರ ಮಧ್ಯೆ ದೊಡ್ಡ ಪ್ರಮಾಣದಲ್ಲಿ ಹರಡಿಸಲಾಗಿದೆ. ‘ಕೈರಾನ’ದಂತಹ ನಾಟಕಗಳನ್ನು ಸಂದರ್ಭಕ್ಕೆ ತಕ್ಕಂತೆ ಪ್ರದರ್ಶಿಸಲಾಗುತ್ತದೆ. ಉದ್ದೇಶ ಪೂರ್ವಕವಾಗಿ ‘ಮುಸ್ಲಿಮ್ ಮುಕ್ತ ಭಾರತದ’ ಫೋಷಣೆ ಹರಡಲಾಯಿತು. ಮತಾಂತರದ ನೆಪವೊಡ್ಡಿ ದೇಶದ ಹಲವು ಸ್ಥಳಗಳಲ್ಲಿ ಕ್ರೈಸ್ತರ ವಿರುದ್ಧ ವಾತಾವರಣವನ್ನು ಸೃಷ್ಟಿಸಲಾಯಿತು. ಈ ಎಲ್ಲಾ ವಿಷಯಗಳನ್ನು ‘ದ್ವೇಷದ ವಿಷ ದೇಶದಾದ್ಯಂತ ಹರಡುತ್ತಿದೆ’ ಎಂಬ ತರ್ಕದೊಂದಿಗೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ.
ಸಮಾಜವನ್ನು ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತವೆಂಬ ಎರಡು ಪ್ರತ್ಯೇಕ ವರ್ಗಗಳಲ್ಲಿ ವಿಂಗಡಿಸುವುದೇ ಈ ಕೆಟ್ಟ ಚಾಳಿಯ ನೈಜ ಗುರಿಯಾಗಿದೆ. ಬಹುಸಂಖ್ಯಾತರು ತಮ್ಮನ್ನು ಅಲ್ಪಸಂಖ್ಯಾತರಿಂದ ಬೇರ್ಪಡಿಸಿ, ಅಲ್ಪಸಂಖ್ಯಾತ ರನ್ನು ಪರಕೀಯರೆಂದು ತಿಳಿಯಬೇಕು. ಪ್ರತಿಯೊಂದು ಸಮಸ್ಯೆಗಳಿಗೆ ಅಲ್ಪಸಂಖ್ಯಾತರೇ ಹೊಣೆಗಾರರೆಂದು ತಿಳಿಯಬೇಕು. ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಪರಕೀಯತೆ, ಸಂಶಯ, ವೈರತ್ವ ಮತ್ತು ದ್ವೇಷದ ವಿಶೇಷ ಕನ್ನಡಕದ ಮೂಲಕ ಕಾಣುವ ಅಭ್ಯಾಸ ರೂಢಿಯಾಗಬೇಕು. ನಮ್ಮವರು ಮತ್ತು ಪರಕೀಯ ರೆಂಬ ಈ ವಿಭಜನೆ ಎಷ್ಟರ ಮಟ್ಟಿಗೆ ಬೆಳೆಯಬೇಕೆಂದರೆ ಇನ್ನೊಂದು ವರ್ಗದ ವ್ಯಕ್ತಿ ಅಥವಾ ಜನರ ಮೇಲೆ ನಡೆಯುವ ಅತೀ ದೊಡ್ಡ ದೌರ್ಜನ್ಯದಿಂದಲೂ ಯಾವುದೇ ಬೇಸರವಾಗದಂತೆ, ಅವರ ಅತ್ಯಂತ ಭೀಕರ ಸಂಕಷ್ಟವೂ ಆಘಾತಕಾರಿಯಾಗದಂತೆ ಹಾಗೂ ಅವರ ನ್ಯಾಯಯುತ ವಿಷಯಗಳನ್ನು ಅರಿಯದಂತೆ ಮಾಡುವುದೇ ಇದರ ಉದ್ದೇಶ.
ಒಂದು ವರ್ಗದ ಕೋಮುವಾದ ಇನ್ನೊಂದು ವರ್ಗದಲ್ಲಿಯೂ ಕೋಮುವಾದಕ್ಕೆ ಪ್ರೋತ್ಸಾಹಿಸುತ್ತದೆ. ಕ್ರಿಯೆ ಮತ್ತು ಪ್ರತಿಕ್ರಿಯೆಯ ಈ ನಿರಂತರ ಸರಣಿಯ ಪರಿಣಾಮವಾಗಿ ಎಂತಹ ಭೀಕರ ಪರಿಸ್ಥಿತಿ ಉಂಟಾಗುತ್ತದೆಯೆಂದರೆ ಎರಡೂ ವರ್ಗಗಳು ಪ್ರತಿಯೊಂದು ವಿಷಯವನ್ನು ತನ್ನ ಕನ್ನಡಕದ ಮೂಲಕ ಕಾಣಲು ತೊಡಗುತ್ತವೆ. ಪರಸ್ಪರರು ಭಾವನಾತ್ಮಕವಾಗಿ, ಮಾನಸಿಕವಾಗಿ ಸಂವಹನ ಮತ್ತು ವಿಚಾರ ವಿನಿಮಯಗಳು ಅಸಾಧ್ಯವಾಗುವಷ್ಟರ ಮಟ್ಟಿಗೆ ದೂರವಾಗುತ್ತಾರೆ. ವರ್ಗಗಳ ಮಧ್ಯೆ ಈ ರೀತಿಯ ಭೀಕರ ಕಂದರದ ಉದಾಹರಣೆಗಳು ಪ್ರಪಂಚದ ಇತಿಹಾಸದಲ್ಲಿವೆ. ಇಂತಹ ಕಂದರ ದೇಶಕ್ಕೆ ಭಯಾನಕ ವಿನಾಶವನ್ನು ತರುತ್ತದೆ. ಕೆಲವು ಶಕ್ತಿಗಳು ನಮ್ಮ ದೇಶವನ್ನು ಕೋಮುವಾದದ ಈ ನರಕಕ್ಕೆ ತಳ್ಳಲು ಬಯಸುತ್ತಿರುವುದು ವಿಷಾದನೀಯ.
ದೇಶದ ಪರಿಸ್ಥಿತಿಯ ಅವಲೋಕನದಿಂದ ತಿಳಿದುಬರುವುದೇನೆಂದರೆ ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಇಂದಿಗೂ ದೇಶದಲ್ಲಿ ಸಾಮಾಜಿಕ ನೆಲೆಯಲ್ಲಿ ಈ ಸ್ಥಿತಿ ಉಂಟಾಗಿಲ್ಲ ಹಾಗೂ ಸಾಮಾನ್ಯವಾಗಿ ಹಿಂದೂ ಮುಸ್ಲಿಮರು ಒಟ್ಟು ಸೇರಿ ವಾಸಿಸುತ್ತಿದ್ದಾರೆ. ಆದರೆ ಈ ಸೌಹಾರ್ದಮಯ ಸ್ಥಿತಿ ವೇಗವಾಗಿ ಅವನತಿಯೆಡೆಗೆ ಸಾಗುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ ಹಾಗೂ ದೇಶದ ಹಲವು ರಾಜ್ಯಗಳಲ್ಲಿ ಸಾಮಾಜಿಕ ಕಂದರ ದಿನದಿಂದ ದಿನಕ್ಕೆ ಗಾಢವಾಗುತ್ತಿದೆ.
ಇದು ಅತ್ಯಂತ ಕಳವಳಕಾರಿ ಪರಿಸ್ಥಿತಿಯಾಗಿದೆ. ದೇಶದ ಪ್ರಸಿದ್ಧ ವಿಜ್ಞಾನಿಗಳು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಹೇಳಿದಂತೆ- ಈ ಕೋಮು ವೈಷಮ್ಯದ ಪರಿಸ್ಥಿತಿಯು ಶೀಘ್ರವೇ ಸ್ಪೋಟವಾಗಬಲ್ಲ ಒಂದು ರೀತಿಯ ಅಣು ಬಾಂಬ್‍ನದ್ದಾಗಿದೆ. ಇದರ ಬಗ್ಗೆ ಸಕಾಲದಲ್ಲಿ ಗಮನ ಹರಿಸಬೇಕಾದ ಅಗತ್ಯವಿದೆ ಹಾಗೂ ಬೆಳೆಯುತ್ತಿರುವ ಸಾಮಾಜಿಕ ಕಂದರವನ್ನು ಅಳಿಸಲು ಮತ್ತು ಪರಸ್ಪರ ವಿಶ್ವಾಸದ ವಾತಾವರಣವನ್ನು ಪುನಃ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕಾಗಿದೆ.
ಸಂವಹನದ ಕೊರತೆಯು ಈ ರೀತಿಯ ಕೋಮು ವಿದ್ವೇಷದ ಜ್ವಾಲೆಯನ್ನು ಹೆಚ್ಚಿಸುತ್ತದೆ. ಎರಡು ಕೋಮುಗಳ ಮಧ್ಯೆ ಪರಸ್ಪರ ನೇರ ವಿಚಾರ ವಿನಿಮಯ ಕಡಿಮೆಯಾಗುತ್ತದೆ. ಪರಸ್ಪರರ ಬಗ್ಗೆ ತಿರುಚಿದ ಮಾಹಿತಿಗಳನ್ನು ವರ್ಗಾಯಿಸುವ ಎರಡನೇ ದರ್ಜೆಯ ಮಾಧ್ಯಮಗಳನ್ನು ಅವು ಅವಲಂಬಿಸಿರುತ್ತದೆ. ಈ ಎರಡನೆಯ ದರ್ಜೆಯ ಮಾಧ್ಯಮಗಳಲ್ಲಿ ರಾಜಕೀಯ, ಧಾರ್ಮಿಕ ನೇತಾರರ ಪ್ರಚೋದನಾತ್ಮಕ ಭಾಷಣಗಳಲ್ಲದೆ ಪ್ರಿಂಟ್ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳೂ ಇವೆ. ಹಾಗೆಯೇ ಈಗ ಸೋಷಿಯಲ್ ಮೀಡಿಯಾ ಕೂಡಾ ತಪ್ಪು ಕಲ್ಪನೆ, ವದಂತಿ ಮತ್ತು ಪ್ರಚೋದನೆಯನ್ನು ಹರಡುವುದರಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಹಿಂದೂ ಮುಸ್ಲಿಮ್ ಮತ್ತಿತರ ಧಾರ್ಮಿಕ ವರ್ಗಗಳ ಮಧ್ಯೆ ಎಲ್ಲಾ ಮಟ್ಟಗಳಲ್ಲಿಯೂ ನೇರ, ವಿಶಾಲ ಮತ್ತು ನಿರಂತರ ವಿಚಾರ ವಿನಿಮಯದ ವ್ಯವಸ್ಥೆ ಸ್ಥಾಪಿಸಲ್ಪಡುವ ಅಗತ್ಯವಿದೆ. ಈ ಪರಸ್ಪರ ವಿಚಾರ ವಿನಿಮಯ ಉನ್ನತ ನಾಯಕತ್ವ ಮತ್ತು ಬುದ್ಧಿಜೀವಿಗಳ ಮಟ್ಟದಲ್ಲಿಯೂ ಆಗಬೇಕು ಹಾಗೂ ಹಳ್ಳಿ ಹಳ್ಳಿಗಳಲ್ಲಿ, ಬೀದಿ ಬೀದಿಗಳಲ್ಲಿ ಮತ್ತು ಬಡಾವಣೆ, ವಾರ್ಡ್‍ನಂತಹ ತಳ ಮಟ್ಟದಲ್ಲಿಯೂ ಆಗಬೇಕು. ಇಂತಹ ವಿಚಾರ ವಿನಿಮಯದ ಒಂದು ಶಾಶ್ವತ ವ್ಯವಸ್ಥೆಯಾಗಬೇಕು. ಅಗತ್ಯ ಬಿದ್ದರೆ ಪರಸ್ಪರ ತಪ್ಪು ಕಲ್ಪನೆಗಳನ್ನು ಸೂಕ್ತ ಸಮಯದಲ್ಲಿ ಮತ್ತು ಶೀಘ್ರವೇ ದೂರ ಪಡಿಸಬೇಕು.
ಸಮಸ್ಯೆಯ ಗಂಭೀರತೆಯನ್ನು ದೇಶವಾಸಿಗಳಿಗೆ ಮನವರಿಕೆ ಮಾಡಿಸುವ ಅಗತ್ಯವೂ ಇದೆ. ಕೋಮುವಾದ ಮತ್ತು ಪರಸ್ಪರ ವಿದ್ವೇಷದ ವಿಷವು ಈ ಕಾಲದಲ್ಲಿ ಲೋಕದ ಹಲವಾರು ಪ್ರದೇಶಗಳನ್ನು ನರಕವನ್ನಾಗಿಸಿವೆ. ಹಲವು ದೇಶಗಳು ತೀವ್ರವಾದ ಆಂತರಿಕ ಕಲಹಗಳಲ್ಲಿ ಸಿಲುಕಿವೆ ಹಾಗೂ ಈ ಬೆಂಕಿಯನ್ನು ಈಗ ಅಲ್ಲಿ ಯಾರಿಂದಲೂ ನಿಯಂತ್ರಿಸಲಾಗುತ್ತಿಲ್ಲ. ಭಾರತದಂತಹ ವಿಶಾಲ ದೇಶದಲ್ಲಿ ಈ ಬೆಂಕಿ ಹೊತ್ತಿ ಕೊಂಡರೆ ಎಲ್ಲರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು. ಇದರಿಂದ ಅಲ್ಪಸಂಖ್ಯಾತರ ಕನಸುಗಳೊಂದಿಗೆ ಬಹುಸಂಖ್ಯಾತರ ಕನಸುಗಳೂ ನುಚ್ಚು ನೂರಾಗಬಹುದು. ಆದ್ದರಿಂದ ಜನರ ರಾಜಕೀಯ ನಿಲುವು ಏನೇ ಇರಲಿ ಆದರೆ ಸಾಮಾಜಿಕ ನೆಲೆಯಲ್ಲಿ ಕೋಮುವಾದವನ್ನು ಎದುರಿಸಲು ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕೆಂಬ ವಿಷಯವನ್ನು ಸರ್ವ ಶಕ್ತಿಯೊಂದಿಗೆ ದೇಶವಾಸಿಗಳಿಗೆ ತಿಳಿಸುವುದು ಕಾಲದ ಬೇಡಿಕೆಯಾಗಿದೆ.
ಆಕ್ರಮಣಕಾರಿ ಕೋಮುವಾದದ ಒಂದು ನೈಜ ಪರಿಣಾಮವಾಗಿ ಕಾನೂನು ಪ್ರಭಾವ ರಹಿತವಾಗುತ್ತದೆ ಮತ್ತು ಕಾನೂನಿನ ಆಡಳಿತ ದುರ್ಬಲಗೊಳ್ಳುತ್ತದೆ. ಕೋಮುವಾದದ ಹುಚ್ಚಿನಲ್ಲಿ ಜನರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ ಮತ್ತು ಪಕ್ಷಪಾತತನ ಮತ್ತು ಉದ್ರೇಕಕಾರಿ ಎಂದು ಗೊತ್ತಿದ್ದೂ ಸಮಾಜ ಇದನ್ನು ಸಹಿಸಿಕೊಳ್ಳಲಾರಂಭಿಸುತ್ತದೆ. ಎಷ್ಟರ ತನಕವೆಂದರೆ ಕಾನೂನಿನ ಹಿಡಿತ ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತಾ ಹೋಗುತ್ತದೆ ಹಾಗೂ ದೇಶದಲ್ಲಿ ಅರಾಜಕತೆ ಮತ್ತು ನಿರಾಡಳಿತ ಹರಡುತ್ತದೆ. ಈ ಪ್ರವೃತಿ ಇಡೀ ದೇಶಕ್ಕೆ ಮಾರಕವೆಂದು ದೇಶವಾಸಿಗಳಿಗೆ ಮನವರಿಕೆ ಮಾಡಿಸುವ ಅಗತ್ಯವಿದೆ. ಕಾನೂನಿನ ಆಡಳಿತ ಯಾವುದೇ ನಾಗರಿಕ ಸಮಾಜದ ಅತ್ಯಂತ ಪ್ರಮುಖ ಬುನಾದಿಯಾಗಿರುತ್ತದೆ ಹಾಗೂ ಕಾನೂನನ್ನು ಕೈಗೆತ್ತಿಕೊಳ್ಳುವ ಮಾರಕ ಪ್ರವೃತಿಯನ್ನು ವಿರೋಧಿಸುವುದು ಇಡೀ ಸಮಾಜದ ಸಂಯುಕ್ತ ಹೊಣೆಗಾರಿಕೆಯಾಗಿದೆ.
ಸಮಾಜದಲ್ಲಿ ಕೋಮು ಸಾಮರಸ್ಯವನ್ನುಂಟು ಮಾಡಲು ಎಲ್ಲಾ ವರ್ಗಗಳ ಪ್ರಭಾವಿ ವ್ಯಕ್ತಿಗಳನ್ನು ಮುಂದೆ ತರಬೇಕು. ಬುದ್ಧಿಜೀವಿಗಳು, ಸಾಮಾಜಿಕ ಮತ್ತು ಧಾರ್ಮಿಕ ನೇತಾರರು, ಮಹಿಳೆಯರು, ವಿದ್ಯಾರ್ಥಿ ನಾಯಕರು, ಪತ್ರಕರ್ತರು, ವಕೀಲರು ಇವೆಲ್ಲರನ್ನೂ ಸಕ್ರಿಯಗೊಳಿಸಬೇಕಾಗಿದೆ. ಮಾಧ್ಯಮ ಮತ್ತು ಸೋಷಿಯಲ್ ವಿೂಡಿಯಾದಲ್ಲಿಯೂ ಮಾನವ ಆತ್ಮದ ಕದ ತಟ್ಟಬೇಕು ಹಾಗೂ ವಿದ್ವೇಷ, ಉದ್ರೇಕ, ತಪ್ಪುಕಲ್ಪನೆಗಳು ಮತ್ತು ವದಂತಿಗಳ ಪ್ರಸಾರದ ಆಟ ಬೆಂಕಿಯಾಟವೆಂದು ಮನವರಿಕೆ ಮಾಡಿಸಬೇಕು.
ಇಸ್ಲಾಮ್ ಆಚಾರ ಮತ್ತು ವಿಚಾರಗಳ ಸ್ವಾತಂತ್ರ್ಯದ ಪರವಾಗಿದೆ. ಅದು ಧಾರ್ಮಿಕ ಬಲಾತ್ಕಾರ, ಹಿಂಸೆ ಮತ್ತು ಅಸಹಿಷ್ಣುತೆಗಳನ್ನು ವಿರೋಧಿಸುತ್ತದೆ. ಇಸ್ಲಾಮಿನ ದೃಷ್ಟಿಯಲ್ಲಿ ಪ್ರತಿಯೋರ್ವನಿಗೆ ನಂಬಿಕೆ ಮತ್ತು ಧಾರ್ಮಿಕ ಸ್ವಾತಂತ್ರ್ಯವಿದೆ ಹಾಗೂ ಈ ಸ್ವಾತಂತ್ರ್ಯದ ಮೂಲಕ ಅವನ ಪರೀಕ್ಷೆಯೇ ಉದ್ದೇಶವಾಗಿದೆ. ವೈಚಾರಿಕ ಮತ್ತು ಧಾರ್ಮಿಕ ಭಿನ್ನಾಭಿಪ್ರಾಯಗಳ ವಿಷಯಗಳ ಬಗ್ಗೆ ಮುಕ್ತ ವಾತಾವರಣದಲ್ಲಿ ಗಂಭೀರ ಮಾತುಕತೆ ನಡೆಯಬೇಕು. ಈ ಕುರಿತು ಯಾವುದೇ ಬಲಾತ್ಕಾರ, ದೌರ್ಜನ್ಯವೆಸಗಬಾರದೆಂದು ಇಸ್ಲಾಮ್ ಬಯಸುತ್ತದೆ.
ಇಸ್ಲಾಮಿನ ಈ ಶಿಕ್ಷಣಗಳ ಬೆಳಕಿನಲ್ಲಿ ಪಕ್ಷಪಾತ, ಸಂಕುಚಿತ ಮನೋಭಾವ ಮತ್ತು ಧರ್ಮದ ಹೆಸರಿನಲ್ಲಿಯ ಆಕ್ರಮಣಗಳನ್ನು ಜಮಾಅತೆ ಇಸ್ಲಾಮೀ ಹಿಂದ್ ಸದಾ ವಿರೋಧಿಸುತ್ತಾ ಬಂದಿದೆ ಹಾಗೂ ದೇಶದಿಂದ ಈ ಕೆಡುಕುಗಳನ್ನು ದೂರೀಕರಿಸಲು ಸದಾ ಶ್ರಮಿಸುತ್ತಾ ಬಂದಿದೆ. ಪ್ರಸಕ್ತ ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ಒಂದು ಅಭಿಯಾನದ ರೂಪದಲ್ಲಿ ಈ ಕಾರ್ಯವನ್ನು ನಿರ್ವಹಿಸಲು ಮತ್ತು ದೇಶವಾಸಿಗಳಿಗೆ ಶಾಂತಿ ಮತ್ತು ಮಾನವೀಯತೆಯ ಸಂದೇಶ ತಲುಪಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಆದ್ದರಿಂದ ‘ಶಾಂತಿ ಮತ್ತು ಮಾನವೀಯತೆ’ ಅಭಿಯಾನವು ಇಡೀ ದೇಶದಲ್ಲಿ ಆಗಸ್ಟ್ 21ರಿಂದ ಸೆಪ್ಟಂಬರ್ 4ರ ವರೆಗೆ ನಡೆಸಲಾಗುವುದು. ಇದು ಸಾಮಾನ್ಯ ಸ್ವರೂಪದ ಜಾಗೃತಿ ಅಭಿಯಾನವಲ್ಲ. ಬದಲಾಗಿ ಇದರ ಗುರಿ ಸಮಾಜದಲ್ಲಿ ನೈಜ ಮತ್ತು ಅನುಭವಿಸಬಹುದಾದ ಬದಲಾವಣೆಯನ್ನು ತರುವುದಾಗಿದೆ. ದೇಶದ ಆತ್ಮವನ್ನು ಅಭಿಸಂಬೋಧಿಸುವುದು ಮತ್ತು ಅದನ್ನು ಜಾಗೃತಗೊಳಿಸುವುದು ಅಭಿಯಾನದ ಗುರಿಯಾಗಿದೆ. ಆದರೆ ಇದಕ್ಕಿಂತಲೂ ಹೆಚ್ಚಾಗಿ ಕೇಂದ್ರದಿಂದ ಸ್ಥಾನೀಯ ಮಟ್ಟದ ವರೆಗೆ ಶಾಶ್ವತ ಸಂಸ್ಥೆಗಳನ್ನು ಸ್ಥಾಪಿಸುವ ದಿಕ್ಕಿನಲ್ಲಿ ಪ್ರಯತ್ನ ಆರಂಭವಾಗಬೇಕು ಹಾಗು ಈ ವಿಪತ್ತನ್ನು ಶಾಶ್ವತವಾಗಿ ಎದುರಿಸಲು ಸಹಕಾರಿಯಾಗಬಲ್ಲ ಇಂತಹ ಪರಂಪರೆಯು ಉಳಿಯಬೇಕೆಂಬುದು ಅಭಿಯಾನದ ಗುರಿಯಾಗಿದೆ. ಅಭಿಯಾನದ ಕಾರ್ಯಕ್ರಮಗಳಲ್ಲಿ ಈ ವಿಷಯಗಳನ್ನು ಗಮನದಲ್ಲಿರಿಸಲಾಗಿದೆ. ಕಾರ್ಯಕ್ರಮಗಳಲ್ಲಿ ನೀಡಿರುವ ಅಪೇಕ್ಷಿತ ಪರಿಣಾಮಗಳ ಪಟ್ಟಿಯೇ ಅಭಿಯಾನದ ನೈಜ ಗುರಿ. ಅಭಿಯಾನವು ಇವುಗಳೊಂದಿಗೆ ಕೊನೆಗೊಳ್ಳುವಂತೆ ನಾವು ಪ್ರಯತ್ನಿಸುವೆವು. ಇದಕ್ಕಾಗಿ ದೊಡ್ಡ ಕಾರ್ಯಕ್ರಮ ಮತ್ತು ಮಾಧ್ಯಮ ಪ್ರಚಾರಕ್ಕಿಂತ ಈ ನೈಜ ಪರಿಣಾಮಗಳನ್ನು ಗಳಿಸಲು ಹೆಚ್ಚು ಒತ್ತು ನೀಡಲಾಗುವುದು. ಈ ನೈಜ ಪರಿಣಾಮಗಳನ್ನು ಕಾರ್ಯಕ್ರಮದಲ್ಲಿ ಗುರುತಿಸಲಾಗಿದೆ. ಇದು ಸೂಕ್ಷ್ಮ ಸಮಸ್ಯೆ. ಈ ಅಭಿಯಾನವು ಈ ಬಗ್ಗೆ ಪ್ರಬಲವಾಗಿ ಮಾತಾಡಲಿದೆ. ದೇಶವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಸರ್ವಸಾಧ್ಯ ಪ್ರಯತ್ನಗಳನ್ನು ನಡೆಸಲಿದೆ. ನಿಮ್ಮೆಲ್ಲರ ಸಹಕಾರ ಇರಲಿ.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ

ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...